ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ ಮತ್ತೆ ಗಡಿ ಬಂದ್ ಮಾಡಿದ ಸೌದಿ ಅರೇಬಿಯಾ

|
Google Oneindia Kannada News

ರಿಯಾದ್, ಫೆಬ್ರವರಿ 3: ಕೊರೊನಾವೈರಸ್ ಹೊಸ ರೂಪಾಂತರದ ಭಯದಿಂದ ಮತ್ತೊಮ್ಮೆ ಅಂತಾರಾಷ್ಟ್ರೀಯ ಗಡಿಯನ್ನು ಸೌದಿ ಅರೇಬಿಯಾ ಮುಚ್ಚಿದೆ. ಜನವರಿ ತಿಂಗಳಲ್ಲಿ ಲಾಕ್ಡೌನ್ ತೆರವುಗೊಳಿಸಿತ್ತು. ಆದರೆ, ಈಗ ಭಾರತ ಸೇರಿದಂತೆ 20 ದೇಶಗಳಿಗೆ ನಿರ್ಬಂಧ ಹೇರಿದೆ.

''ಆದರೆ, ಕೊರೊನಾವೈರಸ್ ಹೊಸ ರೂಪಾಂತರಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ'' ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಬುಧವಾರ 1800 GMT ದಿಂದ ತಾತ್ಕಾಲಿಕ ನಿರ್ಬಂಧ ಜಾರಿಯಲ್ಲಿರಲಿದೆ. ನೆರೆ ರಾಷ್ಟ್ರ ಈಜಿಪ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್, ಲೆಬನಾನ್ ಟರ್ಕಿ ಅಲ್ಲದೆ ಬ್ರಿಟನ್, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಇಟಲಿ, ಪೋರ್ಚುಗಲ್, ಸ್ವೀಡನ್, ಸ್ವಿಟ್ಜರ್ಲೆಂಡ್ ಮುಂತಾದ ಯುರೋಪ್ ರಾಷ್ಟ್ರಗಳು, ಯುಎಸ್, ಅರ್ಜೆಂಟೀನಾ, ಬ್ರೆಜಿಲ್, ಪಾಕಿಸ್ತಾನ, ಭಾರತ, ಇಂಡೋನೇಷಿಯಾ, ಜಪಾನ್, ದಕ್ಷಿಣ ಆಫ್ರಿಕಾದಿಂದ ಬರುವ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಪ್ರವೇಶ ನಿರ್ಬಂಧಿಸಲಾಗಿದೆ.

Saudi Arabia bans entry from 20 countries including India

ಆದರೆ, ಸೌದಿ ನಾಗರಿಕರು, ರಾಯಭಾರ ಕಚೇರಿ ಸಿಬ್ಬಂದಿ, ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳಿಗೆ ಮಾರ್ಗಸೂಚಿಯ ಪ್ರಕಾರ ಪ್ರವೇಶ ನೀಡಲಾಗುತ್ತದೆ ಎಂದು ಸೌದಿ ಆರೋಗ್ಯ ಸಚಿವ ತೌಫಿಕ್ ಅಲ್ ರಬಿಯಾ ಹೇಳಿದರು.

ಸೌದಿ ಅರೇಬಿಯಾದಲ್ಲಿ ಈವರೆಗೆ 368,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ6,400ಕ್ಕೂ ಹೆಚ್ಚು ಸಾವುಗಳು ಕೂಡ ಇವೆ. ಇದು ಗಲ್ಫ್‌ ರಾಷ್ಟ್ರಗಳಲ್ಲಿ ಅತಿ ಹೆಚ್ಚಿನ ಪ್ರಕರಣ ಹೊಂದಿದ ದೇಶವಾಗಿದ್ದು, ಚೇತರಿಕೆ ಪ್ರಮಾಣದಲ್ಲೂ ಮುಂದಿದೆ.

ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಡಿಸೆಂಬರ್ 21ರಂದು ಅಂತಾರಾಷ್ಟ್ರೀಯ ವಿಮಾನಯಾನ ಮತ್ತು ಗಡಿ ಪ್ರವೇಶ ಮತ್ತು ಬಂದರುಗಳ ಮೂಲಕ ಪ್ರವೇಶವನ್ನು ಸ್ಥಗಿತಗೊಳಿಸಿತ್ತು.

ಡಿಸೆಂಬರ್ 17ರಿಂದಲೇ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದ್ದು, ಫೈಜರ್-ಬಯೋ ಎನ್ ಟೆಕ್ ಲಸಿಕೆ ನೀಡಲಾಗುತ್ತಿದೆ. 65ವರ್ಷಕ್ಕಿಂತ ಮೇಲ್ಪಟ್ಟವರು, ವಿಷಯ ಸ್ಥಿತಿಯಲ್ಲಿರುವ ಅನಾರೋಗ್ಯಪೀಡಿತರಿಗೆ ಮೊದಲಿಗೆ ಲಸಿಕೆ ನೀಡಲಾಗುತ್ತಿದೆ.

English summary
Saudi Arabia on Tuesday banned entry to the Kingdom for those coming from 20 countries, including India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X