ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಬರುವಂತಿಲ್ಲ, ಹೋಗುವಂತಿಲ್ಲ: ಪ್ರಯಾಣಕ್ಕೆ ಸೌದಿ ಅರೇಬಿಯಾ ನಿರ್ಬಂಧ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಭಾರತಕ್ಕೆ ತನ್ನಲ್ಲಿಂದ ತೆರಳುವ ಹಾಗೂ ಭಾರತದಿಂದ ತನ್ನ ದೇಶಕ್ಕೆ ಬರುವ ಪ್ರಯಾಣವನ್ನು ಸೌದಿ ಅರೇಬಿಯಾ ನಿರ್ಬಂಧಿಸಿದೆ.

ಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರವು (ಜಿಎಸಿಎ) ಈ ಆದೇಶ ಹೊರಡಿಸಿದೆ. ಭಾರತ ಮಾತ್ರವಲ್ಲದೆ ಬ್ರೆಜಿಲ್ ಹಾಗೂ ಅರ್ಜೆಂಟೈನಾ ದೇಶಗಳೊಂದಿಗೆ ಓಡಾಟಗಳಿಗೂ ಸೌದಿ ನಿರ್ಬಂಧ ವಿಧಿಸಿದೆ. ಇದು ಸೌದಿಗೆ ಪ್ರಯಾಣಿಸಲು ಈಗಾಗಲೇ ಮಾಹಿತಿ ನೀಡಿರುವ, ವಿಮಾನ ಟಿಕೆಟ್ ಕಾಯ್ದಿರಿಸುವವರಿಗೂ ಅನ್ವಯವಾಗಲಿದೆ.

ಹಾಂಗ್ ಕಾಂಗ್, ಚೀನಾಗೆ ಹೋಗುವ ಮುನ್ನ ಎಚ್ಚರ: US ಹೊಸ ನಿಯಮ!ಹಾಂಗ್ ಕಾಂಗ್, ಚೀನಾಗೆ ಹೋಗುವ ಮುನ್ನ ಎಚ್ಚರ: US ಹೊಸ ನಿಯಮ!

ಈ ಸಂಬಂಧ ಜಿಎಸಿಎ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. 'ಸೌದಿ ಅರೇಬಿಯಾವು ಭಾರತ, ಬ್ರೆಜಿಲ್ ಮತ್ತು ಅರ್ಜೆಂಟೈನಾಗಳಿಗೆ ತೆರಳುವ ಮತ್ತು ಅವುಗಳಿಂದ ಆಗಮಿಸುವ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿದೆ. ಸೌದಿಗೆ ಆಗಮಿಸುವ 14 ದಿನಗಳ ಮುಂಚಿನ ಪ್ರಸ್ತಾವನೆಯನ್ನು ನೀಡಿರುವ ಯಾವುದೇ ವ್ಯಕ್ತಿಗೂ ಇದು ಅನ್ವಯವಾಗಲಿದೆ' ಎಂದು ಅದು ತಿಳಿಸಿದೆ.

Saudi Arabia Suspends Travel To And From India, Brazil, Argentina

Recommended Video

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ | Oneindia Kannada

ಸೌದಿ ಅರೇಬಿಯಾದ ಎಲ್ಲ ವಿಮಾನ ನಿಲ್ದಾಣಗಳ ವಿಮಾನ ಸಂಸ್ಥೆಗಳಿಗೂ ಇದರ ಮಾಹಿತಿ ನೀಡಲಾಗಿದೆ. ಈ ಮೂರೂ ದೇಶಗಳಿಂದ ಅಧಿಕೃತ ಸರ್ಕಾರಿ ಆಮಂತ್ರಣ ಹೊಂದಿರುವವರಿಗೆ ಮಾತ್ರವೇ ಸೌದಿಗೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

English summary
Saudi Arabia has suspended travel to and from India, Brazil and Argentina amid spike in coronavirus cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X