ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ: 37 ಮಂದಿಗೆ ಸೌದಿ ಅರೇಬಿಯಾದಲ್ಲಿ ಮರಣ ದಂಡನೆ

|
Google Oneindia Kannada News

ಭಯೋತ್ಪಾದನೆ ಆರೋಪ ನಿಗದಿ ಅಗಿದ್ದ ಮೂವತ್ತೇಳು ನಾಗರಿಕರಿಗೆ ಸೌದಿ ಅರೇಬಿಯಾ ಮಂಗಳವಾರ ಮರಣದಂಡನೆ ವಿಧಿಸಿದೆ. ಜಗತ್ತಿನಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಮರಣ ದಂಡನೆ ವಿಧಿಸುವ ದೇಶಗಳಲ್ಲಿ ಸೌದಿ ಅರೇಬಿಯಾವೂ ಒಂದು. ರಿಯಾದ್, ಮೆಕ್ಕಾ ಮತ್ತು ಮದೀನಾ, ಕೇಂದ್ರ ಖಾಸಿಂ ಪ್ರಾಂತ್ಯ ಹಾಗೂ ಪೂರ್ವ ಪ್ರಾಂತ್ಯದಲ್ಲಿ ಮರಣ ದಂಡನೆ ಶಿಕ್ಷೆ ಜಾರಿಗೊಳಿಸಲಾಯಿತು.

ಭಯೋತ್ಪಾದಕರಿಗೆ ನೆರವು ನೀಡಿದ್ದು, ಭಯೋತ್ಪಾದನಾ ಕೃತ್ಯದ ಆಲೋಚನೆ ಇದ್ದದ್ದು ಹಾಗೂ ಭಯೋತ್ಪಾದನೆ ಕೃತ್ಯ ಎಸಗುವ ಸಲುವಾಗಿ ಭದ್ರತಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದ್ದು ಹಾಗೂ ಅಸ್ಥಿರಗೊಳಿಸಿದ ಆರೋಪವನ್ನು ಹೊರಿಸಲಾಗಿದ್ದವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಸೌದಿ ಮತ್ತು ಭಾರತದ ಹೋರಾಟ : ಪ್ರಿನ್ಸ್ ಸಲ್ಮಾನ್ಭಯೋತ್ಪಾದನೆ ವಿರುದ್ಧ ಸೌದಿ ಮತ್ತು ಭಾರತದ ಹೋರಾಟ : ಪ್ರಿನ್ಸ್ ಸಲ್ಮಾನ್

ಸೌದಿ ಅರೇಬಿಯಾದಲ್ಲಿ ತಲೆ ಕಡಿಯುವ ಮೂಲಕ ಮರಣ ದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತದೆ. ಈ ವರ್ಷದ ಆರಂಭದಿಂದ ಕನಿಷ್ಠ ನೂರು ಮಂದಿಗೆ ಮರಣ ದಂಡನೆ ವಿಧಿಸಲಾಗಿದೆ. ಕಳೆದ ವರ್ಷ ನೂರಾ ನಲವತ್ತೊಂಬತ್ತು ಮಂದಿಗೆ ಮರಣ ದಂಡನೆ ವಿಧಿಸಿತ್ತು ಸೌದಿ ಅರೇಬಿಯಾ. ಅಮ್ನೆಸ್ಟಿ ಇಂಟರ್ ನ್ಯಾಷನಲ್ ಪ್ರಕಾರ, ಇರಾನ್ ನಲ್ಲಿ ಮಾತ್ರ ಅತಿ ಹೆಚ್ಚು ಮಂದಿಗೆ ಮರಣ ದಂಡನೆ ವಿಧಿಸಿದ ದಾಖಲೆ ಇದೆ.

Saudi Arabia executes 37 citizens convicted of terrorism

ಸೌದಿ ಅರೇಬಿಯಾದಲ್ಲಿ ನಡೆಯುವ ನ್ಯಾಯ ದಾನ ಪದ್ಧತಿ ಬಗ್ಗೆ ಪದೇ ಪದೇ ಆತಂಕ ವ್ಯಕ್ತವಾಗಿದೆ. ಕಠಿಣ ಇಸ್ಲಾಮಿಕ್ ಕಾನೂನು ಇಲ್ಲಿ ಪಾಲನೆ ಆಗುತ್ತದೆ. ಭಯೋತ್ಪಾದನೆ, ಕೊಲೆ, ಅತ್ಯಾಚಾರ, ಶಸ್ತ್ರಾಸ್ತ್ರಗಳ ಕಳವು ಹಾಗೂ ಮಾದಕ ವಸ್ತುಗಳ ಸಾಗಣೆ ಅಪರಾಧಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದೆ.

English summary
Saudi Arabia said, it executed 37 of its citizens on Tuesday after they were convicted of terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X