ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಾಂಗಿಯಾಗಿ ಮಹಿಳೆಯ ವಿಮಾನಯಾನ: ಸೌದಿ ಸರ್ಕಾರದ ಮಹತ್ವದ ಆದೇಶ

|
Google Oneindia Kannada News

ಸೌದಿ ಅರೇಬಿಯಾ, ಆಗಸ್ಟ್ 2: ಪುರುಷರ ಅನುಮತಿ ಇಲ್ಲದೆ ಮಹಿಳೆ ವಿದೇಶಕ್ಕೆ ಪ್ರಯಾಣಿಸಬಹುದು ಎನ್ನುವ ಮಹತ್ವದ ಆದೇಶದವನ್ನು ಸೌದಿ ಅರೇಬಿಯಾ ಸರ್ಕಾರ ನೀಡಿದೆ.

ಇಷ್ಟು ದಿನ ಹೆಣ್ಣುಮಕ್ಕಳು ದೇಶಬಿಡಬೇಕಿದ್ದರೆ ಮನೆಯಲ್ಲಿರುವ ತಂದೆ, ಅಣ್ಣ, ತಮ್ಮ, ಗಂಡ ಒಟ್ಟಿನಲ್ಲಿ ಪುರುಷರ ಅನುಮತಿ ಕಡ್ಡಾಯವಾಗಿತ್ತು. ಅವರ ಅನುಮತಿ ಇಲ್ಲದೆ ಎಲ್ಲಿಗೂ ಪ್ರಯಾಣಿಸುವಂತಿರಲಿಲ್ಲ.

ಸೌದಿಯಲ್ಲಿ ಆ ಮಹಿಳೆಯರ ಕರಾಳ ದಿನ ಮತ್ತು ಪಾರಾಗಿ ಬಂದ ರೋಚಕ ಕತೆಸೌದಿಯಲ್ಲಿ ಆ ಮಹಿಳೆಯರ ಕರಾಳ ದಿನ ಮತ್ತು ಪಾರಾಗಿ ಬಂದ ರೋಚಕ ಕತೆ

ಆದರೆ ಇನ್ನುಮುಂದೆ 21 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಪುರುಷರ(ಮೇಲ್ ಗಾರ್ಡಿಯನ್) ಅನುಮತಿ ಇಲ್ಲದೆ ವಿದೇಶ ಪ್ರಯಾಣ ಮಾಡಬಹುದು ಎನ್ನುವ ಆದೇಶ ಹೊರಡಿಸಿದ್ದು ಅಲ್ಲಿಯ ಮಹಿಳೆಯರಿಗೆ ಕೊಂಚ ನೆಮ್ಮದಿ ತಂದಿದೆ.

 Saudi Arabia Has Allowed Adult Women to Travel Without Permission

ಸದಾ ಒಂದಿಲ್ಲೊಂದು ನಿಯಮಗಳನ್ನು ಜಾರಿಗೆ ತರುತ್ತಾ ಕಾನೂನಿನ ಚೌಕಟ್ಟಿನಲ್ಲೇ ಮಹಿಳೆಯರನ್ನು ಬಂಧಿಸಿಟ್ಟಿದ್ದ ಜನತೆಗೆ ಪೆಟ್ಟು ಕೊಟ್ಟಂತಾಗಿದೆ.

ಮಹಿಳೆಯರು ಮನೆಯಿಂದ ಓಡಿ ಹೋಗಲು ಪ್ರಯತ್ನಿಸುತ್ತಾರೆ ಎನ್ನುವ ಕಾರಣಕ್ಕೆ ಈ ನಿಯಮ ಜಾರಿಗೆ ತರಲಾಗಿತ್ತು. ಯುಎಸ್‌ನಲ್ಲಿರುವ ಸೌದಿ ಅರೇಬಿಯಾದ ಮೊದಲ ಮಹಿಳಾ ರಾಯಭಾರಿ ರೀಮಾ ಬಂದರ್ ಅಲ್-ಸೌದ್ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ಡಿಎಲ್ ಪಡೆದ ಮೊದಲ ಕನ್ನಡತಿ ಡಾ. ವಾಣಿಶ್ರೀಸೌದಿ ಅರೇಬಿಯಾದಲ್ಲಿ ಡಿಎಲ್ ಪಡೆದ ಮೊದಲ ಕನ್ನಡತಿ ಡಾ. ವಾಣಿಶ್ರೀ

''ಈ ಹೊಸ ಆದೇಶವು ಹೊಸ ಇತಿಹಾಸವನ್ನೇ ಸೃಷ್ಟಿಸಲಿದೆ. ಸಮಾಜದಲ್ಲಿ ಪುರುಷ ಮತ್ತು ಮಹಿಳೆ ಸಮಾನರು ಎನ್ನುವುದನ್ನು ಈ ಆದೇಶ ಎತ್ತಿಹಿಡಿದಿದೆ.ಇನ್ನೂ ಕೆಲವು ಅಭಿವೃದ್ಧಿ ಆಗಬೇಕಿದೆ ''ಎಂದು ಅವರು ಹೇಳಿದ್ದಾರೆ.

ಆದರೆ ಈ ಆದೇಶವು ಎಂದಿನಿಂದ ಜಾರಿಗೆ ಬರಲಿದೆ ಎನ್ನುವ ಕುರಿತು ಇನ್ನೂ ಸ್ಪಷ್ಟನೆ ದೊರೆತಿಲ್ಲ. ಸಾಕಷ್ಟು ವರ್ಷಗಳಿಂದ ಗಾರ್ಡಿಯನ್‌ಶಿಪ್ ಸಿಸ್ಟಂ ಚಾಲ್ತಿಯಲ್ಲಿದೆ. ಮಹಿಳೆಯ ಮೇಲೆ ತಂದೆ, ಪತಿ, ಸಹೋದರ ಅಥವಾ ಸಂಬಂಧಿಗಳ ಅಧಿಕಾರವಿರುತ್ತಿತ್ತು.

ಯಾವ ಮಹಿಳೆ ಪಾಸ್‌ಪಾರ್ಟ್‌ಗೆ ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಪಾಸ್‌ಪೋರ್ಟ್ ದೊರೆಯಲಿದೆ. ಆಕೆ ಮದುವೆಯಾಗುವುದಾಗಲಿ, ಪಾಸ್‌ಪೋರ್ಟ್ ರಿನೋವೇಷನ್ ಅಥವಾ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಕೂಡ ಪುರುಷನ ಅನುಮತಿ ಕಡ್ಡಾಯವಾಗಿತ್ತು.

ಇದೀಗ ಈ ಆದೇಶವು ಹ್ಯಾಷ್‌ ಟ್ಯಾಗ್ ''ನೋ ಗಾರ್ಡಿಯನ್‌ಶಿಪ್ ಓವರ್ ವಿಮೆನ್ ಟ್ರಾವೆಲ್'' ಎನ್ನುವ ವಾಕ್ಯದಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

English summary
Saudi Arabia has allowed adult women to travel without permission and granted them more control over family matters, further eroding a heavily criticized male guardianship system at a time of heightened scrutiny over its human rights record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X