ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಂಚೆಸ್ಟರ್ ಅರೇನಾ ದುರಂತದ ಹಿಂದಿದ್ದಿದ್ದು ಗೋಮುಖವ್ಯಾಘ್ರ!

ಸಲ್ಮಾನ್ ಬಗ್ಗೆ ಇಲ್ಲಿನ ಲಂಡನ್ನಿನ ಭದ್ರತಾ ದಳಗಳಿಗೆ ಮೊದಲೇ ಮಾಹಿತಿ ಇತ್ತಾದರೂ, ನೋಡುವುದಕ್ಕೆ ಮುಗ್ಧನಂತಿದ್ದ ಈತ ಅಷ್ಟೊಂದು ಅಪಾಯಕಾರಿಯಲ್ಲ ಎಂದು ಇಲ್ಲಿನ ಭದ್ರತಾ ದಳ ಈತನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ!

By ವಿಕಾಸ್ ನಂಜಪ್ಪ
|
Google Oneindia Kannada News

ಮ್ಯಾಚೆಸ್ಟರ್, ಮೇ 24: ಮೇ 22 ಸೋಮವಾರ ಸಂಜೆ ಲಂಡನ್ನಿನ ಮ್ಯಾಂಚೆಸ್ಟರ್ ನಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಕಾರಣನಾದವನನ್ನು ಸಲ್ಮಾನ್ ರಮಾದನ್ ಅಬೈದಿ ಎಂದು ಗುರುತಿಸಲಾಗಿದೆ.

ಈತನ ಬಗ್ಗೆ ಇಲ್ಲಿನ ಲಂಡನ್ನಿನ ಭದ್ರತಾ ದಳಗಳಿಗೆ ಮೊದಲೇ ಮಾಹಿತಿ ಇತ್ತಾದರೂ, ನೋಡುವುದಕ್ಕೆ ಮುಗ್ಧನಂತಿದ್ದ ಈತ ಅಷ್ಟೊಂದು ಅಪಾಯಕಾರಿಯಲ್ಲ ಎಂದು ಇಲ್ಲಿನ ಭದ್ರತಾ ದಳ ಈತನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ! ಒಟ್ಟಿನಲ್ಲಿ ಈ ದುರಂತದ ಹಿಂದಿದ್ದಿದ್ದು ಗೋವಿನ ಮುಖವಾಡ ಹೊತ್ತ, ಕ್ರೂರ ವ್ಯಾಘ್ರ ಎಂಬುದು ಇದೀಗ ಬಯಲಾಗಿದೆ.[ಮ್ಯಾಂಚೆಸ್ಟರ್ ಸ್ಫೋಟ : ಎದೆ ನಡುಗಿಸುವ ಭೀಕರ ವಿಡಿಯೋ]

Salman Ramadan Abeidi, man behind Manchester Arena attack

22 ವರ್ಷದ ಸಲ್ಮಾನ್ ಐಸಿಸ್ ಸಂಘಟನೆಯವನಾಗಿದ್ದು, ಮ್ಯಾಂಚೆಸ್ಟರ್ ಅರೆನಾದಲ್ಲಿ ಆತ ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಗೆ 22 ಜನ ಅಸುನೀಗಿದ್ದರಲ್ಲದೆ, ಹಲವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ.[ಐಎಸ್ ಐಎಸ್ ನಿಂದ ಇಂಗ್ಲೆಂಡ್ ದಾಳಿಯ ಮೃತ್ಯು ಕೇಕೆ ಸಂದೇಶ]

ದಾಳಿಗೆ ಕಾರಣೀಕರ್ತನಾದ ಸಲ್ಮಾನ್ ಲಿಬಿಯಾ ಮೂಲದವನು ಎನ್ನಲಾಗಿದೆ. ನೋಡುವುದಕ್ಕ ಸಜ್ಜನನಂತೇ ಇದ್ದ ಸಲ್ಮಾನ್ ಬಗ್ಗೆ ಆತನ ನೆರೆಹೊರೆಯವರಿಗೆಲ್ಲ ವಿಪರೀತ ಗೌರವವಿತ್ತು. ಅದೂ ಅಲ್ಲದೆ ಆತ ಜಿಹಾದಿ ಸಿದ್ಧಾಂತಕ್ಕೆ ಮರುಳಾಗಿದ್ದ

ಕೆಲವರ ಪ್ರಕಾರ ಈ ಕೆಲಸವನ್ನು ಆತ ಇನ್ಯಾರದೋ ನಿರ್ದೇಶನದ ಮೇಲೆ ಮಾಡಿದ್ದಾನೆ, ಆತ ತಾನೇ ಇಷ್ಟಪಟ್ಟು ಮಾಡಿದ ಕೆಲಸ ಇದಲ್ಲ ಎಂದು ಆತನನ್ನು ಬಲ್ಲವರು ಹೇಳುತ್ತಾರೆ.

English summary
The police have named Salman Ramadan Abeidi, a Mancunian of Libyan dissent as the terrorist who carried out the Manchester Arena attack in UK which killed 22 and injured 59 others. The 22 year old was identified as the terrorist even as the Islamic State claimed credit for the attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X