ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರಿಗೆ ಪಾಕ್ ಸುರಕ್ಷಿತ ಸ್ವರ್ಗ : ಇದು ಸಹಿಸಲಸಾಧ್ಯ

By Kiran B Hegde
|
Google Oneindia Kannada News

ನವದೆಹಲಿ, ಜ. 23: ಭಾರತದಲ್ಲಿ ಬರಾಕ್ ಒಬಾಮಾ ಸ್ವಾಗತಕ್ಕೆ ಅಭೂತಪೂರ್ವ ತಯಾರಿ ನಡೆಯುತ್ತಿದೆ. ಅತ್ತ ಪ್ರವಾಸದ ಸಿದ್ಧತೆಯಲ್ಲಿರುವ ಒಬಾಮ ಭಾರತಕ್ಕೆ ಸಮಾಧಾನ ತರುವಂತಹ ಮಾತನಾಡಿದ್ದಾರೆ. ಉಗ್ರವಾದ ವಿರುದ್ಧದ ಹೋರಾಟದಲ್ಲಿ ಅಮೆರಿಕ ಹಾಗೂ ಭಾರತ ಒಗ್ಗಟ್ಟಾಗಿವೆ ಎಂದಿದ್ದಾರೆ.

"ಉಗ್ರವಾದವನ್ನು ದಮನ ಮಾಡುವ ಉದ್ದೇಶಕ್ಕಾಗಿ ಅಮೆರಿಕವು ಪಾಕಿಸ್ತಾನದೊಂದಿಗೆ ಕೆಲಸ ಮಾಡುತ್ತಿದೆ. ಆದರೆ, ಪಾಕಿಸ್ತಾನವು ಉಗ್ರರಿಗೆ ಸುರಕ್ಷಿತ ಸ್ವರ್ಗದಂತಾಗಿರುವುದನ್ನು ಸಹಿಸಿಕೊಳ್ಳುವುದು ಅಸಾಧ್ಯ. ಮುಂಬೈ ಮೇಲೆ ದಾಳಿ ನಡೆಸಿದ ಉಗ್ರರನ್ನು ಶಿಕ್ಷಿಸಬೇಕೆಂದು ಅಮೆರಿಕ ಈಗಾಗಲೇ ಸ್ಪಷ್ಟಪಡಿಸಿದೆ" ಎಂದು ಬರಾಕ್ ಒಬಾಮಾ ಇಂಡಿಯಾ ಟುಡೆ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. [ಒಬಾಮ ಆಹಾರ 3 ಹಂತದಲ್ಲಿ ಪರೀಕ್ಷೆ]

ಮುಂಬೈ ಮೇಲೆ 26/11 ರಂದು ನಡೆದ ದಾಳಿಯನ್ನು ನ್ಯೂ ಯಾರ್ಕ್‌ನ ಅವಳಿ ಕಟ್ಟಡಗಳ ಮೇಲೆ ನಡೆದ 9/11 ದಾಳಿಗೆ ಹೋಲಿಸಿದ ಒಬಾಮ, "ಭಾರತ ಹಾಗೂ ಅಮೆರಿಕ ಎರಡೂ ದೇಶಗಳು ತಮ್ಮ ರಕ್ಷಣೆಗಾಗಿ ಶ್ರಮಿಸುತ್ತಿವೆ" ಎಂದು ಹೇಳಿದ್ದಾರೆ.

obama

ಸಂದರ್ಶನದಲ್ಲಿ ಒಬಾಮ ಹೇಳಿದ್ದು...

  • ಭಾರತ ಅಮೆರಿಕದ ಸಂಬಂಧವು ಪರಸ್ಪರ ಗೌರವಿಸುವುದನ್ನು ಆಧರಿಸಿದೆ. [ಗಣರಾಜ್ಯೋತ್ಸವಕ್ಕೆ ಸೈನಿಕರ ತಾಲೀಮು]
  • ಎರಡೂ ದೇಶಗಳು ವಿಭಿನ್ನ ಸಂಪ್ರದಾಯ ಹಾಗೂ ಇತಿಹಾಸವನ್ನು ಹೊಂದಿದೆ. ಆದರೆ, ಉಭಯ ದೇಶಗಳು ಪರಸ್ಪರ ಗೌರವಿಸುವುದರ ಮೇಲೆ ಸಂಬಂಧವು ನಿಂತಿದೆ.
  • ಎರಡೂ ದೇಶಗಳು ಪರಸ್ಪರ ಅರಿತುಕೊಂಡರೆ ನಾವು ಮತ್ತಷ್ಟು ಸುರಕ್ಷೆಯನ್ನು ಅನುಭವಿಸುತ್ತೇವೆ. ಎರಡೂ ದೇಶಗಳು ಒಟ್ಟಿಗೆ ಕೆಲಸ ಮಾಡಿದರೆ ನಮ್ಮ ಪ್ರಜೆಗಳು ಹೆಚ್ಚು ಉದ್ಯೋಗ ಹಾಗೂ ಅವಕಾಶ ಪಡೆಯುತ್ತಾರೆ. [ಒಬಾಮರಿಂದ ಭಾರತದ ನಿರೀಕ್ಷೆಗಳು]
  • ಭಾರತ ಹಾಗೂ ಅಮೆರಿಕ ನಡುವಣ ಸಂಬಂಧವನ್ನು ವೃದ್ಧಿಸುವಲ್ಲಿ ನಾವು ಈಗಾಗಲೇ ಯಶಸ್ಸು ಕಂಡಿದ್ದೇವೆ.
  • ಕಳೆದ ಕೆಲವು ವರ್ಷಗಳಲ್ಲಿ ನಮ್ಮಿಬ್ಬರ ನಡುವಿನ ವ್ಯಾಪಾರ ಶೇ. 60ರಷ್ಟು ಹೆಚ್ಚಾಗಿದೆ. ಎರಡೂ ದೇಶಗಳ ಪ್ರಜೆಗಳು ಹೆಚ್ಚು ಉದ್ಯೋಗ ಹೊಂದಿದ್ದಾರೆ.
  • ಭಾರತ ಹಾಗೂ ಅಮೆರಿಕ ನೈಜ ಜಾಗತಿಕ ಸ್ನೇಹಿತರು. ಆದ್ದರಿಂದಲೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಒಪ್ಪಿಕೊಂಡೆ.
  • ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಕ್ರಮಗಳು ಉಭಯ ದೇಶಗಳ ಸಂಬಂಧ ವೃದ್ಧಿಸಲು ಸಹಕಾರಿಯಾಗಿವೆ. [ಒಂದು ಲಕ್ಷ ಪೊಲೀಸರು]
  • ಭಾರತದ ಸಂಸತ್‌ನಲ್ಲಿ ಭಾಷಣ ಮಾಡಿದಾಗ ಜಗತ್ತಿನ ಎರಡು ನಕ್ಷತ್ರಗಳು ಒಂದೇ ರೇಖೆಯಲ್ಲಿ ನಿಂತಿರುವಂತೆ ನನಗೆ ಅನ್ನಿಸಿತು.
  • ಅಭಿವೃದ್ಧಿಗೆ ಅಡಿಪಾಯ ಹಾಕಲು ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡಲು ಸಿಕ್ಕಿರುವ ಅವಕಾಶ ಇದೆಂದು ತಿಳಿದಿದ್ದೇನೆ.
  • ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಅವರೊಂದಿಗೂ ನಾನು ಉತ್ತಮ ಸಂಬಂಧ ಹೊಂದಿದ್ದೆ.
  • ಭಾರತಕ್ಕೆ ಎರಡನೇ ಬಾರಿ ಪ್ರವಾಸ ಕೈಗೊಂಡ ಅಮೆರಿಕದ ಪ್ರಥಮ ಅಧ್ಯಕ್ಷ ನಾನು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ.
English summary
Barack Obama said Indians and Americans were united in the fight against terrorism. Safe havens within Pakistan for are not acceptable and that those behind the Mumbai terrorist attack must face justice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X