ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚ ನೀಡಿದ ಆರೋಪ: ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ ಉಪಾಧ್ಯಕ್ಷನಿಗೆ ಜೈಲು ಶಿಕ್ಷೆ

|
Google Oneindia Kannada News

ನವದೆಹಲಿ, ಜನವರಿ 18: ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮತ್ತು ಮೆಮೊರಿ ಚಿಪ್ ತಯಾರಕ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಜೇ-ವೈ-ಲೀ ಲಂಚ ಮತ್ತು ಭ್ರಷ್ಟಾಚಾರದ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ದಕ್ಷಿಣ ಕೊರಿಯಾದ ನ್ಯಾಯಾಲಯವು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಉಪಾಧ್ಯಕ್ಷ ಜೇ ವೈ ಲೀ ಅವರಿಗೆ ಎರಡೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಪಾರ್ಕ್ ಗಿಯುನ್-ಹೀ ಸೇರಿದಂತೆ ಹಲವಾರು ದೊಡ್ಡರಿಗೆ ಲಂಚ ನೀಡಿದ ಆರೋಪ ಅವರ ಮೇಲಿದೆ. ಲೀ ವಿರುದ್ಧ ಹೊರಿಸಲಾಗಿರುವ ಭ್ರಷ್ಟಾಚಾರದ ಆರೋಪದಲ್ಲಿ 200 ಕೋಟಿ ರೂ.ಗಳ ಲಂಚ ನೀಡುವುದು ಸೇರಿದೆ.

 Samsung Electronics Vice Chairman Jay Y Lee Sent Back To Prison

2016ರ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ದಕ್ಷಿಣ ಕೊರಿಯಾದ ನ್ಯಾಯಾಲಯವು ಅವರಿಗೆ ಎರಡೂವರೆ ವರ್ಷ ಶಿಕ್ಷೆ ವಿಧಿಸಿತು. ಈ ಹಗರಣವು ದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ನಾಂದಿ ಹಾಡಿತು ಮತ್ತು ಆಗಿನ ದಕ್ಷಿಣ ಕೊರಿಯಾದ ಅಧ್ಯಕ್ಷ ಪಾರ್ಕ್ ಗಿಯುನ್-ಹೀ ಅವರು ಕೆಳಗಿಳಿಯಬೇಕಾಯಿತು.

ಬಹುನಿರೀಕ್ಷಿತ ವಿಚಾರಣೆಯಲ್ಲಿ, ಆಗಿನ ಅಧ್ಯಕ್ಷ ಪಾರ್ಕ್ ಗಿಯುನ್-ಹೀ ಮತ್ತು ಅವನ ಆಪ್ತ ವ್ಯಕ್ತಿಗೆ ಲಂಚ ನೀಡಿದ ಆರೋಪದಲ್ಲಿ ಸಿಯೋಲ್ ಹೈಕೋರ್ಟ್ ಲೀ ತಪ್ಪಿತಸ್ಥರೆಂದು ಹೇಳಿತು. 2015 ರಲ್ಲಿ ಸ್ಯಾಮ್‌ಸಂಗ್‌ನ ಎರಡು ಪಾಲುದಾರ ಕಂಪನಿಗಳ ವಿಲೀನಕ್ಕೆ ಸರ್ಕಾರದ ಬೆಂಬಲವನ್ನು ಲೀ ಬಯಸಿದ್ದರು, ಮತ್ತು ಅದಕ್ಕಾಗಿಯೇ ಅವರು ಅಧ್ಯಕ್ಷ ಪಾರ್ಕ್ ಗಿಯುನ್-ಹೀ ಮತ್ತು ಅವರಿಗೆ ಹತ್ತಿರವಿರುವ ವ್ಯಕ್ತಿಗೆ ಲಂಚ ನೀಡಿದರು. ಈ ಒಪ್ಪಂದವು ದೇಶದ ಅತಿದೊಡ್ಡ ವ್ಯಾಪಾರ ಗುಂಪಿನ ಮೇಲೆ ಲೀ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸಿತು.

ಯೋಂಗ್ ತನ್ನ ತಂದೆಯ ಮರಣದ ನಂತರ 2014 ರಲ್ಲಿ ಕಂಪನಿಯ ಆಡಳಿತವನ್ನು ವಹಿಸಿಕೊಂಡ. ಲೀ ಲಂಚ ನೀಡಿದ್ದು, ತನ್ನ ವ್ಯವಹಾರದಲ್ಲಿ ಸಹಾಯ ಮಾಡುವ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವಂತೆ ಅಧ್ಯಕ್ಷರನ್ನು ಕೇಳಿಕೊಂಡಿದ್ದಾನೆ ಎಂದು ನ್ಯಾಯಾಲಯ ಹೇಳಿದೆ.

English summary
A South Korean court has sentenced Samsung Electronics vice chairman Jay Y Lee to two-and-a-half years in prison
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X