• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆ. 1 ರಿಂದ ಪ್ರವಾಸಿಗರಿಗೆ ತೆರೆಯಲಿದೆ ಸೌದಿ: ವೀಸಾಕ್ಕೆ ಅರ್ಜಿ ಹಾಕುವುದು ಹೇಗೆ?

|
Google Oneindia Kannada News

ರಿಯಾದ್‌, ಜು. 30: ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಕೋವಿಡ್ -19 ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವುದರಿಂದ, ಸರ್ಕಾರಗಳು ಪ್ರವಾಸಿಗರಿಗೆ ಪ್ರಯಾಣ ನಿಷೇಧವನ್ನು ತೆಗೆದುಹಾಕುತ್ತಿವೆ. ಇತ್ತೀಚೆಗೆ, ಸೌದಿ ಅರೇಬಿಯಾದ ಪ್ರವಾಸೋದ್ಯಮ ಸಚಿವಾಲಯವು ತಮ್ಮ ಗಡಿಗಳನ್ನು ಆಗಸ್ಟ್ 1, 2021 ರಿಂದ ಸಂಪೂರ್ಣವಾಗಿ ಲಸಿಕೆ ಹಾಕಿದ ಪ್ರವಾಸಿಗರಿಗಾಗಿ ಮಾತ್ರ ತೆರೆಯುವುದಾಗಿ ಘೋಷಿಸಿತು.

ಅಧಿಕೃತ ಹೇಳಿಕೆಯಲ್ಲಿ, ಸಚಿವಾಲಯವು, "ಕೋವಿಡ್ -19 ಆರ್‌ಪಿಸಿಆರ್‌ ನೆಗೆಟಿವ್‌ ವರದಿ ಮತ್ತು ಕೋವಿಡ್‌ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಒದಗಿಸಿದ ನಂತರ ಕೋವಿಡ್‌ ಲಸಿಕೆ ಪಡೆದ ಪ್ರವಾಸಿಗರು ಯಾವುದೇ ಕ್ವಾರಂಟೈನ್‌ ನಿರ್ಬಂಧಕ್ಕೆ ಒಳಗಾಗದೆ ಸೌದಿ ಅರೇಬಿಯಾಕ್ಕೆ ಆಗಮಿಸಲು ಅನುಮತಿಸಲಾಗುವುದು, " ಎಂದು ಹೇಳಿದೆ.

 ಭಾರತ ಸೇರಿ 'ಕೆಂಪು ಪಟ್ಟಿ' ದೇಶಕ್ಕೆ ಭೇಟಿ ನೀಡಿದರೆ 3 ವರ್ಷ ಪ್ರಯಾಣ ನಿಷೇಧ: ಸೌದಿ ಅರೇಬಿಯಾ ಭಾರತ ಸೇರಿ 'ಕೆಂಪು ಪಟ್ಟಿ' ದೇಶಕ್ಕೆ ಭೇಟಿ ನೀಡಿದರೆ 3 ವರ್ಷ ಪ್ರಯಾಣ ನಿಷೇಧ: ಸೌದಿ ಅರೇಬಿಯಾ

ಫೈಜರ್ (PFE.N), ಸ್ಟ್ರಾಜೆನೆಕಾ (AZN.L), ಮಾಡರ್ನಾ (MRNA.O) ಮತ್ತು ಜಾನ್ಸನ್ & ಜಾನ್ಸನ್ (JNJ.N) ನ ಕೋವಿಡ್‌ ಲಸಿಕೆ ಡೋಸ್‌ಗಳನ್ನು ಪಡೆದಿರುವ ಎಲ್ಲಾ ಪ್ರವಾಸಿಗರು ಸೌದಿ ಅರೇಬಿಯಾ ದೇಶಕ್ಕೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ಇನ್ನು ಸೌದಿ ಪ್ರೆಸ್ ಏಜೆನ್ಸಿ ವರದಿಯ ಪ್ರಕಾರ, "ಪ್ರವಾಸೋದ್ಯಮ ಸಚಿವಾಲಯವು ವಿದೇಶಿ ಪ್ರವಾಸಿಗರಿಗೆ ರಾಜ್ಯವು ತನ್ನ ಬಾಗಿಲು ತೆರೆಯುತ್ತದೆ. ಹಾಗೆಯೇ ಆಗಸ್ಟ್ 1 ರಿಂದ ಪ್ರವಾಸಿ ವೀಸಾ ಹೊಂದಿರುವವರಿಗೆ ಪ್ರವೇಶವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ."

ಸೌದಿ ಅರೇಬಿಯಾ ಪ್ರವಾಸಿ ವೀಸಾಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ಮಾಹಿತಿ

ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಪ್ರವಾಸಿ ವೀಸಾ ಪಡೆಯಲು, "ಸ್ಪಿರಿಟ್ ಆಫ್ ಸೌದಿ" (visitsaudi.com.) ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಹೊಸ ಪೋರ್ಟಲ್ ಮೂಲಕ ಕೋವಿಡ್‌ ವ್ಯಾಕ್ಸಿನೇಷನ್ ಪ್ರಮಾಣಗಳಿಗೆ ಸಂಬಂಧಿಸಿದ ಡೇಟಾವನ್ನು ನೋಂದಾಯಿಸಿಬೇಕು.

ಇನ್ನು ಸೌದಿ ಪ್ರೆಸ್ ಏಜೆನ್ಸಿಯ ಪ್ರಕಾರ, "ರಾಜ್ಯಕ್ಕೆ ಭೇಟಿ ನೀಡುವವರು ವ್ಯಾಕ್ಸಿನೇಷನ್ ಡೋಸೇಜ್‌ಗೆ ಸಂಬಂಧಿಸಿದ ತಮ್ಮ ಡೇಟಾವನ್ನು ಇದಕ್ಕಾಗಿ ಮೀಸಲಾಗಿರುವ ಹೊಸ ಎಲೆಕ್ಟ್ರಾನಿಕ್‌ ಪೋರ್ಟಲ್ 'muqeem.sa/#/vaccine-registration/home', ನಲ್ಲಿ 'ತವಕ್ಕಲ್ನಾ' ('Tawakkalna') ಅಪ್ಲಿಕೇಶನ್ ಮೂಲಕ ಡೇಟಾ ನೋಂದಾಯಿಸಿಕೊಳ್ಳಬೇಕು. ಇದು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಕಡ್ಡಾಯವಾಗಿದೆ.

ಯಾವ ದೇಶಗಳಲ್ಲಿ ಮಾಸ್ಕ್‌ ಧರಿಸಬೇಕಾಗಿಲ್ಲ? - ಇಲ್ಲಿದೆ ಮಾಹಿತಿಯಾವ ದೇಶಗಳಲ್ಲಿ ಮಾಸ್ಕ್‌ ಧರಿಸಬೇಕಾಗಿಲ್ಲ? - ಇಲ್ಲಿದೆ ಮಾಹಿತಿ

ಇನ್ನು ಸೌದಿ ರಾಯಭಾರ ಕಚೇರಿ ಬಹಿರಂಗಪಡಿಸಿದ ವಿವರಗಳ ಪ್ರಕಾರ, ಪ್ರವಾಸಿಗರು ಇ-ವೀಸಾವನ್ನು (ಆನ್‌ಲೈನ್) ಸೌದಿ ಕಮಿಷನ್ ಫಾರ್ ಟೂರಿಸಂ ಮತ್ತು ನ್ಯಾಷನಲ್ ಹೆರಿಟೇಜ್ ವೆಬ್‌ಸೈಟ್ ಮೂಲಕ ಪಡೆಯಬಹುದು. (Saudi Commission for Tourism and National Heritage website). ಪ್ರವಾಸಿಗರು ಸೌದಿ ಅರೇಬಿಯಾದ ಯಾವುದೇ ಬಂದರುಗಳಿಗೆ ಬಂದ ನಂತರ ವೀಸಾಗಳನ್ನು ವಿವಿಧ ದೇಶಗಳಲ್ಲಿ ಪಡೆಯಬಹುದು.

ಈ ಕೆಳಗಿನ ದೇಶಗಳ ಜನರು ಇ-ವೀಸಾ ಪಡೆಯಬಹುದು:

ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಸೌದಿ ರಾಯಭಾರ ಕಚೇರಿಯ ಪ್ರಕಾರ, ಸುಮಾರು 50 ದೇಶಗಳ ಪ್ರಜೆಗಳು ಸೌದಿ ಅರೇಬಿಯಾಕ್ಕೆ ಇ-ವೀಸಾ ಪಡೆಯಬಹುದು. ಕೆನಡಾ, ಅಮೆರಿಕ, ಬ್ರೂನಿ, ಚೀನಾ, ಹಾಂಗ್ ಕಾಂಗ್, ತೈಪೆ, ಮಕಾವು, ಕಜಕಿಸ್ತಾನ್, ಮಲೇಶಿಯಾ, ಸಿಂಗಾಪುರ, ದಕ್ಷಿಣ ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅಂಡೋರಾ, ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಕ್ರೊಯೇಷಿಯಾ, ಸೈಪ್ರಸ್, ಜೆಕ್ ರಿಪಬ್ಲಿಕ್‌, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಉಕ್ರೇನ್ ಮತ್ತು ಯುನೈಟೆಡ್ ಕಿಂಗ್‌ಡಮ್ ಈ ಎಲ್ಲಾ ದೇಶಗಳು ಸೌದಿ ಅರೇಬಿಯಾಕ್ಕೆ ಇ-ವೀಸಾ ಪಡೆಯಬಹುದಾಗಿದೆ.

ಈ ನಡುವೆ ಸೌದಿ ಅರೇಬಿಯಾದಲ್ಲಿ ಕೋವಿಡ್‌ ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ಕೈಗೊಳ್ಳಲಾಗುವ ಕ್ರಮಗಳು ಕಠಿಣವಾಗುತ್ತಿದೆ. ಕೊರೊನಾವೈರಸ್‌ ಮತ್ತು ಹೊಸ ರೂಪಾಂತರಗಳ ಹರಡುವಿಕೆಯನ್ನು ತಡೆಯುವ ಪ್ರಯತ್ನ ದೇಶ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾವು ರಾಜ್ಯದ 'ಕೆಂಪು ಪಟ್ಟಿಯಲ್ಲಿರುವ' ದೇಶಗಳಿಗೆ ಪ್ರಯಾಣಿಸುವ ನಾಗರಿಕರಿಗೆ ಮೂರು ವರ್ಷಗಳ ಪ್ರಯಾಣ ನಿಷೇಧವನ್ನು ವಿಧಿಸಲಿದೆ ಎಂದು ರಾಜ್ಯ ಸುದ್ದಿ ಸಂಸ್ಥೆ ಎಸ್‌ಪಿಎ ಮಂಗಳವಾರ ತಿಳಿಸಿದೆ.

2020 ರ ಮಾರ್ಚ್ ನಂತರ ಮೊದಲ ಬಾರಿಗೆ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಮೇ ತಿಂಗಳಲ್ಲಿ ವಿದೇಶ ಪ್ರವಾಸ ಮಾಡಲು ಅನುಮತಿ ಪಡೆದ ಕೆಲವು ಸೌದಿ ನಾಗರಿಕರು ಪ್ರಯಾಣ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೆಸರು ಹೇಳಲು ಬಯಸದ ಆಂತರಿಕ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ ಎಂದು ವರದಿ ಹೇಳಿದೆ.

"ಯಾರಾದರೂ ನಿಷೇಧಿತ ದೇಶಕ್ಕೆ ಹೋಗಿದ್ದಾರೆ ಎಂದು ಸಾಬೀತಾದರೆ ಅವರು ಹಿಂದಿರುಗಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಭಾರಿ ದಂಡ ವಿಧಿಸಲಾಗುತ್ತದೆ. ಮೂರು ವರ್ಷಗಳವರೆಗೆ ಪ್ರಯಾಣದಿಂದ ನಿಷೇಧಿಸಲಾಗುವುದು," ಎಂದು ಅಧಿಕಾರಿಗಳು ತಿಳಿಸಿದ್ದರು.

ಅಫ್ಘಾನಿಸ್ತಾನ, ಅರ್ಜೆಂಟೀನಾ, ಬ್ರೆಜಿಲ್, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಲೆಬನಾನ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಟರ್ಕಿ, ವಿಯೆಟ್ನಾಂ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವಾರು ದೇಶಗಳಿಗೆ ಪ್ರಯಾಣಿಸಲು ಅಥವಾ ಸಾಗಲು ಸೌದಿ ಅರೇಬಿಯಾ ನಿಷೇಧಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Saudi Arabia to open for tourists from August 1; check how to apply for visa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X