• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದ್ವೀಪವಾಗಿ ಬದಲಾಗಲಿದೆ ಕತಾರ್!: ನೆರೆ ದೇಶವನ್ನು ಹಣಿಯಲು ಸೌದಿಯ ಯೋಜನೆ

|

ರಿಯಾದ್, ಸೆಪ್ಟೆಂಬರ್ 4: ಗಲ್ಫ್ ದೇಶಗಳ ನಡುವಣ ರಾಜತಾಂತ್ರಿಕ ಬಿಕ್ಕಟ್ಟಿನ ಉಲ್ಬಣದ ನಡುವೆಯೇ ಸೌದಿ ಸಾಮ್ರಾಜ್ಯವು ನೆರೆಯ ಕತಾರ್‌ ಸುತ್ತಲೂ ಕಾಲುವೆ ಕೊರೆದು ಅದನ್ನು ದ್ವೀಪವನ್ನಾಗಿಸಲು ಯೋಜನೆ ರೂಪಿಸಿದೆ.

ಸೌದಿ ಮುಖ್ಯಭೂಮಿಯಿಂದ ಕತಾರ್ ದ್ವೀಪವನ್ನು ಬೇರ್ಪಡಿಸುವ ಈ ಯೋಜನೆಯು ತೀವ್ರ ಕುತೂಹಲ ಕೆರಳಿಸಿದೆ. ಇದರಿಂದ ಎರಡೂ ರಾಜ್ಯಗಳ ಮಧ್ಯೆ 14 ತಿಂಗಳಿಂದ ಕೆರಳಿರುವ ವಿವಾದ ಮತ್ತೊಂದು ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

ಹಕ್ಕಾನಿ ಸ್ಥಾಪಕ ಜಲಾಲುದ್ದೀನ್ ಸಾವಿನ ಸುದ್ದಿ ಖಚಿತ ಪಡಿಸಿದ ತಾಲಿಬಾನ್

'ಈ ಪ್ರದೇಶದ ಭೌಗೋಳಿಕ ನಕಾಶೆಯನ್ನೇ ಬದಲಿಸುವ ಐತಿಹಾಸಿಕ ಸಾಲ್ವಾ ದ್ವೀಪ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮಾಹಿತಿಯನ್ನು ಪಡೆದುಕೊಳ್ಳಲು ಕಾಯುತ್ತಿದ್ದೇನೆ' ಎಂದು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಹಿರಿಯ ಸಲಹೆಗಾರ ಸೌದ್ ಅಲ್ ಖಹ್ತಾನಿ ಟ್ವೀಟ್ ಮಾಡಿದ್ದಾರೆ.

60 ಕಿಲೋ ಮೀಟರ್‌ ಉದ್ದ

60 ಕಿಲೋ ಮೀಟರ್‌ ಉದ್ದ

ಸೌದಿ ಸಾಮ್ರಾಜ್ಯ ಮತ್ತು ಕತಾರ್ ಗಡಿಯುದ್ದಕ್ಕೂ 60 ಕಿಲೋ ಮೀಟರ್‌ ಉದ್ದ ಮತ್ತು 200 ಮೀಟರ್ ಅಗಲದ ಕಾಲುವೆಯೊಂದನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ ಎಂದು ಸರ್ಕಾರಿ ಸ್ವಾಮ್ಯದ ವೆಬ್‌ಸೈಟ್ ಸಬ್ಕ್ ನ್ಯೂಸ್ ಏಪ್ರಿಲ್‌ನಲ್ಲಿ ಪ್ರಕಟಿಸಿತ್ತು.

ಈ ಕಾಲುವೆಯನ್ನು 2.8 ಬಿಲಿಯನ್ ರಿಯಾಲ್ಸ್ (750 ಮಿಲಿಯನ್ ಡಾಲರ್) ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಜಾಗವನ್ನು ಪರಮಾಣು ತ್ಯಾಜ್ಯಗಳನ್ನು ಸುರಿಯಲು ಅದು ಬಳಸಿಕೊಳ್ಳಲಿದೆ.

ಐದು ಕಂಪೆನಿಗಳಿಂದ ಬಿಡ್

ಐದು ಕಂಪೆನಿಗಳಿಂದ ಬಿಡ್

ಕಾಲುವೆಗಳನ್ನು ತೋಡುವುದರಲ್ಲಿ ಪರಿಣತರಾದ ಐದು ಕಂಪೆನಿಗಳನ್ನು ಬಿಡ್‌ಗಾಗಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಕಂಪೆನಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಘೋಷಿಸಲಾಗುತ್ತದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಆದರೆ, ಸರ್ಕಾರದ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವು ರದ್ದುಗೊಳಿಸಿದ ಯುಎಸ್ಎ

ಸೌದಿ-ಕತಾರ್ ಬಿಕ್ಕಟ್ಟು

ಸೌದಿ-ಕತಾರ್ ಬಿಕ್ಕಟ್ಟು

ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್ ಮತ್ತು ಈಜಿಪ್ಟ್‌ಗಳು ಕತಾರ್‌ನೊಂದಿಗಿನ ರಾಜತಾಂತ್ರಿಕ ಮತ್ತು ವ್ಯಾಪಾರ ಒಪ್ಪಂದಗಳನ್ನು 2017ರ ಜೂನ್‌ನಿಂದ ಕಡಿದುಕೊಂಡಿವೆ. ಕತಾರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದು, ರಿಯಾದ್‌ನ ಪ್ರಮುಖ ವಿರೋಧಿ ದೇಶ ಇರಾನ್ ಜತೆ ಹೆಚ್ಚು ನಿಕಟವಾಗುತ್ತಿದೆ ಎಂದು ಆರೋಪಿಸಿದ್ದವು. ಆದರೆ, ಕತಾರ್ ಇದನ್ನು ಅಲ್ಲಗಳೆದಿತ್ತು.

ಫುಟ್ಬಾಲ್ ಮೇಲೆ ಕರಿನೆರಳು

ಫುಟ್ಬಾಲ್ ಮೇಲೆ ಕರಿನೆರಳು

ಮುಂದಿನ ಫುಟ್ಬಾಲ್ ವಿಶ್ವಕಪ್‌ ಸಾರಥ್ಯ ವಹಿಸಲಿರುವ ಕತಾರ್‌ಗೆ ಈಗಾಗಲೇ ಅನೇಕ ಸಂಕಷ್ಟಗಳು ಎದುರಾಗಿವೆ. ಕತಾರ್ ನೆರೆಯ ದೇಶಗಳ ವೈಮಾನಿಕ ಪ್ರದೇಶವನ್ನು ಬಳಸಿಕೊಳ್ಳುವಂತಿಲ್ಲ. ಅಲ್ಲದೆ, ಆ ದೇಶಗಳು ತಮ್ಮ ನೆಲದಲ್ಲಿರುವ ಕತಾರ್ ಪ್ರಜೆಗಳನ್ನು ಗಡಿಪಾರು ಮಾಡುತ್ತಿವೆ.

ಸ್ಪಿಟ್ಜರ್‌ನ 15ನೇ ವಾರ್ಷಿಕೋತ್ಸವಕ್ಕೆ ನಾಸಾ ನೀಡಿದ 15 ಚೆಂದದ ಉಡುಗೊರೆ

ಕುವೈತ್ ಮಧ್ಯಸ್ಥಿಕೆ ವಿಫಲ

ಕುವೈತ್ ಮಧ್ಯಸ್ಥಿಕೆ ವಿಫಲ

ಇರಾನ್‌ನೊಂದಿಗಿನ ರಾಜತಾಂತ್ರಿಕ ಒಪ್ಪಂದಗಳನ್ನು ರದ್ದುಗೊಳಿಸಬೇಕು, ಭಯೋತ್ಪಾದನಾ ಸಂಘಟನೆಗಳೊಂದಿಗಿನ ನಂಟನ್ನು ಕಡಿದುಕೊಳ್ಳಬೇಕು ಮತ್ತು ಭಯೋತ್ಪಾದಕ ವ್ಯಕ್ತಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂಬುದು ಸೇರಿದಂತೆ ಉಳಿದ ದೇಶಗಳು ಕುವೈತ್ ಮಧ್ಯಸ್ಥಿಕೆ ಮೂಲಕ 13 ಬೇಡಿಕೆಗಳನ್ನು ಕತಾರ್‌ಗೆ ಸಲ್ಲಿಸಿದ್ದವು. ಕುವೈತ್ ಮತ್ತು ಅಮೆರಿಕ ನೇತೃತ್ವದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Saudi Kingdom is planning to dig a canal between Qatar border to turning it into an Island.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more