ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತ ಖಶೋಗ್ಗಿ ಹತ್ಯೆ: ಸೌದಿಯಲ್ಲಿ ಐವರಿಗೆ ಮರಣದಂಡನೆ

|
Google Oneindia Kannada News

ರಿಯಾದ್, ಡಿಸೆಂಬರ್ 23: ಸೌದ ಅರೇಬಿಯಾದ ಪತ್ರಕರ್ತರ ಜಮಾಲ್ ಖಶೋಗ್ಗಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಿಗೆ ಮರಣದಂಡನೆ ಮತ್ತು ಮೂವರಿಗೆ ಒಟ್ಟು 24 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.

ಅಮೆರಿಕದ ನಿವಾಸಿಯಾಗಿದ್ದ ಖಶೋಗ್ಗಿ, ಸೌದಿಯ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಕಟು ಟೀಕಾಕಾರರೂ ಆಗಿದ್ದರು. ಅವರನ್ನು ಇಸ್ತಾನ್‌ಬುಲ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಗೂಢವಾಗಿ ಹತ್ಯೆ ಮಾಡಲಾಗಿತ್ತು.

ಖಶೋಗಿ ಬರ್ಬರ ಹತ್ಯೆ : ಸೌದಿ ಪ್ರಿನ್ಸ್ ಸಲ್ಮಾನ್ ವಿರುದ್ಧ ಪ್ರಬಲ ಸಾಕ್ಷ್ಯ?ಖಶೋಗಿ ಬರ್ಬರ ಹತ್ಯೆ : ಸೌದಿ ಪ್ರಿನ್ಸ್ ಸಲ್ಮಾನ್ ವಿರುದ್ಧ ಪ್ರಬಲ ಸಾಕ್ಷ್ಯ?

2018ರ ಅಕ್ಟೋಬರ್ 2ರಂದು ಖಶೋಗ್ಗಿ ಇಸ್ತಾನ್‌ಬುಲ್‌ನ ಸೌದಿ ರಾಯಭಾರ ಕಚೇರಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ತಮ್ಮ ಮದುವೆಗೂ ಮುನ್ನ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪಡೆದುಕೊಳ್ಳಲು ಅವರು ಅಲ್ಲಿಗೆ ತೆರಳಿದ್ದರು. ಅಲ್ಲಿಂದ ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅವರನ್ನು ಕೊಂದು ಕಟ್ಟಡದಿಂದ ಮೃತದೇಹವನ್ನು ಸಾಗಿಸಲಾಗಿತ್ತು. ಆದರೆ ಮೃತದೇಹ ಮಾತ್ರ ಸಿಕ್ಕಿರಲಿಲ್ಲ.

Saudi Court Sentences Five To Death In Journalist Jamal Khashoggi Killing

ಜಮಾಲ್ ದೇಹವನ್ನು ಆಸಿಡ್ ನಲ್ಲಿ ಮುಳುಗಿಸಿ ಚರಂಡಿಗೆ ಎಸೆಯಲಾಗಿತ್ತು ಜಮಾಲ್ ದೇಹವನ್ನು ಆಸಿಡ್ ನಲ್ಲಿ ಮುಳುಗಿಸಿ ಚರಂಡಿಗೆ ಎಸೆಯಲಾಗಿತ್ತು

ಇದು ಜಗತ್ತಿನಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಸೌದಿ ರಾಜನ ವರ್ಚಸ್ಸಿಗೆ ಹಾನಿಯುಂಟು ಮಾಡಿತ್ತು. ಖಶೋಗ್ಗಿ ಹತ್ಯೆಗೆ ಸೌದಿ ರಾಜನೇ ಆದೇಶ ನೀಡಿದ್ದರು ಎಂದು ಸಿಐಎ ಹಾಗೂ ಪಶ್ಚಿಮದ ಕೆಲವು ದೇಶಗಳು ಆರೋಪಿಸಿದ್ದವು. ಆದರೆ ಸಲ್ಮಾನ್ ಅವರ ಕಚೇರಿ ಇದನ್ನು ನಿರಾಕರಿಸಿತ್ತು. ಬಳಿಕ ಈ ಪ್ರಕರಣದಲ್ಲಿ 11 ಮಂದಿ ವಿರುದ್ಧ ರಿಯಾದ್‌ನಲ್ಲಿ ರಹಸ್ಯ ವಿಚಾರಣೆ ನಡೆದಿತ್ತು. ಅವರಲ್ಲಿ ಐವರಿಗೆ ಸೌದಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ತನಿಖೆಗೆ ಒಳಗಾಗಿದ್ದ ಸೌದಿಯ ರಾಜಮನೆತನದ ಮಾಜಿ ಸಲಹೆಗಾರ ಸೌದ್ ಅಲ್ ಖಹ್ತಾನಿಯನ್ನು ಬಿಡುಗಡೆ ಮಾಡಲಾಗಿದೆ.

English summary
Saudi court sentenced fove ro death and three more to jail terms for 24 years over the killing of Saudi journalist Jamal Khashoggi in Istanbul in 2018 October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X