• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಸ್ಲೀಮರ ಪವಿತ್ರ ಕ್ಷೇತ್ರ ಮೆಕ್ಕಾ-ಮದೀನಾ ಭೇಟಿಗೆ ತಾತ್ಕಾಲಿಕ ನಿಷೇಧ

|

ರಿಯಾದ್, ಫೆಬ್ರವರಿ 27: ಮುಸ್ಲೀಮರ ಪವಿತ್ರ ಕ್ಷೇತ್ರ ಮೆಕ್ಕಾ-ಮದೀನಾ ಭೇಟಿಯನ್ನು ಸೌದಿ ಅರೆಬಿಯಾ ತಾತ್ಕಾಲಿಕವಾಗಿ ರದ್ದು ಪಡಿಸಿದೆ. ಈ ದಿನದಿಂದಲೇ ಆದೇಶ ಜಾರಿಯಾಗಲಿದೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಗರು ಮೆಕ್ಕಾ-ಮದೀನಾ ಭೇಟಿ ನೀಡದಂತೆ ಸೌದಿ ಅರೆಬಿಯಾ ಆದೇಶ ಹೊರಡಿಸಿದೆ. ಈ ರದ್ದತಿ ತಾತ್ಕಾಲಿಕವಾಗಿದೆ.

ಕೊರೊನಾ ವೈರಸ್: ಚೀನಾ, ಜಪಾನ್‌ನಿಂದ ಭಾರತೀಯರು ವಾಪಸ್

ಸೌದಿ ಅರೆಬಿಯಾದ ವಿದೇಶಾಂಗ ಇಲಾಖೆ ಈ ಆದೇಶ ಹೊರಡಿಸಿದ್ದು, ಪ್ರವಾಸಿಗರು ಮೆಕ್ಕಾ-ಮದೀನಾ ಭೇಟಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದ್ದು, ಎಷ್ಟು ಅವಧಿಯವರೆಗೆ ನಿರ್ಬಂಧ ಇರಲಿದೆ ಎಂಬುದರ ಮಾಹಿತಿ ನೀಡಿಲ್ಲ.

ಮೆಕ್ಕಾ-ಮದೀನಾ ಮುಸ್ಲೀಮರ ಪವಿತ್ರ ಕ್ಷೇತ್ರವಾಗಿದ್ದು, ವಿಶ್ವದ ಹಲವು ರಾಷ್ಟ್ರಗಳಿಂದ ಕೋಟ್ಯಾಂತರ ಜನ ಮುಸ್ಲೀಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಕೊರೊನಾ ವೈರಸ್ ಭೀತಿಯ ಕಾರಣದಿಂದಾಗಿ ಸೌದಿ ಅರೆಬಿಯಾ ಪ್ರವಾಸಿಗರ ಭೇಟಿಗೆ ನಿಷೇಧ ಹೇರಿದೆ.

ಭಾರತದಿಂದಲೂ ಪ್ರತಿದಿನ ಸರಾಸರಿ 4000 ಮಂದಿ ಮೆಕ್ಕಾ-ಮದೀನಾ ಭೇಟಿಗೆ ತೆರಳುತ್ತಾರೆ. ವಿಶ್ವದ ಹಲವು ರಾಷ್ಟ್ರಗಳಿಂದ ಪ್ರತಿದಿನ ಕೋಟ್ಯಂತರ ಮಂದಿ ಮೆಕ್ಕಾ ಮದೀನಾಕ್ಕೆ ಭೇಟಿ ನೀಡುತ್ತಾರೆ.

ಪಾಕಿಸ್ತಾನಕ್ಕೆ ಕಾಲಿಟ್ಟ ಕೊರೊನಾ; 2 ಪ್ರಕರಣಗಳು ಪತ್ತೆ

ಸೌದಿ ಅರೆಬಿಯಾಕ್ಕೆ ಪ್ರವಾಸಿ ವೀಸಾ ಹಾಗೂ 'ಉಮ್ರಾಹ್ ವೀಸಾ' ಮೇಲೆ ಬರುತ್ತಿರುವವರ ವೀಸಾವನ್ನು ಸೌದಿ ವಿದೇಶಾಂಗ ಇಲಾಖೆ ರದ್ದು ಮಾಡಿದೆ.

ಸೌದಿ ರಾಷ್ಟ್ರಗಳಾದ ಬಹ್ರೇನ್, ಕುವೈತ್, ಓಮನ್, ಲೆಬನಾನ್, ಇರಾಖ್ ಮುಂತಾದುವುಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಕಾರಣ ಸೌದಿ ಅರೆಬಿಯಾ ಈ ನಿರ್ಧಾರ ತಳೆದಿದೆ.

English summary
Saudi Arabia suspends Mecca Madina visit for foreign pilgrims due to coronavirus. Saudi said this suspension is temrory time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X