ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಶಾಲೆ ಪುನಾರಂಭ: ವಿದ್ಯಾರ್ಥಿನಿ, ಶಿಕ್ಷಕಿಯರಿಗೆ ಪ್ರವೇಶವಿಲ್ಲ!

|
Google Oneindia Kannada News

ಕಾಬೂಲ್, ಸಪ್ಟೆಂಬರ್ 17: ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿರುವ ತಾಲಿಬಾನ್ ಶಾಲೆಗಳ ಪುನಾರಂಭದ ಬಗ್ಗೆ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 18ರ ಶನಿವಾರದಿಂದ 6ನೇ ತರಗತಿಯಿಂದ 12ನೇ ತರಗತಿವರೆಗೂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು(ಗಂಡು ಮಕ್ಕಳು) ಶಾಲೆಗೆ ಹಾಜರಾಗುವಂತೆ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಗಂಡು ವಿದ್ಯಾರ್ಥಿಗಳು ಹಾಗೂ ಪುರುಷ ಶಿಕ್ಷಕರು ಶನಿವಾರದಿಂದಲೇ ಶಾಲೆಗಳಿಗೆ ಆಗಮಿಸಬೇಕು ಎಂದು ಸರ್ಕಾರವು ಸೂಚನೆ ನೀಡಿದೆ.

ಫೇಸ್‌ಬುಕ್‌ನಲ್ಲಿ ಶುಕ್ರವಾರ ಪ್ರಕಟವಾದ ಹೇಳಿಕೆಯು ಆ ವಯಸ್ಸಿನ ಹುಡುಗಿಯರನ್ನು ಒಳಗೊಂಡಿಲ್ಲ, ಮತ್ತು ಮಾರ್ಗದರ್ಶನದ ಕೊರತೆಯು ತಾಲಿಬಾನ್ ಹುಡುಗಿಯರು ಮತ್ತು ಮಹಿಳೆಯರ ಮೇಲೆ ನಿರ್ಬಂಧಗಳನ್ನು ವಿಧಿಸಬಹುದು ಎಂಬುದನ್ನು ಎತ್ತಿ ತೋರಿಸುವಂತಿದೆ. ತಾಲಿಬಾನ್ ಈ ಹಿಂದೆ ಒಂದರಿಂದ ಆರನೇ ತರಗತಿಯ ಹುಡುಗಿಯರಿಗೆ ತರಗತಿಗಳನ್ನು ಪುನರಾರಂಭಿಸಲು ಅವಕಾಶ ನೀಡಿತ್ತು.

'ಯಾವುದೇ ಪಿಎಚ್‌ಡಿ, ಡಿಗ್ರಿ ಮೌಲ್ಯಯುತವಲ್ಲ': ತಾಲಿಬಾನ್‌ ನೂತನ ಶಿಕ್ಷಣ ಸಚಿವ'ಯಾವುದೇ ಪಿಎಚ್‌ಡಿ, ಡಿಗ್ರಿ ಮೌಲ್ಯಯುತವಲ್ಲ': ತಾಲಿಬಾನ್‌ ನೂತನ ಶಿಕ್ಷಣ ಸಚಿವ

ಕಳೆದ ತಿಂಗಳು ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಕಠಿಣ ಗುಂಪು ಗುಂಪು ಹುಡುಗಿಯರು ಮತ್ತು ಮಹಿಳೆಯರಿಗೆ ಶಾಲೆ ಮತ್ತು ಕೆಲಸಕ್ಕೆ ಹಾಜರಾಗುವುದನ್ನು ನಿಷೇಧಿಸಿತ್ತು. ಕೆಲವು ಪ್ರಾಂತ್ಯಗಳಲ್ಲಿ, ಆರೋಗ್ಯ ಇಲಾಖೆಗಳು, ಆಸ್ಪತ್ರೆಗಳು ಮತ್ತು ಶಿಕ್ಷಣದಲ್ಲಿ ಕೆಲಸ ಮಾಡಿದ ಮಹಿಳೆಯರನ್ನು ಹೊರತುಪಡಿಸಿ, ಮಹಿಳೆಯರಿಗೆ ತಮ್ಮ ಕೆಲಸವನ್ನು ಮುಂದುವರಿಸಲು ಇನ್ನೂ ಅವಕಾಶವಿಲ್ಲ.

School Restarts in Afghanistan: Taliban orders male students, teachers to return to school from Saturday

ಪರದೆ ಆಚೆ-ಈಚೆ ನೋಡುವಂತಿಲ್ಲ:

ಅಫ್ಘಾನಿಸ್ತಾನದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳನ್ನು ಪುನಾರಂಭಗೊಳಿಸುವಂತೆ ಕಳೆದ ಶನಿವಾರ ತಾಲಿಬಾನ್ ಆದೇಶ ಹೊರಡಿಸಿತ್ತು. ಈ ಬಗ್ಗೆ ನೀಡಿರುವ ಆದೇಶದಲ್ಲಿ ವಿದ್ಯಾರ್ಥಿನಿಗಳು ಯಾವ ರೀತಿ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಉಲ್ಲೇಖಿಸಲಾಗಿತ್ತು. ಅದರಿಂತೆ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ತಮ್ಮ ಮುಖ ಕಾಣಿಸದಂತೆ ಸಂಪೂರ್ಣವಾಗಿ(ನಿಖಾಬ್ ಧರಿಸುವುದು ಕಡ್ಡಾಯ) ಮುಚ್ಚಿಕೊಳ್ಳುವುದು. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವುದು ಇಲ್ಲದಿದ್ದರೆ, ಒಂದೇ ಕೊಠಡಿಯಲ್ಲಿ ಇಬ್ಬರ ಮಧ್ಯೆ ಪರದೆಗಳನ್ನು ಹಾಕಿರುವ ಫೋಟೋಗಳು ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂಬುದನ್ನು ಸಾರಿ ಹೇಳುತ್ತಿವೆ.

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಕಡ್ಡಾಯವಾಗಿ ಬುರ್ಖಾ ಧರಿಸಬೇಕು ಎಂಬುದರ ಬಗ್ಗೆ ಇದುವರೆಗೂ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಆದರೆ ನಿಖಾಬ್ ಅನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಕಣ್ಣುಗಳನ್ನು ಹೊರತುಪಡಿಸಿದಂತೆ ಸಂಪೂರ್ಣ ಮುಖ ಕಾಣದ ರೀತಿಯಲ್ಲಿ ಬಟ್ಟೆಯನ್ನು ಧರಿಸಬೇಕು.

ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಒಟ್ಟುಗೂಡುವಂತಿಲ್ಲ:

ಕಾಲೇಜುಗಳಲ್ಲಿ ಕೊಠಡಿ ಪ್ರವೇಶಿಸುವುದಕ್ಕೆ ಮತ್ತು ನಿರ್ಗಮಿಸುವುದಕ್ಕೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ದ್ವಾರಗಳು ಇರಬೇಕು. ಯುವಕರು ಮತ್ತು ಯುವತಿಯರು ಒಟ್ಟಾಗಿ ಸೇರುವುದನ್ನು ತಡೆಯುವ ಉದ್ದೇಶದಿಂದ ಯುವಕರಿಗಿಂತ ಐದು ನಿಮಿಷ ಮೊದಲೇ ಯುವತಿಯರು ಕೊಠಡಿಗಳಿಂದ ಹೊರಹೋಗಬೇಕು. ತದನಂತರ ಯುವಕರು ಕಾಲೇಜಿನಿಂದ ಹೊರಗೆ ಹೋಗುವವರೆಗೆ ಕಾಯುವ ಕೊಠಡಿಗಳಲ್ಲಿ ಇರಬೇಕು.

"ಇದು ತೀರಾ ಕಷ್ಟಕರ ಯೋಜನೆಯಾಗಿದೆ. ಹುಡುಗಿಯರು ಮತ್ತು ಹುಡುಗರನ್ನು ಪ್ರತ್ಯೇಕವಾಗಿರಿಸಲು ನಮ್ಮಲ್ಲಿ ಸಾಕಷ್ಟು ಮಹಿಳಾ ಬೋಧಕರು ಅಥವಾ ತರಗತಿಗಳು ಇಲ್ಲ. ಆದರೆ ಅವರು ಹೆಣ್ಣುಮಕ್ಕಳಿಗೆ ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗೆ ಹೋಗಲು ಅವಕಾಶ ನೀಡುತ್ತಿರುವುದೇ ಒಂದು ವಿಷಯವಾಗಿದೆ," ಎಂದು ಖಾಸಗಿ ವಿಶ್ವವಿದ್ಯಾಲಯದ ಹೆಸರು ಹೇಳಲು ಇಚ್ಛಿಸದ ಪ್ರಾಧ್ಯಾಪಕರೊಬ್ಬರು ಹೇಳಿರುವುದಾಗಿ ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಈಗಾಗಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಹುಡುಗರು ಮತ್ತು ಹುಡುಗಿಯರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿ ಬೋಧನೆ ಮಾಡಲಾಗುತ್ತಿದೆ.

ಅಫ್ಘಾನ್ ನೆಲದಲ್ಲಿ ಮಹಿಳೆಯರಿಗೆ ಮತ್ತೆ ಅಪಾಯ:

ಅಫ್ಘಾನಿಸ್ತಾನದ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. ಹೊಸ ಸರ್ಕಾರದಲ್ಲಿ ಮಹಿಳೆಯರಿಗೂ ವಿಶೇಷ ಪಾತ್ರವನ್ನು ನೀಡಬೇಕು ಎಂಬ ಬಗ್ಗೆ ತಾಲಿಬಾನ್ ಯೋಜಿಸುವುದಿಲ್ಲ. ದೇಶಾದ್ಯಂತ ಪ್ರಮುಖ ಮಹಿಳೆಯರು ತಮ್ಮ ಸುರಕ್ಷತೆ ಭಯದಲ್ಲೇ ಹೆದರಿ ಕುಳಿತುಕೊಂಡಿದ್ದಾರೆ. 1996 ರಿಂದ 2001 ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ಕಠಿಣ ಷರಿಯಾ ಅಥವಾ ಇಸ್ಲಾಮಿಕ್ ಕಾನೂನನ್ನು ಕಟ್ಟುನಿಟ್ಟಾಗಿ ಇನ್ನು ಕೆಲವೊಮ್ಮೆ ಕ್ರೂರವಾಗಿ ಜಾರಿಗೊಳಿಸಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಮಹಿಳೆಯರು ಕೆಲಸಕ್ಕೆ ಹೋಗುವಂತಿಲ್ಲ ಹಾಗೂ ಹುಡುಗಿಯರಿಗೆ ಶಾಲಾ-ಕಾಲೇಜುಗಳಿಗೆ ಹಾಜರಾಗುವುದಕ್ಕೆ ಯಾವುದೇ ರೀತಿ ಅನುಮತಿ ಇರುವುದಿಲ್ಲ. ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ಒಬ್ಬ ಪುರುಷ ಸಂಬಂಧಿಯ ಜೊತೆಗಿರಬೇಕು. ಈ ನಿಯಮ ಉಲ್ಲಂಘಿಸಿದರೆ ತಾಲಿಬಾನ್ ಧಾರ್ಮಿಕ ಪೊಲೀಸರಿಂದ ಅವಮಾನ ಮತ್ತು ಸಾರ್ವಜನಿಕವಾಗಿ ಏಟು ನೀಡಲಾಗುತ್ತದೆ.

ಷರಿಯಾ ಕಾನೂನುಗಳ ಬಗ್ಗೆ ಜನರಲ್ಲಿ ಏಕೆ ಭಯ:

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಈ ಹಿಂದೆ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ಷರಿಯಾ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಸಾರ್ವಜನಿಕರ ಮರಣ ದಂಡನೆ, ಕೋಲುಗಳಿಂದ ಬಲವಾಗಿ ಹೊಡೆಯುವುದು, ಕೈ-ಕಾಲುಗಳನ್ನು ಛಿದ್ರಗೊಳಿಸುವುದು, ಹೀಗೆ ಒಂದಕ್ಕಿಂತ ಒಂದು ಶಿಕ್ಷೆಯ ವಿಧಾನ ಘೋರವಾಗಿತ್ತು. ಜನರನ್ನು ತಿದ್ದುವುದಕ್ಕಾಗಿ ಇರುವ ಇಸ್ಲಾಮಿಕ್ ಕಾನೂನುಗಳನ್ನು ಉಲ್ಲಂಘಿಸಿ ಅತಿರೇಕದ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಚಿಕ್ಕದಾಗಿ ಗಡ್ಡ ಬಿಟ್ಟ ಪುರುಷರಿಗೆ ಶಿಕ್ಷೆ ನೀಡುವುದು ಒಂದು ವಿಧಾನವಾಗಿತ್ತು. ಆದರೆ ಮಹಿಳೆಯರಿಗೆ ತೀರಾ ಮುಜುಗರ ಉಂಟು ಮಾಡುವಂತಾ ಶಿಕ್ಷೆಗಳನ್ನು ಈ ಕಾನೂನುಗಳಡಿಯಲ್ಲಿ ನೀಡಲಾಗುತ್ತಿತ್ತು. ಮಹಿಳೆಯರು ಧರಿಸುವ ಬಟ್ಟೆಯಿಂದ ಹಿಡಿದು ನಡವಳಿಕೆವರೆಗೂ ಪ್ರತಿಯೊಂದಕ್ಕೂ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಹಿಂಸೆ ನೀಡಲಾಗುತ್ತಿತ್ತು.

ಷರಿಯಾ ಕಾನೂನುಗಳು ಎಂದರೇನು?:

ಷರಿಯಾ ಕಾನೂನು ಎಂಬುದರ ಅರ್ಥ? ಇಸ್ಲಾಮಿಕ್ ಕಾನೂನುಗಳಿಗೆ ಸಮಾನಾರ್ಥವಾಗಿ ಈ ಷರಿಯಾ ಕಾನೂನುಗಳನ್ನು ಗುರುತಿಸಲಾಗುತ್ತದೆ. ಷರಿಯಾ ನಿಜವಾಗಿಯೂ ಲಿಖಿತ ನಿಯಮಗಳ ಸಂಹಿತೆಯಲ್ಲ, ಬದಲಾಗಿ ಹಲವು ಮೂಲಗಳಿಂದ ಪಡೆದ ನಿಯಮಗಳ ಒಂದು ಅಂಗವಾಗಿದೆ. ಅವುಗಳ ಪೈಕಿ ಪ್ರಮುಖವಾಗಿರುವುದೇ ಕುರಾನ್. ಇದರ ಹೊರತಾಗಿ ಇಸ್ಲಾಂನ ಪವಿತ್ರ ಗ್ರಂಥಗಳು, ಹಾಗೂ ಹದೀಸ್ ಎಂದು ಕರೆಯಲ್ಪಡುವ ಪ್ರವಾದಿ ಮೊಹಮ್ಮದ್ ಅವರ ಜೀವನ, ಬೋಧನೆಗಳು ಮತ್ತು ಅಭ್ಯಾಸಗಳನ್ನು ಸಾರಿ ಹೇಳುವ ಸಾಕ್ಷ್ಯಚಿತ್ರಗಳಿವೆ. ಅರೇಬಿಕ್ 'ಷರಿಯಾ' ಕಟ್ಟುನಿಟ್ಟಾದ ಕಾನೂನು ಸಂಹಿತೆಗಿಂತ ಅನುಸರಿಸಬೇಕಾದ ಮಾರ್ಗಗಳನ್ನು ಸೂಚಿಸುತ್ತದೆ. ಇದು ಧರ್ಮವನ್ನು ಹೇಗೆ ಪಾಲಿಸುವುದು, ನಡವಳಿಕೆ ಮತ್ತು ನಿಯಮಗಳ ಜೊತೆಗೆ ಕಾನೂನು ವಿಷಯಗಳನ್ನೂ ಒಳಗೊಂಡಿರುತ್ತದೆ. ಇದರ ಹೊರತಾಗಿ ಷರಿಯಾ ಕಾನೂನುಗಳು ಹೇಗೆ ರೂಪಗೊಂಡವು ಎಂಬುದನ್ನು ನಿರ್ಧರಿಸುವುದಕ್ಕೆ ಇನ್ನೂ ಎರಡು ಅಂಶಗಳಿವೆ. "ಒಂದು ವಿಶ್ಲೇಷಣೆ ಆಧಾರಿತ 'ಕಿಯಾಸ್' ಆದರೆ, ಎರಡು ನ್ಯಾಯಸಮ್ಮತವಾದ 'ಇಜ್ಮಾ' ಆಗಿದೆ.

English summary
School Restarts in Afghanistan: Taliban Govt orders male students, teachers to return to school from Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X