ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆದವರಿಗಷ್ಟೇ ಮೆಕ್ಕಾ ಭೇಟಿಗೆ ಅವಕಾಶ

|
Google Oneindia Kannada News

ರಿಯಾದ್, ಏಪ್ರಿಲ್ 6: ಮೆಕ್ಕಾ-ಮದೀನಾಗೆ ಭೇಟಿ ನೀಡುವವರು ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಬೇಕು ಎಂದು ಸೌದಿ ಅರೇಬಿಯಾ ಸರ್ಕಾರ ಹೇಳಿದೆ.

ಜಗತ್ತಿನಾದ್ಯಂತ ಮಾರಕ ಕೊರೊನಾ ವೈರಸ್ ಹಾವಳಿ ಮತ್ತೆ ಹೆಚ್ಚಾಗಿರುವಂತೆಯೇ ಇತ್ತ ಸೌದಿ ಅರೇಬಿಯಾ ಸರ್ಕಾರ ಕೋವಿಡ್-19 ಲಸಿಕೆ ಪಡೆದವರಿಗಷ್ಟೇ ಮೆಕ್ಕಾ-ಮದೀನಾ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದಿದೆ.

ಸೌದಿ ಅರೇಬಿಯಾ:ಮೆಕ್ಕಾ ಹೊರತುಪಡಿಸಿ ಉಳಿದೆಲ್ಲಾ ಕಡೆ ಕರ್ಫ್ಯೂ ಸಡಿಲಸೌದಿ ಅರೇಬಿಯಾ:ಮೆಕ್ಕಾ ಹೊರತುಪಡಿಸಿ ಉಳಿದೆಲ್ಲಾ ಕಡೆ ಕರ್ಫ್ಯೂ ಸಡಿಲ

ಸೌದಿ ಅರೇಬಿಯಾದಲ್ಲಿ ಕೋವಿಡ್‌ನಿಂದ ಈವರೆಗೆ 3,93,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು 6,700 ಸಾವು ಸಂಭವಿಸಿದೆ. ಈ ಮಧ್ಯೆ, 50 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಪವಿತ್ರ ರಂಜಾನ್ ತಿಂಗಳಿನಿಂದ ಆರಂಭವಾಗುವ ಮೆಕ್ಕಾ, ಮದೀನಾ ಯಾತ್ರೆ ಸಂದರ್ಭದಲ್ಲಿ ಕೋವಿಡ್ ಸೋಂಕಿನ ಹಾವಳಿ ತಪ್ಪಿಸುವ ಉದ್ದೇಶದಿಂದ ಸೌದಿ ಅರೇಬಿಯಾ ಸರ್ಕಾರ ಕಠಿಣ ನಿಲುವು ತಳೆದಿದೆ.

ಅದರಂತೆ ಮೆಕ್ಕಾ, ಮದೀನಾ ಸೇರಿ ಪವಿತ್ರ ಕ್ಷೇತ್ರಗಳ ಯಾತ್ರೆಗೆ ಕೋವಿಡ್-19 ಲಸಿಕೆ ಹಾಕಿಸಿಕೊಂಡವರು ಮತ್ತು ಪ್ರತಿಕಾಯಗಳನ್ನು ಹೊಂದಿರುವವರಿಗಷ್ಟೇ ಅವಕಾಶ ನೀಡಲಾಗುವುದು ಎಂದು ಹೇಳಿದೆ.

ಕಡಿಮೆ ಯಾತ್ರಾರ್ಥಿಗಳ ಭೇಟಿ

ಕಡಿಮೆ ಯಾತ್ರಾರ್ಥಿಗಳ ಭೇಟಿ

ಇಡೀ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ ವರ್ಷ ಕೊರೊನಾ ಸೋಂಕಿನಿಂದಾಗಿ ಅತಿ ಕಡಿಮೆ ಯಾತ್ರಾರ್ಥಿಗಳು ಭೇಟಿ ನೀಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ (ಯಾತ್ರೆ) ಸಚಿವಾಲಯ ಮಾಹಿತಿ ನೀಡಿದ್ದು, ಕೊರೋನಾ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು ಎಂದು ಹೇಳಿದೆ. ಮೂಲಗಳ ಪ್ರಕಾರ ಸೌದಿ ಅರೇಬಿಯಾದ 10,000 ಮುಸ್ಲಿಂ ನಿವಾಸಿಗಳಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿತ್ತು. ಆದರೆ ಪ್ರತೀ ವರ್ಷ ವಿಶ್ವಾದ್ಯಂತ 2.5 ಮಿಲಿಯನ್ ಮುಸ್ಲಿಮರು ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಕೋವಿಡ್ 19 ಲಸಿಕೆಯ ಎರಡು ಡೋಸ್ ಪಡೆದಿರಬೇಕು

ಕೋವಿಡ್ 19 ಲಸಿಕೆಯ ಎರಡು ಡೋಸ್ ಪಡೆದಿರಬೇಕು

ಕೋವಿಡ್-19 ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವರು, ಮೊದಲ ಡೋಸ್ ಪಡೆದು ಕನಿಷ್ಠ 14 ದಿನ ಪೂರೈಸಿದವರು ಮತ್ತು ಈಗಾಗಲೇ ಕೋವಿಡ್ ಸೋಂಕಿತರಾಗಿ ಗುಣಮುಖರಾದವರನ್ನು ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿದವರು ಎಂದು ಪರಿಗಣಿಸಲಾಗುವುದು ಎಂದು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ (ಯಾತ್ರೆ) ಸಚಿವಾಲಯ ಹೇಳಿದೆ.

ವರ್ಷದ ಕೊನೆಯ ಹಜ್ ಯಾತ್ರೆಗೂ ಇದೇ ನಿಯಮ ಅನ್ವಯವಾಗಲಿದೆಯೇ?

ವರ್ಷದ ಕೊನೆಯ ಹಜ್ ಯಾತ್ರೆಗೂ ಇದೇ ನಿಯಮ ಅನ್ವಯವಾಗಲಿದೆಯೇ?

ಈ ನೂತನ ನಿಯಮವು ರಂಜಾನ್‌ ತಿಂಗಳ ಆರಂಭದಿಂದ ಜಾರಿಗೆ ಬರಲಿದ್ದು, ಎಷ್ಟು ಸಮಯದ ವರೆಗೆ ಅಸ್ತಿತ್ವದಲ್ಲಿರಲಿದೆ ಎಂದು ತಿಳಿಸಿಲ್ಲ. ಅಲ್ಲದೆ ವರ್ಷದ ಕೊನೆಯಲ್ಲಿ ಬರುವ ಹಜ್ ಯಾತ್ರೆಗೂ ಇದೇ ನಿಯಮ ಅನ್ವಯವಾಗಲಿದೆಯೇ ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಿಲ್ಲ.

Recommended Video

Rafale ಯುದ್ಧ ವಿಮಾನದ ಮತ್ತೊಂದು ಕರ್ಮ ಕಾಂಡ ಬಯಲು | Oneindia Kannada
ಪ್ರವಾದಿಗಳ ಮಸೀದಿ ಪ್ರವೇಶಕ್ಕೂ ಇದೇ ನಿಯಮ ಅನ್ವಯ

ಪ್ರವಾದಿಗಳ ಮಸೀದಿ ಪ್ರವೇಶಕ್ಕೂ ಇದೇ ನಿಯಮ ಅನ್ವಯ

ಇಂಥವರಿಗೆ ಮಾತ್ರ ಯಾತ್ರೆ ಕೈಗೊಳ್ಳಲು, ಮೆಕ್ಕಾ ಹಾಗೂ ಮದೀನಾದ ಭವ್ಯ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಮದಿನಾದಲ್ಲಿರುವ ಪ್ರವಾದಿಗಳ ಮಸೀದಿ ಪ್ರವೇಶಿಸಬೇಕಿದ್ದರೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

English summary
Saudi authorities said Monday that only people immunised against COVID-19 will be allowed to perform the year-round Umrah pilgrimage, starting from the holy month of Ramadan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X