ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಸೇನೆಯ 'ಉಪದ್ರವ'ದ ಚಿತ್ರಗಳು 'ಉಪಗ್ರಹ'ದಲ್ಲೂ ಸೆರೆ!

|
Google Oneindia Kannada News

ನವದೆಹಲಿ, ಜೂನ್.25: ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಯು ಕಾದ ಕೆಂಡದಂತೆ ಆಗುತ್ತಿದೆ. ಉಭಯ ರಾಷ್ಟ್ರಗಳ ಗಡಿಯಲ್ಲಿ ಚೀನೀ ಸೈನಿಕರು ಪಡೆಯ ಪ್ರಮಾಣ ಮತ್ತು ಶಿಬಿರಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

Recommended Video

ಸುಶಾಂತ್ ಸಿಂಗ್ ಲವ್ವರ್ ವಿರುದ್ಧ ದಾಖಲಾಯಿತು ಕೇಸ್ | Complaint against Sushant singh Ex girlfriend Rhea

ಕಳೆದ ಒಂದು ತಿಂಗಳ ಅಂತರದಲ್ಲಿ ಗಾಲ್ವಾನ್ ಕಣಿವೆಯಲ್ಲಿನ ಚಿತ್ರಣ ಎಷ್ಟರ ಮಟ್ಟಿಗೆ ಬದಲಾಗಿದೆ ಎನ್ನುವುದನ್ನು ಉಪಗ್ರಹದಲ್ಲಿ ಸೆರೆಯಾದ ಚಿತ್ರಗಳು ಸ್ಪಷ್ಟವಾಗಿ ಹೇಳುತ್ತಿವೆ. ಈ ಕುರಿತು ವಿಶೇಷ ವರದಿಯನ್ನು 'ಇಂಡಿಯಾ ಟುಡೇ' ಚಿತ್ರ ಸಹಿತವಾಗಿ ಪ್ರಕಟಿಸಿದೆ.

ಭಾರತದಲ್ಲಿನ 'ಆ' ಗಡಿ ಪ್ರದೇಶವನ್ನು ಆಕ್ರಮಿಸಿಕೊಂಡಿತಾ ಚೀನಾ?ಭಾರತದಲ್ಲಿನ 'ಆ' ಗಡಿ ಪ್ರದೇಶವನ್ನು ಆಕ್ರಮಿಸಿಕೊಂಡಿತಾ ಚೀನಾ?

ಜೂನ್.15 ಮತ್ತು 16ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ನಂತರದಲ್ಲಿ ಗಡಿಯ ಚಿತ್ರಣ ಮತ್ತಷ್ಟು ಉದ್ವಿಗ್ನಗೊಂಡಿದೆ. ಜೂನ್.22ರಂದು ನಡೆದ ಕಮಾಂಡರ್ ಹಂತದ ಸಭೆಗೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ತಿಳಿಸುವ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಗಡಿಗೆ ಹೊಂದಿಕೊಂಡು ಸೇನಾ ಶಿಬಿರ ಸ್ಥಾಪಿಸಿದ ಚೀನಾ

ಗಡಿಗೆ ಹೊಂದಿಕೊಂಡು ಸೇನಾ ಶಿಬಿರ ಸ್ಥಾಪಿಸಿದ ಚೀನಾ

ಭಾರತ-ಚೀನಾ ಗಡಿಗೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಚೀನಾ ತನ್ನ ಸೇನಾ ಶಿಬಿರಗಳನ್ನು ಸ್ಥಾಪಿಸುತ್ತಿದೆ. ಜೂನ್.15ರಂದು ಉಭಯ ರಾಷ್ಟ್ರಗಳ ಯೋಧರ ನಡುವಿನ ಸಂಘರ್ಷ ಹಾಗೂ ಜೂನ್.22ರಂದು ನಡೆದ ಹಿರಿಯ ಕಮಾಂಡರ್ ಹಂತದ ಮಾತುಕತೆ ಬಳಿಕವೂ ಗಡಿಯಲ್ಲಿ ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದೆ. ಹೆಚ್ಚುವರಿ ಸೇನಾ ಶಿಬಿರಗಳನ್ನು ಗಡಿಯುದ್ದಕ್ಕೂ ಸ್ಥಾಪಿಸುತ್ತಿರುವುದನ್ನು ಮಕ್ಸಾರ್ ಟೆಕ್ನಾಲಜೀಸ್ ಉಪಗ್ರಹವು ಕ್ಲಿಕ್ಕಿಸಿದ ಫೋಟೋದಲ್ಲಿ ಗೋಚರಿಸುತ್ತಿದೆ.

ಒಂದೇ ತಿಂಗಳಿನಲ್ಲಿ ಭಾರತ-ಚೀನಾ ಗಡಿ ಚಿತ್ರಣ ಬದಲು

ಒಂದೇ ತಿಂಗಳಿನಲ್ಲಿ ಭಾರತ-ಚೀನಾ ಗಡಿ ಚಿತ್ರಣ ಬದಲು

ಕಳೆದ ಮೇ.22ರಂದು ಭಾರತ-ಚೀನಾದ ಲಡಾಖ್ ಪೂರ್ವಭಾಗದಲ್ಲಿ ಇರುವ ಗಾಲ್ವಾನ್ ಕಣಿವೆಯ ಬಳಿ ಚಿತ್ರಣ ಇಂದಿನಂತೆ ಇರಲಿಲ್ಲ. ಮೇ.22 ಹಾಗೂ ಜೂನ್.22ರ ಅಂತರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಉಭಯ ರಾಷ್ಟ್ರಗಳಲ್ಲಿನ ಚಿತ್ರಣ ಬದಲಾಗಿರುವ ಬಗ್ಗೆ ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ ಟಿಟ್ಯೂಟ್ ಸಂಶೋಧಕರು Nathan Ruser ಎಂಬ ಟ್ವಿಟ್ಟರ್ ಖಾತೆಯಲ್ಲಿ ಜಿಫ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ GIF ಒಂದು ತಿಂಗಳಿನಲ್ಲಿ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಆಗಿರುವ ಬದಲಾವಣೆಯ ಸೂಕ್ಷ್ಮತೆಯನ್ನು ತೋರಿಸುತ್ತಿದೆ.

ಗಡಿಯಲ್ಲಿ ಸೇನೆಯ ಪ್ರಮಾಣ ಹೆಚ್ಚಿಸಿದ ಚೀನಾ

ಗಡಿಯಲ್ಲಿ ಸೇನೆಯ ಪ್ರಮಾಣ ಹೆಚ್ಚಿಸಿದ ಚೀನಾ

ಕಳೆದ ಜೂನ್.22 ರಂದು ಗಾಲ್ವಾನ್ ಕಣಿವೆಗೆ ಸಂಬಂಧಿಸಿದ ಉಪಗ್ರಹದ ಚಿತ್ರಣಕ್ಕೆ 'ನಿಷ್ಕ್ರಿಯಗೊಳಿಸುವಿಕೆ' ಎಂಬುದು ನಿಜವಾಗಿ ಸರ್ಕಾರ ಬಳಸಬೇಕಾದ ಪದವಲ್ಲ ಎಂದು ತೋರಿಸುತ್ತದೆ. ಏಕೆಂದರೆ ಉಭಯ ರಾಷ್ಟ್ರಗಳ ಗಡಿಯಲ್ಲಿ ಚೀನಾ ಸೇನೆಯ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರನ್ನು ಕರೆ ತರಲಾಗಿದ್ದು, ಶಿಬಿರಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಭಾರತ-ಚೀನಾ ಗಡಿಯಿಂದ 1 ಕಿಲೋ ಮೀಟರ್ ದೂರದಲ್ಲಿ ಮೊದಲಿಗೆ 3 ಸೇನಾ ಶಿಬಿರಗಳನ್ನು ಹೊಂದಿದ್ದ ಚೀನಾ, ಇದೀಗ ಅದರ ಸಂಖ್ಯೆಯನ್ನು 46ಕ್ಕೆ ಹೆಚ್ಚಿಸಿದೆ. ಅಂದರೆ ಬರೋಬ್ಬರಿ ಶೇ.1500ರಷ್ಟು ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವುದು ಸ್ಪಷ್ಟವಾಗಿದೆ.

ಸೇನಾ ಶಿಬಿರಗಳ ಸಂಖ್ಯೆ ಕಡಿತಗೊಳಿಸಿದ ಭಾರತ

ಸೇನಾ ಶಿಬಿರಗಳ ಸಂಖ್ಯೆ ಕಡಿತಗೊಳಿಸಿದ ಭಾರತ

ಒಂದು ಕಡೆಯಲ್ಲಿ ಚೀನಾ ತನ್ನ ಸೇನಾ ಶಿಬಿರ ಹಾಗೂ ಸೈನಿಕರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ. ಇನ್ನೊಂದು ಕಡೆಯಲ್ಲಿ ಭಾರತವು ಗಡಿಯಲ್ಲಿ ಮೊದಲಿದ್ದ ಶಿಬಿರಗಳ ಸಂಖ್ಯೆಯನ್ನೇ ಮತ್ತಷ್ಟು ಕಡಿತಗೊಳಿಸುತ್ತಿದೆ. ಕಳೆದ ಮೇ ತಿಂಗಳಿನಲ್ಲೇ 84ರಷ್ಟಿದ್ದ ಭಾರತೀಯ ಸೇನಾ ರಚನೆಯ ಪ್ರಮಾಣವನ್ನು 84 ರಿಂದ 17ಕ್ಕೆ ಕಡಿತಗೊಳಿಸಲಾಗಿತ್ತು. ಅಂದರೆ ಶೆ.80ರಷ್ಟು ಭಾರತೀಯ ಸೇನೆ, ಶಿಬಿರ ಹಾಗೂ ವಾಹನಗಳ ಸಂಖ್ಯೆಯನ್ನು ಇಳಿಸಲಾಗಿತ್ತು ಎಂದು ರೂಸರ್ ತಿಳಿಸಿದೆ.

ಜೂ.15ರಂದು ನಡೆದ ಸೇನಾ ಸಂಘರ್ಷ ಹಿನ್ನೆಲೆ

ಜೂ.15ರಂದು ನಡೆದ ಸೇನಾ ಸಂಘರ್ಷ ಹಿನ್ನೆಲೆ

ಕಳೆದ ಜೂನ್.15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿತ್ತು.

English summary
Satellite Images Shows Chinese Structures Within 1 KM Of LAC Has Grown From 3 To 46.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X