ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ದೇಶಗಳ ಜನರಿಗೆ ನಿರ್ಬಂಧ ಹೇರಿದ ಸೌದಿ ಅರೇಬಿಯಾ

|
Google Oneindia Kannada News

ರಿಯಾದ್, ಫೆಬ್ರುವರಿ 11: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಭಾರತ ಒಳಗೊಂಡಂತೆ ಇಪ್ಪತ್ತು ದೇಶಗಳ ಜನರಿಗೆ ನಿರ್ಬಂಧ ಹೇರಿರುವುದಾಗಿ ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಗುರುವಾರ ಈ ಕುರಿತು ಮಾಹಿತಿ ಹಂಚಿಕೊಂಡಿರುವ ರಾಯಭಾರ ಕಚೇರಿ, ಸೌದಿ ಅರೇಬಿಯಾಗೆ 20 ದೇಶಗಳ ಜನರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ ಎಂದು ಟ್ವೀಟ್ ಮಾಡಿದೆ.

 ಹಂದಿ ಜಿಲಾಟಿನ್ ನಿಂದ ಮಾಡಿದರೂ ಲಸಿಕೆ ತಗೊಳ್ಳಿ: ಇಸ್ಲಾಂ ಫತ್ವಾ ಸಮಿತಿ ಸೂಚನೆ ಹಂದಿ ಜಿಲಾಟಿನ್ ನಿಂದ ಮಾಡಿದರೂ ಲಸಿಕೆ ತಗೊಳ್ಳಿ: ಇಸ್ಲಾಂ ಫತ್ವಾ ಸಮಿತಿ ಸೂಚನೆ

ಭಾರತ, ಅರ್ಜೆಂಟಿನಾ, ಯುನೈಟೆಡ್ ಅರಬ್ ಎಮಿರೇಟ್ಸ್‌, ಜರ್ಮನಿ, ಅಮೆರಿಕ, ಇಂಡೋನೇಷ್ಯಾ, ಐರ್ಲೆಂಡ್, ಇಟಲಿ, ಪಾಕಿಸ್ತಾನ, ಬ್ರೆಜಿಲ್, ಪೋರ್ಚುಗಲ್, ಬ್ರಿಟನ್, ಟರ್ಕಿ, ದಕ್ಷಿಣ ಆಫ್ರಿಕಾ, ಸ್ವೀಡನ್, ಸ್ವಿಡ್ಜರ್ಲೆಂಡ್, ಫ್ರಾನ್ಸ್‌, ಲೆಬನಾನ್, ಈಜಿಪ್ಟ್‌ ಹಾಗೂ ಜಪಾನ್ ನಿಂದ ಬರುವವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

Saudi Arabia Bans Travel From 20 Countries Amid Increasing Coronavirus Cases

ಸೌದಿ ಅರೇಬಿಯಾದಲ್ಲಿ 3,71,356 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿರುವುದಾಗಿ ಜಾನ್ಸ್ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯ ತಿಳಿಸಿದೆ. 6415 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಡಿಸೆಂಬರ್ 21ರಂದು ಅಂತಾರಾಷ್ಟ್ರೀಯ ವಿಮಾನಯಾನ ಮತ್ತು ಗಡಿ ಪ್ರವೇಶ ಮತ್ತು ಬಂದರುಗಳ ಮೂಲಕ ಪ್ರವೇಶವನ್ನು ಸ್ಥಗಿತಗೊಳಿಸಿತ್ತು. ಜನವರಿ ತಿಂಗಳಲ್ಲಿ ಲಾಕ್ ಡೌನ್ ತೆರವುಗೊಳಿಸಿತ್ತು.

English summary
Due to increasing number of coronavirus cases, saudi arabia banned entry of people from 20 countries,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X