ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರರಾಷ್ಟ್ರೀಯ ಗಡಿಯನ್ನು ತೆರೆದ ಸೌದಿ ಅರೇಬಿಯಾ: ವಿಮಾನಯಾನ ಪುನರಾರಂಭ

|
Google Oneindia Kannada News

ರಿಯಾದ್, ಜನವರಿ 03: ಬ್ರಿಟನ್‌ನಲ್ಲಿ ಕಂಡು ಬಂದ ಕೊರೊನಾವೈರಸ್ ಹೊಸ ರೂಪಾಂತರದ ಭಯದಿಂದ ಮುಚ್ಚಿದ್ದ ತನ್ನ ಅಂತರಾಷ್ಟ್ರೀಯ ಗಡಿಯನ್ನು ತೆರೆಯುವುದಾಗಿ ಸೌದಿ ಅರೇಬಿಯಾ ಭಾನುವಾರ ಘೋಷಿಸಿದೆ. ಇದರ ಜೊತೆಗೆ ತನ್ನ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಪುನರಾರಂಭಿಸಿದೆ.

ಅಧಿಕೃತ ಸೌದಿ ಪತ್ರಿಕಾ ಸಂಸ್ಥೆಯ ಪ್ರಕಾರ '' ಕೊರೊನಾವೈರಸ್ ಹೊಸ ರೂಪಾಂತರಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಹಾಕಲು ಸರ್ಕಾರ ಆದೇಶಿಸಿದೆ'' ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

4 ರೀತಿಯ ಕೊರೊನಾವೈರಸ್ ರೂಪಾಂತರ ಜಗತ್ತಿನಲ್ಲಿ ಹರಡುತ್ತಿದೆ: WHO ಎಚ್ಚರಿಕೆ4 ರೀತಿಯ ಕೊರೊನಾವೈರಸ್ ರೂಪಾಂತರ ಜಗತ್ತಿನಲ್ಲಿ ಹರಡುತ್ತಿದೆ: WHO ಎಚ್ಚರಿಕೆ

ಸೌದಿ ಅರೇಬಿಯಾದಲ್ಲಿ ಈವರೆಗೆ 3,63,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 6,200 ಕ್ಕೂ ಹೆಚ್ಚು ಸಾವುಗಳು ಕೂಡ ಇವೆ. ಇದು ಗಲ್ಫ್‌ ರಾಷ್ಟ್ರಗಳಲ್ಲಿ ಅತಿ ಹೆಚ್ಚಿನ ಪ್ರಕರಣ ಹೊಂದಿದ ದೇಶವಾಗಿದ್ದು, ಚೇತರಿಕೆ ಪ್ರಮಾಣದಲ್ಲೂ ಮುಂದಿದೆ.

Saudi Arabia Re-opens Borders And Resumption Of International Flights

ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಡಿಸೆಂಬರ್ 21ರಂದು ಅಂತರರಾಷ್ಟ್ರೀಯ ವಿಮಾನಯಾನ ಮತ್ತು ಗಡಿ ಪ್ರವೇಶ ಮತ್ತು ಬಂದರುಗಳ ಮೂಲಕ ಪ್ರವೇಶವನ್ನು ಸ್ಥಗಿತಗೊಳಿಸಿತು.

ಸೌದಿ ರೀತಿಯಲ್ಲೇ ನಿಷೇಧವನ್ನು ಹೇರಿದ್ದ ಇತರೆ ಕೊಲ್ಲಿ ರಾಷ್ಟ್ರಗಳಾದ ಒಮನ್ ಮತ್ತು ಕುವೈತ್ ಕೂಡ ಇತ್ತೀಚೆಗೆ ನಿರ್ಬಂಧವನ್ನು ಹಿಂಪಡೆದಿದೆ.

English summary
Saudi Arabia on Sunday announced the reopening of borders and the resumption of international flights after a two-week suspension aimed to stem the spread of a new Covid-19 strain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X