ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪ್ರಕರಣ ಹೆಚ್ಚಳ; ಭಾರತಕ್ಕೆ ತೆರಳಲು ಸೌದಿ ನಿರ್ಬಂಧ

|
Google Oneindia Kannada News

ನವದೆಹಲಿ ಮೇ 23: ಕಳೆದ ಕೆಲವು ವಾರಗಳಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಭಾರತ ಸೇರಿದಂತೆ 16 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸದಂತೆ ಸೌದಿ ಅರೇಬಿಯಾ ತನ್ನ ಪ್ರಜೆಗಳನ್ನು ನಿರ್ಬಂಧಿಸಿದೆ.

ಭಾರತ, ಲೆಬನಾನ್‌, ಸಿರಿಯಾ, ಟರ್ಕಿ, ಅಫ್ಘಾನಿಸ್ತಾನ, ಯೆಮನ್, ಸೊಮಾಲಿಯಾ, ಇಥಿಯೋಪಿಯ, ಕಾಂಗೊ, ಲಿಬಿಯಾ, ಇಂಡೋನೇಶಿಯಾ, ವಿಯಾಟ್ನಂ, ಅರ್ಮೇನಿಯ, ಬೆಲಾರಸ್‌ ಮತ್ತು ವೆನಿಜ್ಯುಲಾ ದೇಶಗಳಿಗೆ ತೆರಳದಂತೆ ತನ್ನ ಪ್ರಜೆಗಳನ್ನು ಸೌದಿ ಅರೇಬಿಯಾ ಸರಕಾರ ನಿರ್ಬಂಧ ವಿಧಿಸಿದೆ.

"ದೇಶದಲ್ಲಿ ಇದುವರೆಗೂ ಯಾವುದೇ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿಲ್ಲ'' ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ ತಿಳಿಸಿದೆ.

Saudi Arabia Bans To Travel India Amid Covid Outbreaks

"ಶಂಕಿತ ಮಂಕಿಪಾಕ್ಸ್ ಪ್ರಕರಣವನ್ನು ಪತ್ತೆಹಚ್ಚಲು ಮತ್ತು ಅದರ ಮೇಲ್ವಿಚಾರಣೆ ನಡೆಸಲು ಹಾಗೂ ಒಂದು ವೇಳೆ ಹೊಸದಾಗಿ ಸೋಂಕಿನ ಪ್ರಕರಣ ಪತ್ತೆಯಾದರೆ ಅದರ ವಿರುದ್ಧ ಹೋರಾಟ ನಡೆಸಲು ಸಾಮ್ರಾಜ್ಯವು ಸಮರ್ಥವಾಗಿದೆ'' ಎಂದು ಸೌದಿ ಅರೇಬಿಯಾದ ಉಪ ಆರೋಗ್ಯ ಸಚಿವ ಅಬ್ದುಲ್ಲಾ ಅಸಿರಿ ಹೇಳಿದ್ದಾರೆ.

"ಇದುವರೆಗೆ ಮನುಷ್ಯರ ನಡುವೆ ಮಂಕಿಪಾಕ್ಸ್ ಸೋಂಕು ಹರಡುವ ಪ್ರಕರಣಗಳು ಬಹಳ ಸೀಮಿತವಾಗಿದೆ ಹಾಗೂ ಏಕಾಏಕಿ ಹರಡುವ ಸಾಧ್ಯತೆಯು ತುಂಬಾ ಕಡಿಮೆ ಇದೆ. ಸೋಂಕು ಪತ್ತೆಯಾದ ದೇಶಗಳಲ್ಲೂ ಈ ಸಾಧ್ಯತೆಯು ಕಂಡುಬಂದಿಲ್ಲ'' ಎಂದು ಅಬ್ಬುದ್ದಾ ವಿವರಿಸಿದ್ದಾರೆ.

Saudi Arabia Bans To Travel India Amid Covid Outbreaks

ಏತನ್ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆಯು(ಡಬ್ಲ್ಯೂಎಚ್ಒ) 11 ದೇಶಗಳಲ್ಲಿ 80 ಮಂಕಿಪಾಕ್ಸ್ ಪ್ರಕರಣಗಳನ್ನು ದೃಢಪಡಿಸಿದೆ. ಸೋಂಕಿನ ಹಿಂದಿನ ಕಾರಣ ಹಾಗೂ ಅದರ ವ್ಯಾಪ್ತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಡಬ್ಲ್ಯೂಎಚ್ಒ ಕೆಲಸ ಮಾಡುತ್ತಿದೆ.

ಹಲವು ದೇಶಗಳಲ್ಲಿನ ಕೆಲವು ಪ್ರಾಣಿಗಳ ಜನಸಂಖ್ಯೆಯಲ್ಲಿ ಮಂಕಿಪಾಕ್ಸ್ ವೈರಸ್‌ ಸ್ಥಳೀಯವಾಗಿ ಕಂಡುಬಂದಿದೆ. ಇದು ಸ್ಥಳೀಯ ಜನರು ಹಾಗೂ ಪ್ರವಾಸಿಗರಿಗೆ ಹರಡುವ ಸಾಧ್ಯತೆಯಿದೆ ಎಂದು ಡಬ್ಲ್ಯೂಎಚ್ಒ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

Recommended Video

Japan ಹುಡುಗನ ಜೋತೆ Modi ಸಂವಾದ | #Japan | Oneindia Kannada

English summary
Saudi Arabia bans its citizens to travel to India and other 15 countries amid Covid outbreaks
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X