• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾರ್ವಜನಿಕ ಹಣ ದುರುಪಯೋಗ; ಇಸ್ರೇಲ್ ಪ್ರಧಾನಿ ಹೆಂಡತಿ ತಪ್ಪಿತಸ್ಥೆ

By ಅನಿಲ್ ಆಚಾರ್
|

ಇಸ್ರೇಲ್ ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೆಂಡತಿಯನ್ನು ವಂಚನೆ ಆರೋಪದ ಅಡಿಯಲ್ಲಿ ಅಲ್ಲಿನ ಕೋರ್ಟ್ ಭಾನುವಾರ ತಪ್ಪಿತಸ್ಥೆ ಎಂದು ಘೋಷಿಸಿದೆ. ಆಹಾರಕ್ಕಾಗಿ ಸರಕಾರದ ಹಣವನ್ನು ವಂಚನೆ ಮೂಲಕ ಬಳಸಿದ್ದಕ್ಕಾಗಿ ಈ ಆರೋಪ ನಿಗದಿ ಮಾಡಲಾಗಿದೆ. ತನ್ನ ತಪ್ಪನ್ನು ಆಕೆ ಒಪ್ಪಿಕೊಂಡಿದ್ದು, ಕಡಿಮೆ ಶಿಕ್ಷೆ ವಿಧಿಸಲು ಮನವಿ ಮಾಡಿದ್ದಾರೆ.

ಸಾರಾ ನೆತನ್ಯಾಹು ಪ್ರಧಾನಿ ಬೆಂಜಮಿನ್ ಅವರ ಪತ್ನಿ. ಮತ್ತೊಬ್ಬ ವ್ಯಕ್ತಿಯ ತಪ್ಪನ್ನು ದುರುಪಯೋಗ ಮಾಡಿಕೊಂಡ ಕಾರಣಕ್ಕಾಗಿ ದಂಡ ಹಾಗೂ ಪರಿಹಾರ ಕಟ್ಟಲು ಆದೇಶ ನೀಡಲಾಗಿದೆ. ನೆತನ್ಯಾಹು ಅವರಿಗೂ 10,000 ಶೆಕೆಲ್ಸ್ ($ 2,800) ದಂಡವನ್ನು ವಿಧಿಸಿದ್ದು, ಹೆಚ್ಚುವರಿ 45,000 ಶೆಕೆಲ್ಸ್ ಮರುಪಾವತಿಗೆ ಆದೇಶಿಸಲಾಗಿದೆ. ಆಕೆ ಮನವಿ ಮಾಡಿದ್ದರಿಂದ, ಮರುಪಾವತಿಗೆ ಒಂಬತ್ತು ಕಂತುಗಳ ಅವಕಾಶ ನೀಡಲಾಗಿದೆ.

ಭ್ರಷ್ಟಾಚಾರ ಆರೋಪ: ಇಸ್ರೇಲ್ ಪ್ರಧಾನಿ ಬೆಂಜಮಿನ್ ಗೆ ಭೀತಿ

ಇಬ್ಬರು ವ್ಯಕ್ತಿಗಳ ಮಧ್ಯೆ ನಡೆದಿರುವ ಒಪ್ಪಂದವು ಅದರ ಗಂಭೀರತೆ ಹಾಗೂ ಅಪರಾಧ ಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ತಮ್ಮ ತೀರ್ಪಿನಲ್ಲಿ ನ್ಯಾಯಾಧೀಶರು ಹೇಳಿದ್ದಾರೆ. ಸಾರಾಗೆ 60 ವರ್ಷ ವಯಸ್ಸು. ಬೆಂಜಮಿನ್ ನೆತನ್ಯಾಹು ಅವರ ದೀರ್ಘಾವಧಿ ಆಡಳಿತದ ವೇಳೆ, ಆರಂಭದಲ್ಲಿ 2018ರ ಜೂನ್ ನಲ್ಲಿ ಮೊದಲ ಬಾರಿಗೆ ಆರೋಪ ಕೇಳಿಬಂತು.

ಪ್ರಧಾನಿ ಅಧಿಕೃತ ನಿವಾಸದಲ್ಲಿ ಬಾಣಸಿಗರು ಇದ್ದರೂ ಹೊರಗಿನಿಂದ ಆಹಾರವನ್ನು ಖರೀದಿಸುವ ಮೂಲಕ ವಿಶ್ವಾಸಕ್ಕೆ ಧಕ್ಕೆ ಮತ್ತು ವಂಚನೆ ಆರೋಪ ಕೇಳಿಬಂತು. ದೋಷಾರೋಪದಲ್ಲಿನ ತಿದ್ದುಪಡಿಗೆ ಭಾನುವಾರ ಒಪ್ಪಿಗೆ ನೀಡಿದ್ದು, ಲಂಚದ ಆರೋಪ ಕೈ ಬಿಡಲಾಯಿತು.

English summary
Sara Netanyahu, wife of Israel PM convicted for misusing public funds. PM Benjamin Netanyahu also fined in this case on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X