ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್! ಸಮುದ್ರದ ಮರಳು ಕದ್ದರೆ 3 ಲಕ್ಷ ದಂಡ ಕಟ್ಟಬೇಕಾದೀತು!

|
Google Oneindia Kannada News

ಕಡಲ ಕಿನಾರೆಯಲ್ಲಿ ಓಡಾಡುವುದೇ ಅಹ್ಲಾದಕರ, ಅದರಲ್ಲೂ ಸಮುದ್ರ ದಡದ ಮರಳಿನಲ್ಲಿ ಸಂಭ್ರಮಿಸದೇ ಇದ್ದರೆ ಪ್ರವಾಸ ಪೂರ್ಣವಾಗುವುದಿಲ್ಲ. ಹೀಗೆ ಸಮುದ್ರದ ಅಸ್ತಿತ್ವದ ಭಾಗವಾಗಿರುವ ಮರಳನ್ನ ಖದೀಮರು ಹಾಳು ಮಾಡುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಸಮುದ್ರ ಸಂಪತ್ತನ್ನು ಕದಿಯಲಾಗಿದೆ. ಹೀಗಾಗಿಯೇ ಭಾರತದ ಬಹುತೇಕ ಕಡಲ ದಡಗಳಲ್ಲಿ ಮೊದಲಿನಂತೆ ಕಪ್ಪೆಚಿಪ್ಪು, ಶಂಖ ಸೇರಿದಂತೆ ಮತ್ತಿತರ ಸಮುದ್ರ ಜೀವಿಗಳ ಪಳಿಯುಳಿಕೆ ಕಾಣುತ್ತಿಲ್ಲ.

ಆದರೆ ಇಟಲಿಯಲ್ಲಿ ಒಂದು ದ್ವೀಪವಿದೆ, ಅಲ್ಲಿನ ಕಡಲ ಕಿನಾರೆ ಅಂದರೆ ಸಮುದ್ರದ ದಡ ಅದೆಷ್ಟು ಸುಂದರವಾಗಿದೆ ಅಂತೀರ. ಅದನ್ನ ನೋಡಲು ಎರಡು ಕಣ್ಣು ಸಾಲದು, ಅಷ್ಟು ಸುಂದರವಾಗಿದೆ ಈ ಬೀಚ್. ಇಟಲಿಯ ಸಾರ್ಡಿನಿಯ ದ್ವೀಪದಲ್ಲಿ ಇಂತಹ ಮನಸೆಳೆಯುವ ಕಡಲ ತಡಿ ಇದೆ. ಆದರೆ ಇಲ್ಲಿನ ಸೌಂದರ್ಯವೇ ಬೀಚ್‌ಗೆ ಮುಳುವಾಗುತ್ತಿದೆ.

ಇಲ್ಲಿಗೆ ಬರುವ ಪ್ರವಾಸಿಗರು ಮರಳಿ ಹೋಗುವಾಗ ಬಾಟಲ್‌ನಲ್ಲಿ ಮರಳು, ಕಪ್ಪೆಚಿಪ್ಪು, ಶಂಖ ಮತ್ತಿತರ ವಸ್ತುಗಳನ್ನು ಕದ್ದುಮುಚ್ಚಿ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಹೀಗೆ ಮಾಡುವವರಿಗೆ ಸ್ಥಳೀಯ ಅಧಿಕಾರಿಗಳು ಸರಿಯಾಗೇ ಬುದ್ಧಿ ಕಲಿಸುತ್ತಿದ್ದು, ಬರೋಬ್ಬರಿ 3 ಲಕ್ಷ ರೂಪಾಯಿ ದಂಡ ಹಾಕುತ್ತಿದ್ದಾರೆ.

Sand thieves facing big amount of fine in Italy


2017ರಿಂದ ಟಫ್ ರೂಲ್ಸ್..!
ಮೊದಲೆಲ್ಲಾ ಸಾರ್ಡಿನಿಯ ದ್ವೀಪದಲ್ಲಿ ಮರಳು ಕೊಂಡೊಯ್ಯಲು ನಿಷೇಧ ಇರಲಿಲ್ಲ. ಆದ್ರೆ ಯಾವಾಗ ಇದು ಅತಿರೇಕಕ್ಕೆ ಹೋಯಿತೋ ಆಗ ಸ್ಥಳೀಯರು ರೊಚ್ಚಿಗೆದ್ದರು. ಕೆಲವು ಕಿರಾತಕರು ಲೋಡ್‌ಗಟ್ಟಲೇ ಮರಳನ್ನು ಕದ್ದು ಮಾರುತ್ತಿರುವುದು ಗೊತ್ತಾಯಿತು. ಕೂಡಲೇ ಅಲರ್ಟ್ ಆದ ಸ್ಥಳೀಯರು, ಅಧಿಕಾರಿಗಳಿಗೆ ಈ ವಿಷಯ ಮುಟ್ಟಿಸಿದರು. ಸ್ಥಳೀಯ ಆಡಳಿತ 2017ರಿಂದ ಸಾರ್ಡಿನಿಯ ದ್ವೀಪದ ಬೀಚ್‌ನಲ್ಲಿ ಮರಳು ಅಥವಾ ಸಮುದ್ರ ಸಂಪತ್ತನ್ನು ಕೊಂಡಯ್ಯಲು ನಿಷೇಧ ಹೇರಿತು. ಆದರೆ ಒಂದು ಸಾರಿ ಲಾಭದ ರುಚಿ ನೋಡಿದ್ದ ಖದೀಮ ಪಡೆ ಸುಮ್ಮನೇ ಕೂರುತ್ತಾ ಹೇಳಿ? ಇಲ್ಲ ಕದ್ದುಮುಚ್ಚಿ ಮರಳನ್ನ ಸಾಗಿಸುತ್ತಿತ್ತು. ಹೀಗಾಗಿಯೇ ಭಾರಿ ಮೊತ್ತದ ಫೈನ್ ಫಿಕ್ಸ್ ಮಾಡಿ, ಖದೀಮರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಇಟಲಿಯ ಅಧಿಕಾರಿಗಳು. ಈ ಮೂಲಕ ಸಮದ್ರದ ಸಂಪತ್ತನ್ನು ಕಾಪಾಡುತ್ತಿದೆ ಇಟಲಿಯ ಸಾರ್ಡಿನಿಯ ದ್ವೀಪ.

ಜೀಪ್‌ನಲ್ಲಿ ಮರಳು ಕದ್ದಿದ್ದರು..!
ಇಲ್ಲಿಯವರೆಗೂ ಪತ್ತೆಯಾದ ಅತಿದೊಡ್ಡ ಕಳ್ಳತನ ಪ್ರಕರಣ ಎಂದರೆ ಇಬ್ಬರು ದಂಪತಿಗಳದ್ದು. ಬೀಚ್‌ಗೆ ತಮ್ಮ ರಜಾದಿನ ಕಳೆಯುವವರಂತೆ ಬಂದಿದ್ದ ದಂಪತಿ, ಮರಳಿ ಹೋಗವಾಗ ತಮ್ಮ ಜೀಪ್‌ನ ಗಾಲಿಗಳಲ್ಲಿ ಮರಳು ತುಂಬಿಕೊಂಡಿದ್ದರು. ಹೀಗೆ ಸುಮಾರು 40 ಟನ್‌ನಷ್ಟು ಮರಳನ್ನು ಜೀಪ್‌ನ ವಿವಿಧೆಡೆ ಮುಚ್ಚಿಟ್ಟು, ಸಾರ್ಡಿನಿಯ ದ್ವೀಪದಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದರು. ಆದರೆ ಅಧಿಕಾರಿಗಳ ತಪಾಸಣೆ ವೇಳೆ ಲಾಕ್ ಆಗಿದ್ದರು. ಈ ಘಟನೆಯಲ್ಲಿ ದಂಪತಿ ಲಕ್ಷಾಂತರ ರೂಪಾಯಿ ದಂಡ ಕಟ್ಟಿದ್ದರು. ಬಳಿಕ ಸಾರ್ಡಿನಿಯ ದ್ವೀಪದಲ್ಲಿ ತಪಾಸಣೆ ಮತ್ತಷ್ಟು ಬಿಗಿಯಾಗಿದೆ.

Sand thieves facing big amount of fine in Italy

ಹಾಲು ನೊರೆಯಂತಹ ನೀರು..!
ಸಾರ್ಡಿನಿಯ ದ್ವೀಪದ ಬಗ್ಗೆ ಹೇಳುವುದಕ್ಕಿಂತ, ನೋಡಿ ಆಹ್ಲಾದಿಸುವುದೇ ಉತ್ತಮ. ಏಕೆಂದರೆ ಅಷ್ಟೊಂದು ಚೆಂದವಾಗಿದೆ ಈ ಕಡಲ ಕಿನಾರೆ. ತಿಳಿಯಾದ ನೀರು, ಬಿಳಿಯಾದ ಮರಳು, ಬಿಸಿಯಾದ ಗಾಳಿಯ ಜೊತೆಗೆ, ಆಗಾಗ ಮುದ ನೀಡುವ ಸಮುದ್ರದ ಸ್ನಾನ. ಅಬ್ಬಬ್ಬಾ ಇದನ್ನೆಲ್ಲಾ ವಿವರಿಸಲು ದಿನಗಳೇ ಸಾಲದು. ಅಂದಾಃಗೆ ಇಲ್ಲಿನ ಸೌಂದರ್ಯ ಹಾಗೂ ಪ್ರಕೃತಿಯ ಸೆಳೆತಕ್ಕೆ ಮನಸೋಲದವರೇ ಇಲ್ಲ ಎನ್ನಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸೌಂದರ್ಯ ನಾಶ ಮಾಡುವ ಕೆಲಸ ನಡೆಯುತ್ತಿದ್ದು, ಇದಕ್ಕೆಲ್ಲಾ ಸಾರ್ಡಿನಿಯ ಜನರೇ ಬ್ರೇಕ್ ಹಾಕಿದ್ದಾರೆ. ಖದೀಮರಿಗೆ ಲಕ್ಷಾಂತರ ರೂಪಾಯಿ ದಂಡ ಹಾಕಿ ಸರಿಯಾಗಿ ಬುದ್ಧಿ ಕಲಿಸುತ್ತಿದ್ದಾರೆ.

English summary
Italian island Sardinia is fining a big amount to the sand thieves to protect the natural resource.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X