ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿವಂತ ಅರಬ್ಬಿಗಳು ಈಗ ರಸ್ತೆಯಲ್ಲಿ ಬರ್ಗರ್ ಮಾರೋದಕ್ಕೂ ಸೈ

|
Google Oneindia Kannada News

ರಿಯಾದ್, ಆಗಸ್ಟ್ 1: ಸೌದಿ ಸಿರಿವಂತರ ನಾಡು. ಅಲ್ಲಿ ನೀರಿಗಿಂತಲೂ ಸುಲಭವಾಗಿ ಸಿಗುವುದು ಪೆಟ್ರೋಲ್ ಎಂಬ ಮಾತಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಿಂದಲೇ ಸೌದಿ ಅರೇಬಿಯಾ ಹಣದ ಹೊಳೆ ಹರಿಸಿತ್ತು. ಆದರೆ, ಅಲ್ಲಿ ಈಗ ಪೆಟ್ರೋಲಿಯಂ ಉತ್ಪನ್ನಗಳ ದರ ಕುಸಿತ ಅಲ್ಲಿನ ಜನರನ್ನು ಕಂಗಾಲಾಗಿಸಿದೆ.

ದುಬೈನಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್ ಲಾಟರಿ ಗೆದ್ದ ಸಂದೀಪ್ ಮೆನನ್ದುಬೈನಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್ ಲಾಟರಿ ಗೆದ್ದ ಸಂದೀಪ್ ಮೆನನ್

ಜತೆಗೆ ನಿರುದ್ಯೋಗ ಅಲ್ಲಿನ ಜನರ ಮನಸ್ಥಿತಿಯನ್ನೇ ಬದಲಿಸಿದೆ. ಒಂದು ಕಾಲದಲ್ಲಿ ಸಿರಿವಂತರಾಗಿದ್ದ 'ಬಿಳಿ ಕಾಲರ್' ಮಂದಿ ಈಗ 'ನೀಲಿ ಕಾಲರ್' ಕಾರ್ಮಿಕರಾಗಿ ಬದಲಾಗಿದ್ದಾರೆ.

ಸೌದಿಯ ಬೀದಿಗಳಲ್ಲಿ, ಅಂಗಡಿಗಳಲ್ಲಿ ಮತ್ತು ಕಂಪೆನಿಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಕಾರ್ಮಿಕರಲ್ಲಿ ವಿದೇಶಿಗರೇ ಹೆಚ್ಚು. ಅದರಲ್ಲಿ ಭಾರತೀಯರ ಪಾಲು ಇನ್ನೂ ದೊಡ್ಡದು. ಸುಮಾರು 32 ಲಕ್ಷದಷ್ಟು ಭಾರತೀಯರು ಸೌದಿಯಲ್ಲಿ ನೆಲೆಸಿದ್ದಾರೆ.

saudi arabia economic crisis people in to low status jobs

ಆದರೆ, ತೈಲ ಬೆಲೆ ಕುಸಿತದಿಂದ ಉಂಟಾದ ಆರ್ಥಿಕ ಹಿನ್ನಡೆ ಮತ್ತು ಉದ್ಯೋಗ ನಷ್ಟದಿಂದ ದೊಡ್ಡ ಕೆಲಸಗಳಲ್ಲಿದ್ದವರು ಸಣ್ಣಪುಟ್ಟ ಕೆಲಸಗಳಿಗೆ ಕೈಹಾಕುತ್ತಿದ್ದಾರೆ.

12 'ನೀಲಿ ಕಾಲರ್' ಕೆಲಸಗಳಿಂದ ವಿದೇಶಿಯರನ್ನು ನಿಷೇಧಿಸುವ ನಿರ್ಧಾರವನ್ನು ಸೌದಿ ಸರ್ಕಾರ ಫೆಬ್ರುವರಿಯಲ್ಲಿ ತೆಗೆದುಕೊಂಡಿತ್ತು.

ಏಳು ತಿಂಗಳ ಈ ಚೆಂದದ ಗೊಂಬೆಯ ಕೂದಲು ಬಲು ಫೇಮಸ್ಏಳು ತಿಂಗಳ ಈ ಚೆಂದದ ಗೊಂಬೆಯ ಕೂದಲು ಬಲು ಫೇಮಸ್

ವಾಚ್, ಸನ್‌ಗ್ಲಾಸ್, ವೈದ್ಯಕೀಯ ಸಲಕರಣೆಗಳು, ವಿದ್ಯುತ್ ಉಪಕರಣಗಳು, ಕಾರ್ ಬಿಡಿ ಭಾಗಗಳು, ಕಾರ್ಪೆಟ್, ಆಟೊಮೊಬೈಲ್ಸ್ ಮತ್ತು ಮೋಟಾರ್ ಸೈಕಲ್ಸ್, ಪೀಠೋಪಕರಣ, ಗಾರ್ಮೆಂಟ್ಸ್ ಮುಂತಾದವುಗಳ ಮಾರಾಟ ಕೆಲಸಗಳಲ್ಲಿ ತನ್ನ ಜನರಿಗೆ ಅವಕಾಶ ನೀಡುವ ಸಲುವಾಗಿ ವಿದೇಶಿಗರಿಗೆ ನಿಷೇಧ ವಿಧಿಸಲಾಗಿತ್ತು.

ಈಗ ಅಲ್ಲಿನ ಜನರು ಸ್ವಯಂಇಚ್ಛೆಯಿಂದ ಬೀದಿ ಬದಿಯ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಬೀದಿ ಬದಿಯ ತಿನಿಸುಗಳು, ಅಡುಗೆ, ಸ್ವಚ್ಛತೆ, ಪೆಟ್ರೋಲ್ ಬಂಕ್‌ಗಳಲ್ಲಿನ ಕೆಲಸಗಳು ಈ ಹಿಂದೆ ವಿದೇಶಿಗರಿಗೆ ಮೀಸಲು ಎನ್ನುವಂತಾಗಿದ್ದವು. ಈಗ ಅಲ್ಲಿ ಸೌದಿಯ ಯುವಕರು ತುಂಬಿಕೊಳ್ಳುತ್ತಿದ್ದಾರೆ.

ಕಡಿಮೆ ಸ್ಟೇಟಸ್‌ನ ನೌಕರಿಗಳಿಗೆ ಯಾವುದೇ ಅಂಜಿಕೆಯಿಲ್ಲದೆ ಅಲ್ಲಿನ ಜನರು ಸೇರಿಕೊಳ್ಳುತ್ತಿದ್ದಾರೆ. ಆರ್ಥಿಕ ಬೆಳವಣಿಗೆ ಹಾಗೂ ಅಧಿಕ ನಿರುದ್ಯೋಗವನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ತೈಲ ಅನುದಾನಿತ ಸಬ್ಸಿಡಿಗಳಿಗೆ ಕತ್ತರಿಹಾಕುತ್ತಿದೆ.

ಗಾಡಿಗಳಲ್ಲಿ ಪಿಜ್ಜಾ ಬರ್ಗರ್‌ಗಳನ್ನು ಮಾರುವುದು ಅವಮಾನಕರ ಎಂದು ಸೌದಿಯ ಜನರು ಭಾವಿಸಿದ್ದರು. ಎರಡು ವರ್ಷದ ಹಿಂದೆ ಬಾದರ್ ಅಲ್ ಅಜ್ಮಿ 'ಒನ್ ವೇ ಬರ್ಗರ್' ಎಂಬ ಚಲಿಸುವ ರೆಸ್ಟೋರೆಂಟ್ ಆರಂಭಿಸಿದ್ದಾಗ ಪರಿಚಯಸ್ಥರು ಮೂಗು ಮುರಿದಿದ್ದರು.

ಅಂತಹ ದೊಡ್ಡ ಕುಟುಂಬ, ಸಮುದಾಯದಿಂದ ಬಂದು ರಸ್ತೆ ಬದಿಯಲ್ಲಿ ಬರ್ಗರ್ ಮತ್ತು ಸ್ಯಾಂಡ್‌ವಿಚ್‌ಗಳನ್ನು ಮಾರುತ್ತೀಯಾ? ಎಂದು ಪ್ರಶ್ನಿಸಿದ್ದರು.

ಆದರೆ, ಆರ್ಥಿಕ ಹಿನ್ನಡೆ ಮತ್ತು ಅಜ್ಮಿಯಂಥಹವರ ಪ್ರಯತ್ನಗಳು ಅಲ್ಲಿನ 'ವೈಟ್ ಕಾಲರ್' ಜನರಲ್ಲಿ ಈ 'ಕೆಳಮಟ್ಟದ' ಕೆಲಸಗಳ ಮೇಲೆಯೂ ಆಸಕ್ತಿ ಮೂಡಿಸಿದೆ.

ಈಗಲೂ ಕೆಲವರು ತಮ್ಮ ಘನತೆಗೆ ತಕ್ಕುದ್ದಲ್ಲ ಎಂದು ಕಡಿಮೆ ಆದಾಯ ತರುವ ಹಾಗೂ 'ನೀಲಿ ಕಾಲರ್' ಎಂದು ಪರಿಗಣಿಸಿರುವ ಕೆಲಸಗಳನ್ನು ಮಾಡಲು ಒಪ್ಪುತ್ತಿಲ್ಲ.

ಸೌದಿಯ ಹೊಸ ಆರ್ಥಿಕ ಸ್ಥಿತಿಯು ಅಲ್ಲಿನ ಇನ್ನಷ್ಟು ಜನರನ್ನು ಪ್ಲಂಬರ್‌ಗಳು, ಮರಗೆಲಸದವರು, ದರ್ಜಿಗಳು ಮುಂತಾದವುಗಳನ್ನಾಗಿ ಬದಲಾಯಿಸಲಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತೈಲ ಬೆಲೆ ಗಗನಕ್ಕೇರಿ ಸೌದಿ ಶ್ರೀಮಂತವಾಗುವ ಮುನ್ನ ಇವೆಲ್ಲವು ಅಲ್ಲಿ ಅಂಗೀಕೃತ ಕೆಲಸಗಳಾಗಿದ್ದವು. ಅವುಗಳ ಬಗ್ಗೆ ಆಗ ಮುಜುಗರ ಇರಲಿಲ್ಲ. ಈಗ ಸಣ್ಣ ನೌಕರಿಗಳನ್ನು ಮಾಡುವ ಮುಜುಗರವನ್ನು ತೊರೆಯುವುದು ಅನಿವಾರ್ಯವಾಗಿದೆ.

English summary
Saudi people are increasingly taking 'low status' jobs of 'blue collar' after struggling economic growth and high unemployment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X