ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಂಗಳ ಸಂಬಳ ಎಷ್ಟು? ಇಲ್ಲಿದೆ ಬಹಿರಂಗಗೊಂಡ ಮಾಹಿತಿ

|
Google Oneindia Kannada News

ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವ ಪಾಕಿಸ್ತಾನದ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮಗೊಳ್ಳುತ್ತಿದೆ. ಹಣದುಬ್ಬರದ ಕೊರೆತೆ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ದೈನಂದಿನ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ.

ಅಲ್ಲಿನ ಪರಿಸ್ಥಿತಿ ಹೀಗಿರುವಾಗ, ಪ್ರಧಾನಿಯ ಸಂಬಳವನ್ನು ರಾಷ್ಟ್ರಪತಿಗಳು ಪಡೆಯುವಷ್ಟು ಏರಿಸಲು ಪ್ರಸ್ತಾವನೆಯನ್ನು ಕಳೆದ ಜನವರಿ ತಿಂಗಳಲ್ಲಿ ಸಲ್ಲಿಸಲಾಗಿತ್ತು. ಆದರೆ, ಈ ಬಗ್ಗೆ ಪಾಕಿಸ್ತಾನದ ಸರಕಾರ ಯಾವುದೇ ತೀರ್ಮಾನವನ್ನು ಸದ್ಯಕ್ಕೆ ತೆಗೆದುಕೊಂಡಿಲ್ಲ.

ತೆರಿಗೆ ಪಾವತಿಸುವುದು ದೇಶದ ಅಭಿವೃದ್ದಿಗೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸಲು ಇತ್ತೀಚೆಗೆ ಪ್ರಧಾನಿ ಇಮ್ರಾನ್ ಖಾನ್, ಉದ್ಯಮಿಗಳ ಸಭೆಯನ್ನು ಕರೆದಿದ್ದರು. ಆ ವೇಳೆ, ಇಮ್ರಾನ್, ತನ್ನ ಸಂಬಳದ ಬಗ್ಗೆ ಮಾತನಾಡಿದ್ದಾರೆ.

ಮಾಜಿ ಪ್ರಧಾನಿ ನವಾಜ್ ಷರೀಫ್ 'ಪಲಾಯನ': ಪಾಕಿಸ್ತಾನ ಘೋಷಣೆಮಾಜಿ ಪ್ರಧಾನಿ ನವಾಜ್ ಷರೀಫ್ 'ಪಲಾಯನ': ಪಾಕಿಸ್ತಾನ ಘೋಷಣೆ

ತಮಗೆ ಬರುತ್ತಿರುವ ಸಂಬಳದಲ್ಲಿ ಮನೆ ಖರ್ಚು ನಿಭಾಯಿಸುವುದು ಕಷ್ಟ ಎಂದು ಉದ್ಯಮಿಗಳ ಸಭೆಯಲ್ಲಿ ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ. ಇಮ್ರಾನ್ ಖಾನ್ ಗೆ ಬರುತ್ತಿರುವ ಸಂಬಳ ಎಷ್ಟು ಎಂದು ತೋರಿಸುವ ಅವರ ಸ್ಯಾಲರಿ ಸ್ಲಿಪ್ /ಪೇ ಸ್ಲಿಪ್ ಬಹಿರಂಗಗೊಂಡಿದೆ.

ಪ್ರಧಾನಿ ಇಮ್ರಾನ್ ಖಾನ್ ಸಂಬಳದಲ್ಲಿ ಏರಿಕೆಯಿಲ್ಲ

ಪ್ರಧಾನಿ ಇಮ್ರಾನ್ ಖಾನ್ ಸಂಬಳದಲ್ಲಿ ಏರಿಕೆಯಿಲ್ಲ

ಸಂಬಳ ಜಾಸ್ತಿ ಮಾಡುವ ಪ್ರಸ್ತಾವನೆಯ ವಿಚಾರದಲ್ಲಿ ಪಾಕ್ ಪ್ರಧಾನಮಂತ್ರಿ ಕಾರ್ಯಾಲಯ ಸ್ಪಷ್ಟನೆಯನ್ನು ನೀಡಿತ್ತು. "ಪ್ರಧಾನಿ ಇಮ್ರಾನ್ ಖಾನ್ ಸಂಬಳದಲ್ಲಿ ಏರಿಕೆಯಿಲ್ಲ. ಈ ಬಗ್ಗೆ ಓಡಾಡುತ್ತಿರುವ ಸುದ್ದಿ, ಸತ್ಯಕ್ಕೆ ದೂರವದುದು" ಎಂದು ಪಿಎಂಓ ಹೇಳಿತ್ತು. ಇಮ್ರಾನ್ ಅವರ ಸಂಬಳವನ್ನು ಮಾಸಿಕ ಎಂಟು ಲಕ್ಷ ಪಾಕಿಸ್ತಾನ ರೂಪಾಯಿಗೆ ಏರಿಸಲಾಗುತ್ತಿದೆ ಎಂದು ಅಲ್ಲಿನ ಡಾನ್ ಪತ್ರಿಕೆ ವರದಿ ಮಾಡಿತ್ತು.

ಮನೆ ಖರ್ಚು, ಸಿಬ್ಬಂದಿ ವೇತನವನ್ನು ನಿಭಾಯಿಸುವುದೇ ಕಷ್ಟ

ಮನೆ ಖರ್ಚು, ಸಿಬ್ಬಂದಿ ವೇತನವನ್ನು ನಿಭಾಯಿಸುವುದೇ ಕಷ್ಟ

ಉದ್ಯಮಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಇಮ್ರಾನ್ ಖಾನ್, "ನನಗೆ ಬರುತ್ತಿರುವ ಸಂಬಳದಿಂದ ಮನೆ ಖರ್ಚು, ಸಿಬ್ಬಂದಿ ವೇತನವನ್ನು ನಿಭಾಯಿಸುವುದೇ ಕಷ್ಟವಾಗುತ್ತಿದೆ. ಸರಿಯಾಗಿ ತೆರಿಗೆ ಪಾವತಿಸಿದರೆ ಸರಕಾರ ನಡೆಸಲು ಸಹಾಯವಾಗುತ್ತದೆ, ಸುಭದ್ರ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಹಾಗಾಗಿ, ಸರಿಯಾದ ವೇಳೆ ತೆರಿಗೆ ಪಾವತಿಸುವುದನ್ನು ತಪ್ಪಿಸಬೇಡಿ" ಎಂದು ಇಮ್ರಾನ್ ಖಾನ್ ಮನವಿ ಮಾಡಿದ್ದರು.

ತಮ್ಮ ವಿದ್ಯಾರ್ಥಿಗಳಿಗೆ ಚೀನಾದಿಂದ ಬರಬೇಡಿ ಎಂದ ಇಮ್ರಾನ್ ಖಾನ್ತಮ್ಮ ವಿದ್ಯಾರ್ಥಿಗಳಿಗೆ ಚೀನಾದಿಂದ ಬರಬೇಡಿ ಎಂದ ಇಮ್ರಾನ್ ಖಾನ್

ಪಾಕ್ ಪ್ರಧಾನಿಯ ಸಂಬಳವನ್ನು ಏರಿಸಲು ಕ್ಯಾಬಿನೆಟ್ ನಿರ್ಧರಿಸಿತ್ತು

ಪಾಕ್ ಪ್ರಧಾನಿಯ ಸಂಬಳವನ್ನು ಏರಿಸಲು ಕ್ಯಾಬಿನೆಟ್ ನಿರ್ಧರಿಸಿತ್ತು

ಪಾಕಿಸ್ತಾನದ ಜಂಗ್ ಪತ್ರಿಕೆ ವರದಿ ಮಾಡಿದ ಪ್ರಕಾರ, ನಾಲ್ಕು ಪ್ರಾಂತ್ಯಗಳ ಮುಖ್ಯಮಂತ್ರಿಗಳು ಮತ್ತು ಇಮ್ರಾನ್ ಖಾನ್ ಕ್ಯಾಬಿನೆಟಿನ ಫೆಡರಲ್ ಸಚಿವರು ಪಡೆಯುತ್ತಿರುವ ಸಂಬಳಕ್ಕಿಂತಲೂ ಪ್ರಧಾನಮಂತ್ರಿಯ ಸಂಬಳ ಕಮ್ಮಿ ಎಂದು ಪತ್ರಿಕೆ ಹೇಳಿದೆ. ಹೀಗಾಗಿಯೇ, ಪಾಕ್ ಪ್ರಧಾನಿಯ ಸಂಬಳವನ್ನು ಏರಿಸಲು ಕ್ಯಾಬಿನೆಟ್ ನಿರ್ಧರಿಸಿತ್ತು ಎಂದು ಹೇಳಲಾಗುತ್ತಿದೆ. ಇಮ್ರಾನ್ ಸಂಬಳ ಎಷ್ಟು? ಮುಂದಿನ ಸ್ಲೈಡಿನಲ್ಲಿ:

ಇಮ್ರಾನ್ ಖಾನ್ ಸ್ಯಾಲರಿ ಸ್ಲಿಪ್ ಬಹಿರಂಗ

ಇಮ್ರಾನ್ ಖಾನ್ ಸ್ಯಾಲರಿ ಸ್ಲಿಪ್ ಬಹಿರಂಗ

ಪತ್ರಿಕೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಇಮ್ರಾನ್ ಖಾನ್ ಅವರ ಎಂಪ್ಲಾಯಿ ನಂಬರ್: 50414755

ಪಾಕ್ ರೂ.ಗಳಲ್ಲಿ (ಮಾಸಿಕ)
ಮೂಲ ವೇತನ: 107,280
ಮಾಸಿಕ ಭತ್ಯೆ: 50,000
ತಾತ್ಕಾಲಿಕ ಪರಿಹಾರ ಭತ್ಯೆ: 21,456
ತಾತ್ಕಾಲಿಕ ಭತ್ಯೆ: 12,110
ಇತರ ಭತ್ಯೆ: 10,728
ಒಟ್ಟು: 201,574
(-) ಐಟಿ: 4,595

ನೆಟ್ ಟೇಕ್ ಹೋಂ: 196,979

English summary
Salary Slip Shows Pakistan Prime Minister Imran Khan Getting Salary Less Than Ministers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X