ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಸೇರಿ 'ಕೆಂಪು ಪಟ್ಟಿ' ದೇಶಕ್ಕೆ ಭೇಟಿ ನೀಡಿದರೆ 3 ವರ್ಷ ಪ್ರಯಾಣ ನಿಷೇಧ: ಸೌದಿ ಅರೇಬಿಯಾ

|
Google Oneindia Kannada News

ರಿಯಾದ್‌, ಜು.28: ಕೋವಿಡ್‌ ಆರಂಭವಾದ ಬಳಿಕ 2020 ರ ಮಾರ್ಚ್ ನಂತರ ಮೊದಲ ಬಾರಿಗೆ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ವಿದೇಶದಲ್ಲಿ ಪ್ರಯಾಣಿಸಲು ಅನುಮತಿ ಪಡೆದ ಕೆಲವು ಸೌದಿ ನಾಗರಿಕರು ಪ್ರಯಾಣ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಕೊರೊನಾವೈರಸ್‌ ಮತ್ತು ಹೊಸ ರೂಪಾಂತರಗಳ ಹರಡುವಿಕೆಯನ್ನು ತಡೆಯುವ ಪ್ರಯತ್ನ ದೇಶ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾವು ರಾಜ್ಯದ 'ಕೆಂಪು ಪಟ್ಟಿಯಲ್ಲಿರುವ' ದೇಶಗಳಿಗೆ ಪ್ರಯಾಣಿಸುವ ನಾಗರಿಕರಿಗೆ ಮೂರು ವರ್ಷಗಳ ಪ್ರಯಾಣ ನಿಷೇಧವನ್ನು ವಿಧಿಸಲಿದೆ ಎಂದು ರಾಜ್ಯ ಸುದ್ದಿ ಸಂಸ್ಥೆ ಎಸ್‌ಪಿಎ ಮಂಗಳವಾರ ತಿಳಿಸಿದೆ.

2021 ರ ಎಲ್ಲಾ ಹಜ್ ಅರ್ಜಿಗಳು ರದ್ದು: ಭಾರತದ ಹಜ್ ಸಮಿತಿ2021 ರ ಎಲ್ಲಾ ಹಜ್ ಅರ್ಜಿಗಳು ರದ್ದು: ಭಾರತದ ಹಜ್ ಸಮಿತಿ

2020 ರ ಮಾರ್ಚ್ ನಂತರ ಮೊದಲ ಬಾರಿಗೆ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಮೇ ತಿಂಗಳಲ್ಲಿ ವಿದೇಶ ಪ್ರವಾಸ ಮಾಡಲು ಅನುಮತಿ ಪಡೆದ ಕೆಲವು ಸೌದಿ ನಾಗರಿಕರು ಪ್ರಯಾಣ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೆಸರು ಹೇಳಲು ಬಯಸದ ಆಂತರಿಕ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ ಎಂದು ವರದಿ ಹೇಳಿದೆ.

 Saudi Arabia threatens 3-yr travel ban for citizens who visit red list countries, including India

"ಯಾರಾದರೂ ಭಾಗಿಯಾಗಿದ್ದಾರೆಂದು ಸಾಬೀತಾದರೆ ಅವರು ಹಿಂದಿರುಗಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಭಾರಿ ದಂಡ ವಿಧಿಸಲಾಗುತ್ತದೆ. ಮೂರು ವರ್ಷಗಳವರೆಗೆ ಪ್ರಯಾಣದಿಂದ ನಿಷೇಧಿಸಲಾಗುವುದು," ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ತಾನ, ಅರ್ಜೆಂಟೀನಾ, ಬ್ರೆಜಿಲ್, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಲೆಬನಾನ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಟರ್ಕಿ, ವಿಯೆಟ್ನಾಂ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವಾರು ದೇಶಗಳಿಗೆ ಪ್ರಯಾಣಿಸಲು ಅಥವಾ ಸಾಗಲು ಸೌದಿ ಅರೇಬಿಯಾ ನಿಷೇಧಿಸಿದೆ.

ಯಾವ ದೇಶಗಳಲ್ಲಿ ಮಾಸ್ಕ್‌ ಧರಿಸಬೇಕಾಗಿಲ್ಲ? - ಇಲ್ಲಿದೆ ಮಾಹಿತಿಯಾವ ದೇಶಗಳಲ್ಲಿ ಮಾಸ್ಕ್‌ ಧರಿಸಬೇಕಾಗಿಲ್ಲ? - ಇಲ್ಲಿದೆ ಮಾಹಿತಿ

"ನಾಗರಿಕರು ಇನ್ನೂ ನೇರವಾಗಿ ಅಥವಾ ಬೇರೆ ದೇಶದ ಮೂಲಕ ಈ ಕೆಂಪು ಪಟ್ಟಿಯಲ್ಲಿರುವ ದೇಶಕ್ಕೆ ಪ್ರಯಾಣಿಸುವುದು ನಿಷೇಧವಾಗಿದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸದ ಅಥವಾ ಹೊಸ ತಳಿಗಳು ಕಂಡು ಬಂದಿರುವ ದೇಶಗಳಿಗೆ ಪ್ರಯಾಣ ನಿಷೇಧಿಸಲಾಗಿದೆ ಎಂದು ಆಂತರಿಕ ಸಚಿವಾಲಯ ಒತ್ತಿಹೇಳುತ್ತದೆ," ಎಂದು ಅಧಿಕಾರಿ ಹೇಳಿದರು.

ಸುಮಾರು 30 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಅತಿದೊಡ್ಡ ಗಲ್ಫ್ ರಾಜ್ಯವಾದ ಸೌದಿ ಅರೇಬಿಯಾದಲ್ಲಿ ಮಂಗಳವಾರ 1,379 ಹೊಸ ಕೋವಿಡ್‌ ಸೋಂಕು ಪ್ರಕರಣಗಳು ದಾಖಲಾಗಿದೆ. ಒಟ್ಟು 520,774 ಪ್ರಕರಣಗಳು ಮತ್ತು 8,189 ಸಾವುಗಳಿಗೆ ಈ ಕೊರೊನಾ ವೈರಸ್‌ ಸೋಂಕು ಕಾರಣವಾಗಿದೆ. ದೈನಂದಿನ ಸೋಂಕುಗಳು ಜೂನ್ 2020 ರಲ್ಲಿ 4,000 ಕ್ಕಿಂತ ಹೆಚ್ಚಿನ ಮಟ್ಟದಿಂದ ಜನವರಿ ಆರಂಭದಲ್ಲಿ 100 ಕ್ಕಿಂತಲೂ ಕಡಿಮೆಯಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Saudi Arabia will impose a three-year travel ban on citizens travelling to countries on the kingdom's 'red list' under efforts to curb the spread of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X