ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಪತ್ರಕರ್ತನ ನಾಪತ್ತೆಯ ರಹಸ್ಯ ಭೇದಿಸೀತೇ ಒಂದು ವಾಚ್?

|
Google Oneindia Kannada News

ಇಸ್ತಾಂಬುಲ್, ಅಕ್ಟೋಬರ್ 13: ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ ಸೌದಿ ಅರೆಬಿಯಾ ಪತ್ರಕರ್ತ ಜಮಲ್ ಕಶೋಗಿ ನಾಪತ್ತೆ ಪ್ರಕರಣ ದಿನೇ ದಿನೇ ರೋಚಕ ತಿರುವು ಪಡೆಯುತ್ತಿದೆ.

ತನ್ನ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಟರ್ಕಿ ರಾಜಧಾನಿ ಇಸ್ತಾಂಬುಲ್ ನಲ್ಲಿರುವ ಸೌದಿ ಅರೇಬಿಯಾದ ರಾಯಬಾರ ಕಚೇರಿಗೆ ತೆರಳಿದ್ದ ಕಶೋಗಿ ನಂತರ ಪತ್ತೆಯೇ ಆಗಿಲ್ಲ!

ಮೈಸೂರು ದಸರಾ - ವಿಶೇಷ ಪುರವಣಿ

'ಅವರ ಕೊಲೆಯಾಗಿದ್ದಾರಾ? ಎಂಬ ಅನುಮಾನವಿದೆ. ಅವರು ರಾಯಬಾರ ಕಚೇರಿಯ ಒಳಹೊಕ್ಕನಂತರ ನಡೆದ ಘಟನೆಗಳ ಧ್ವನಿ ಮುದ್ರಣ ಲಭ್ಯವಾಗಿದೆಯಾ? ಅವರು ಕೈಗೆ ಕಟ್ಟಿದ್ದ apple ವಾಚ್ ನಲ್ಲಿ ಅವರಿಗೆ ಕೊನೆಯ ಕ್ಷಣದಲ್ಲಿ ನೀಡಿದ ಹಿಂಸೆ ಮತ್ತು ಅವರ ಸಾವಿನ ಕುರಿತ ದಾಖಲೆಗಳಿವೆ' ಎಂದು ಟರ್ಕಿಯ ದಿನಪತ್ರಿಕೆಯೊಂದು ವರದಿ ಮಾಡಿದೆ.

ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ! ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!

ಇದರಿಂದಾಗಿ ಖಶೋಗಿ ಅವರ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವ ಸಿಕ್ಕಂತಾಗಿದೆ.

ಏನಿದು ಘಟನೆ?

ಏನಿದು ಘಟನೆ?

ಅಕ್ಟೋಬರ್ 2ರಂದು ಟರ್ಕಿ ಮೂಲದ ಪತ್ನಿ ಹಾಟಿಸ್ ಸೆಂಗಿಜ್ ಅವರೊಂದಿಗಿನ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಟರ್ಕಿಯ ರಾಜಧಾನಿ ಇಸ್ತಾಂಬುಲ್ ನಲ್ಲಿರುವ ಸೌದಿ ಅರೆಬಿಯಾದ ರಾಯಭಾರ ಕಚೇರಿಗೆ ತೆರಳಿದ್ದ ಖಶೋಗಿ ಎಷ್ಟು ಹೊತ್ತಾದರೂ ಹೊರಬರಲೇ ಇಲ್ಲ! ಆದರೆ ಅವರು ರಾಯಬಾರ ಕಚೇರಿಗೆ ತೆರಳಿದ ನಂತರದ ಒಂದೂವರೆ ಗಂಟೆಯ ನಂತರ ರಾಯಬಾರ ಕಚೇರಿಯ ಲೈಸೆನ್ಸ್ ಹೊತ್ತ ಕೆಲವು ಕಾರುಗಳು ಅಲ್ಲಿಂದ ವೇಗವಾಗಿ ತೆರಳಿದವು. ಖಶೋಗಿ ಅವರನ್ನು ರಾಯಭಾರ ಕಚೇರಿಯ ಒಳಗೇ ಕೊಂದು, ಅವರ ದೇಹಗಳನ್ನು ಬಿಡಭಾಗಗಳಾಗಿ ಕತ್ತರಿಸಿ, ಬ್ಯಾಗಿನಲ್ಲಿ ತುಂಬಿ ಕಳಿಸಲಾಯಿತೇ ಎಂಬ ಅನುಮಾನ ದಟ್ಟವಾಗಿದೆ.

ಕೊನೆಗೂ ಬಯಲಾಯಿತು ಗಂಜಿಮಠ ಮಹಮ್ಮದ್‌ ಸಮೀರ್ ಕೊಲೆ ರಹಸ್ಯ ಕೊನೆಗೂ ಬಯಲಾಯಿತು ಗಂಜಿಮಠ ಮಹಮ್ಮದ್‌ ಸಮೀರ್ ಕೊಲೆ ರಹಸ್ಯ

ವಾಚಿನಲ್ಲಿ ಧ್ವನಿ ಮುದ್ರಣ?

ವಾಚಿನಲ್ಲಿ ಧ್ವನಿ ಮುದ್ರಣ?

ಆಧುನಿಕ ತಂತ್ರಜ್ಞಾನದ apple ವಾಚ್ ಅನ್ನು ಕಟ್ಟಿದ್ದ ಖಶೋಗಿ, ರಾಯಭಾರ ಕಚೇರಿಗೆ ತೆರಳುವ ಮೊದಲು ತಮ್ಮ ಪತ್ನಿಯ ಬಳಿ ತಮ್ಮ ಫೋನ್ ಅನ್ನು ಕೊಟ್ಟು, ರಾಯಭಾರ ಕಚೇರಿಯೆದುರು ನಿಲ್ಲುವುದಕ್ಕೆ ಹೇಳಿ ಹೋಗಿದ್ದರು. ಆದರೆ ಒಳ ಹೋದ ಪತಿ ಎಷ್ಟು ಹೊತ್ತಾದರೂ ಬರಲಿಲ್ಲ, ದಿನವೇ ಕಳೆದು, ವಾರವೇ ಕಳೆಯಿತು. ಆದರೆ ಖಶೋಗಿ ಕುರಿತು ಯಾವ ಸುಳಿವೂ ಸಿಕ್ಕಿಲ್ಲ. ಈ ನಡುವೆ ಟರ್ಕಿಯ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ ಖಶೋಗಿ ಕೈಯಲ್ಲಿದ್ದ apple ವಾಚ್ ನಲ್ಲಿ ಅವರ ಕೊನೆಯ ಕ್ಷಣದ ಘಟನಾವಳಿಗಳು ಧ್ವನಿಮುದ್ರಣವಾಗಿವೆ. ಅವರನ್ನು ಹಿಂಸಿಸಿ, ಕೊಲ್ಲಲಾಗಿದೆ ಎಂದು ಪತ್ರಿಕೆಯ ವರದಿಯೊಂದು ಹೇಳಿದೆ. ಈ ಧ್ವನಿಮುದ್ರಣದ ಫೈಲ್ ಆಟೊಮೆಟಿಕ್ ಆಗಿ ಅವರ ಫೋನ್ ನಲ್ಲಿ ಸೇವ್ ಆಗಿದೆ ಎಂದು ವರದಿ ಹೇಳಿದೆ.

ದೆಹಲಿ ತ್ರಿವಳಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು: ಮಗನೇ ಕೊಲೆಗಾರ! ದೆಹಲಿ ತ್ರಿವಳಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು: ಮಗನೇ ಕೊಲೆಗಾರ!

ವಾಷಿಂಗ್ಟನ್ ಪೋಸ್ಟ್ ನಲ್ಲಿ ಒಪಿನಿಯನ್ ಎಡಿಟರ್!

ವಾಷಿಂಗ್ಟನ್ ಪೋಸ್ಟ್ ನಲ್ಲಿ ಒಪಿನಿಯನ್ ಎಡಿಟರ್!

ಸೌದಿ ಅರೇಬಿಯಾ ಮದೀನಾದಲ್ಲಿ ಜನಿಸಿದ ಜಮಲ್ ಖಶೋಗಿ ಉಗ್ರ ಒಸಾಮಾ ಬಿನ್ ಲಾಡೆನ್ ರಂಥವರನ್ನೂ ಸಂದರ್ಶನ ಮಾಡಿ ಖ್ಯಾತಿ ಗಳಿಸಿದ್ದರು. ಮೂವತ್ತು ವರ್ಷಗಳಷ್ಟು ದೀರ್ಘ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನುಭವ ಪಡೆದ ಖಶೋಗಿ ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ಸೌಧಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.ಸೌದಿ ರಾಜ ಬಿನ್ ಸಲ್ಮಾನ್ ಅವರ ವಿರುದ್ಧ ಸಾಕಷ್ಟು ಲೇಖನಗಳನ್ನು ಬರೆದು ರಾಜನ ಕೆಂಗಣ್ಣಿಗೂ ಅವರು ಗುರಿಯಾಗಿದ್ದರು. ನಂತರ ಸೌದಿಯನ್ನು ತೊರೆದು ಅಮೆರಿಕಕ್ಕೆ ಬಂದ ಖಶೋಗಿ, ಇಲ್ಲಿನ ವಾಷಿಂಗ್ಟನ್ ಪೋಸ್ಟ್ ನಲ್ಲಿ ಒಪಿನಿಯನ್ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ರಾಯಭಾರ ಕಚೇರಿಯಲ್ಲೇ ಏಕೆ?

ರಾಯಭಾರ ಕಚೇರಿಯಲ್ಲೇ ಏಕೆ?

ಯಾವುದೇ ದೇಶದ ರಾಯಭಾರ ಕಚೇರಿಗೆ ತೆರಳುವ ಮೊದಲು ತನಿಖಾಧಿಕಾರಿಗಳಿಗೆ ಆ ದೇಶದ ಅಧಿಕೃತ ಅನುಮತಿ ಬೇಕು. ಇಲ್ಲವೆಂದರೆ ಪ್ರವೇಶಿಸುವಂತಿಲ್ಲ. ಈ ನಿಯಮವನ್ನೇ ದುರುಪಯೋಗಪಡಿಸಿಕೊಂಡು ಸೌದಿ ಅರೇಬಿಯಾ, ಖಶೋಗಿಯನ್ನು ಕೊಲೆ ಮಾಡಿಸಿತಾ ಎಂಬ ಅನುಮಾನ ಹುಟ್ಟಿದೆ. ಈ ಘಟನೆಗೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ಪತಿಯ ಕುರಿತು ಮಾಹಿತಿ ತಿಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆರವನ್ನು ಖಶೋಗಿ ಪತ್ನಿ ಅಪೇಕ್ಷಿಸಿದ್ದಾರೆ.

English summary
Jamal Khashoggi who is a Saudi journalist missing from Saudi Diplomatic office in Turkie was killed by Some people? His apple watch might be releaving his murder mystery
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X