ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲವೂ ಇಲ್ಲ, ಸಾಲ ಕೂಡ ಕೊಡೊಲ್ಲ: ಪಾಕಿಸ್ತಾನಕ್ಕೆ ಆಘಾತ ನೀಡಿದ ಸೌದಿ ಅರೇಬಿಯಾ

|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 12: ಪಾಕಿಸ್ತಾನದೆಡೆಗಿನ ತನ್ನ ನೀತಿಯನ್ನು ಸೌದಿ ಅರೇಬಿಯಾ ಬದಲಿಸಿಕೊಂಡಿದೆ. ಪಾಕಿಸ್ತಾನಕ್ಕೆ ಒದಗಿಸುತ್ತಿದ್ದ ತೈಲ ಸರಬರಾಜು ಮತ್ತು ಸಾಲ ನೀಡಿಕೆಯನ್ನು ಸೌದಿ ಅರೇಬಿಯಾ ಸ್ಥಗಿತಗೊಳಿಸಿದೆ. ಈ ಮೂಲಕ ಉಭಯ ದೇಶಗಳ ನಡುವಿನ ಸುದೀರ್ಘ ಸ್ನೇಹ ಅಂತ್ಯಗೊಂಡಂತಾಗಿದೆ.

2018ರಲ್ಲಿ ಸೌದಿ ಅರೇಬಿಯಾವು ಪಾಕಿಸ್ತಾನಕ್ಕೆ 6.2 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿತ್ತು. ಇದರಲ್ಲಿ ಒಟ್ಟು 3 ಬಿಲಿಯನ್ ಡಾಲರ್ ಸಾಲ ಮತ್ತು 3.2 ಬಿಲಿಯನ್ ಡಾಲರ್ ತೈಲ ಸಾಲ ಸೌಲಭ್ಯವನ್ನು ಒದಗಿಸಿತ್ತು. ಇದರ ಭಾಗವಾಗಿರುವ 1 ಬಿಲಿಯನ್ ಡಾಲರ್ ಹಣವನ್ನು ಪಾಕಿಸ್ತಾನವು ಈಗಾಗಲೇ ಸೌದಿ ಅರೇಬಿಯಾಕ್ಕೆ ಮರಳಿಸಿದೆ.

ಜಮ್ಮು-ಕಾಶ್ಮೀರ ತನ್ನದು ಎಂದ ಪಾಕಿಸ್ತಾನಕ್ಕೆ ಭಾರತದ ಉತ್ತರವೇನು?ಜಮ್ಮು-ಕಾಶ್ಮೀರ ತನ್ನದು ಎಂದ ಪಾಕಿಸ್ತಾನಕ್ಕೆ ಭಾರತದ ಉತ್ತರವೇನು?

ಸೌದಿಯ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರು ಕಳೆದ ವರ್ಷದ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಲ ಹಾಗೂ ತೈಲ ಪೂರೈಕೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಮುಂದೆ ಓದಿ.

ಒಐಸಿಗೆ ಎಚ್ಚರಿಕೆ ನೀಡಿದ್ದ ಪಾಕ್

ಒಐಸಿಗೆ ಎಚ್ಚರಿಕೆ ನೀಡಿದ್ದ ಪಾಕ್

ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಪರವಾಗಿ ನಿಲುವು ತೆಗೆದುಕೊಳ್ಳಬಾರದು ಎಂದು ಸೌದಿ ಅರೇಬಿಯಾ ನೇತೃತ್ವದ ಇಸ್ಲಾಮಿಕ್ ಸಹಕಾರ ಸಂಘಕ್ಕೆ (ಒಐಸಿ) ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಕಠಿಣ ಎಚ್ಚರಿಕೆ ನೀಡಿದ್ದರು. ಒಐಸಿಯನ್ನು ಎರಡು ಭಾಗಗಳಾಗಿ ವಿಭಜಿಸುವ ಬೆದರಿಕೆ ಹಾಕಿದ್ದರು. ಅದರ ಬೆನ್ನಲ್ಲೇ ಸೌದಿ ಅರೇಬಿಯಾ ಈ ಕ್ರಮಕ್ಕೆ ಮುಂದಾಗಿದೆ.

ಸಭೆ ಕರೆಯಲು ಸೌದಿ ನಕಾರ

ಸಭೆ ಕರೆಯಲು ಸೌದಿ ನಕಾರ

ಕಾಶ್ಮೀರ ವಿಚಾರದಲ್ಲಿ ತನಗೆ ಬೆಂಬಲ ನೀಡಲು ಇಸ್ಲಾಮಿಕ್ ಜಗತ್ತಿಗೆ ಅವಕಾಶ ನೀಡಬೇಕು ಎಂದು ಪಾಕಿಸ್ತಾನವು ಸೌದಿ ಅರೇಬಿಯಾವನ್ನು ಒತ್ತಾಯಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಐಸಿಯ ಸಭೆ ಕರೆಯುವಂತೆ ಅದು ಫೆಬ್ರವರಿಯಲ್ಲಿ ಆಗ್ರಹಿಸಿತ್ತು. ಆದರೆ ಇದನ್ನು ಸೌದಿ ಅರೇಬಿಯಾ ತಳ್ಳಿಹಾಕಿತ್ತು. ಒಐಸಿ 57 ಮುಸ್ಲಿಂ ದೇಶಗಳ ಗುಂಪಾಗಿದ್ದು, ಸೌದಿ ಅರೇಬಿಯಾ ಅದರ ನೇತೃತ್ವ ವಹಿಸಿದೆ.

ಕಾಶ್ಮೀರ ವಿಷಯದಲ್ಲಿ ಬೆಂಬಲಕ್ಕೆ ಒತ್ತಾಯ

ಕಾಶ್ಮೀರ ವಿಷಯದಲ್ಲಿ ಬೆಂಬಲಕ್ಕೆ ಒತ್ತಾಯ

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ 370ನೇ ವಿಧಿಯನ್ನು ಭಾರತವು ರದ್ದುಗೊಳಿಸಿದ ಬಳಿಕ ಕಾಶ್ಮೀರ ವಿಷಯದಲ್ಲಿ ತನ್ನ ಪರವಾಗಿ ನಿಲುವು ತೆಗೆದುಕೊಳ್ಳುವಂತೆ ಪಾಕಿಸ್ತಾನವು ಇಸ್ಲಾಮಿಕ್ ರಾಷ್ಟ್ರಗಳ ಕೂಟವನ್ನು ಒತ್ತಾಯಿಸುತ್ತಿದೆ. ಅದಕ್ಕೆ ಒಐಸಿಯ ಸಭೆ ಕರೆಯಬೇಕು ಎಂದು ಆಗ್ರಹಿಸುತ್ತಿದೆ. ಪಾಕಿಸ್ತಾನವನ್ನು ಸೌದಿ ಅರೇಬಿಯಾ ಬೆಂಬಲಿಸದೆ ಹೋದರೆ ಇಸ್ಲಾಮಿಕ್ ದೇಶಗಳಲ್ಲಿ ಇನ್ನು ಯಾರು ತನ್ನನ್ನು ಬೆಂಬಲಿಸುತ್ತಾರೆ ಎಂದು ಪಾಕಿಸ್ತಾನ ಕೇಳಿತ್ತು.

ಹೊಸ ನಕ್ಷೆ: ಪಾಕಿಸ್ತಾನಕ್ಕೆ ಸೇರಿತಾ ಭಾರತದ ಜಮ್ಮು-ಕಾಶ್ಮೀರ?ಹೊಸ ನಕ್ಷೆ: ಪಾಕಿಸ್ತಾನಕ್ಕೆ ಸೇರಿತಾ ಭಾರತದ ಜಮ್ಮು-ಕಾಶ್ಮೀರ?

ಸಾಲದ ಮೊತ್ತ ತಗ್ಗಿಸಿದ್ದ ಯುಎಇ

ಸಾಲದ ಮೊತ್ತ ತಗ್ಗಿಸಿದ್ದ ಯುಎಇ

ಪಾಕಿಸ್ತಾನದ ಮುಖಂಡರು ನೇರವಾಗಿ ತನ್ನ ವಿರುದ್ಧ ವಾಗ್ದಾಳಿ ನಡೆಸಿರುವುದನ್ನು ಸಹಿಸದ ಸೌದಿ ಅರೇಬಿಯಾ, ತನ್ನ ಒಪ್ಪಂದದಿಂದ ಹಿಂದೆ ಸರಿದಿದೆ. ಹೀಗಾಗಿ ಪಾಕಿಸ್ತಾನವು ಬಾಕಿ ಉಳಿದಿರುವ ಇನ್ನೂ 2 ಬಿಲಿಯನ್ ಡಾಲರ್ ನಗದು ಸಾಲವನ್ನು ವಾಪಸ್ ನೀಡಬೇಕಿದೆ. ಯುಎಇ ಕೂಡ 2018ರ ಡಿಸೆಂಬರ್‌ನಲ್ಲಿ ಪಾಕಿಸ್ತಾನಕ್ಕೆ 3.2 ಬಿಲಿಯನ್ ಡಾಲರ್ ತೈಲ ಸೌಲಭ್ಯ ಸೇರಿದಂತೆ 6.2 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿತ್ತು. ಆದರೆ ಆರ್ಥಿಕ ನೆರವಿನ ಮೊತ್ತವನ್ನು 2 ಬಿಲಿಯನ್ ಡಾಲರ್ ಮತ್ತು ತೈಲ ಸೌಲಭ್ಯವನ್ನು 3.2 ಬಿಲಿಯನ್ ಡಾಲರ್‌ಗೆ ಇಳಿಸಿತ್ತು.

English summary
Saudi Arabia has ends its deal with Pakistan of loan and oil supply after its threats to split OIC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X