ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಒಂದೇ ಒಂದು ಬೇಡಿಕೆಯಿಂದ ಸಾರ್ಕ್ ಸದಸ್ಯ ರಾಷ್ಟ್ರಗಳ ಸಭೆ ರದ್ದು!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆ ತೀವ್ರ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರ ಮಧ್ಯೆ ಶನಿವಾರ ನ್ಯೂಯಾರ್ಕ್ ನಗರದಲ್ಲಿ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆ ನಡೆಯಲಿದೆ. ಇದೇ ಸಂದರ್ಭದಲ್ಲಿ ನಡೆಯಬೇಕಿದ್ದ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ ಸಭೆಯನ್ನು ರದ್ದುಗೊಳಿಸಲಾಗಿದೆ.

ಸಾರ್ಕ್ ಸಭೆಯಲ್ಲಿ ಅಫ್ಘಾನಿಸ್ತಾನದ ಪ್ರತಿನಿಧಿಯಾಗಿ ತಾಲಿಬಾನ್ ಸದಸ್ಯರು ಭಾಗವಹಿಸುವುದಕ್ಕೆ ಪಾಕಿಸ್ತಾನ ಸಲ್ಲಿಸಿದ ಮನವಿಯನ್ನು ಸದಸ್ಯ ರಾಷ್ಟ್ರಗಳು ತಿರಸ್ಕರಿಸಿವೆ. ಈ ಹಿನ್ನೆಲೆ ಸಾರ್ಕ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಯುಎಸ್ ಪ್ರವಾಸದ ಸಂಪೂರ್ಣ ಮಾಹಿತಿಪ್ರಧಾನಿ ನರೇಂದ್ರ ಮೋದಿ 3 ದಿನಗಳ ಯುಎಸ್ ಪ್ರವಾಸದ ಸಂಪೂರ್ಣ ಮಾಹಿತಿ

ಅಫ್ಘಾನಿಸ್ತಾನದಲ್ಲಿ ಅಶ್ರಫ್ ಘನಿ ಸರ್ಕಾರವನ್ನು ಉರುಳಿಸಿದ ತಾಲಿಬಾನ್ ಸಂಘಟನೆಯು ಕಳೆದ ತಿಂಗಳು ತನ್ನದೇ ಸರ್ಕಾರವನ್ನು ಘೋಷಿಸಿತ್ತು. ಈ ಸರ್ಕಾರದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವರ ಭಾಗವಹಿಸುವಿಕೆಗೆ ಪಾಕಿಸ್ತಾನವು ಮನವಿ ಮಾಡಿಕೊಂಡಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

SAARC Foreign Ministers Meet Stands Cancelled because of Pakistan Demand to Represent Afghanistan

ಪಾಕಿಸ್ತಾನದ ಪ್ರಸ್ತಾವನೆ ತಿರಸ್ಕರಿಸಿದ ಭಾರತ:

ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಅಫ್ಘಾನಿಸ್ತಾನ ಸದಸ್ಯರ ಭಾಗವಹಿಸುವಿಕೆಗೆ ಅನುಮತಿ ನೀಡುವಂತೆ ಪಾಕಿಸ್ತಾನದ ಕೋರಿಕೆಯನ್ನು ಭಾರತ ಸೇರಿದಂತೆ ಕೆಲವು ಸದಸ್ಯ ರಾಷ್ಟ್ರಗಳು ವಿರೋಧಿಸಿದವು. ಹೀಗಾಗಿ ಸದಸ್ಯ ರಾಷ್ಟ್ರಗಳ ಸಭೆಯನ್ನು ರದ್ದುಗೊಳಿಸಲಾಗಿದೆ.

ನೇಪಾಳವು ಸಾರ್ಕ್ ಕೂಟದ ಆತಿಥ್ಯ ವಹಿಸಲಿದ್ದು, ಇದನ್ನು ವಾರ್ಷಿಕವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಇನ್ನೊಂದು ಬದಿಯಲ್ಲಿ ನಡೆಸಲಾಗುತ್ತದೆ. ತಾಲಿಬಾನ್ ಅನ್ನು ಭಾರತವು ಇಲ್ಲಿಯವರೆಗೆ ಗುರುತಿಸಿಲ್ಲ. ಕಾಬೂಲ್‌ನಲ್ಲಿನ ಹೊಸ ಆಡಳಿತವನ್ನು ಇನ್ನೂ ಜಗತ್ತು ಗುರುತಿಸಿಲ್ಲ ಅಲ್ಲದೇ ಉನ್ನತ ಕ್ಯಾಬಿನೆಟ್ ಮಂತ್ರಿಗಳು ವಿಶ್ವಸಂಸ್ಥೆಯ ಕಪ್ಪುಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ:

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರದ ಹಂಗಾಮಿ ವಿದೇಶಾಂಗ ಸಚಿವರಾಗಿರುವ ಅಮೀರ್ ಖಾನ್ ಮುಟ್ಟಾಕಿ ವಿಶ್ವಸಂಸ್ಥೆ ಮತ್ತು ಅಂಗಸಂಸ್ಥೆಯ ಯಾವುದೇ ಸಭೆಗಳಲ್ಲಿ ಭಾಗವಹಿಸುವ ಸಾಧ್ಯತೆಗಳು ತೀರಾ ಕಡಿಮೆಯಾಗಿವೆ. ಕಳೆದ ವಾರ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಾಲಿಬಾನ್ ಒಳಗೊಳ್ಳದ ಸರ್ಕಾರ ಎಂದು ಹೇಳಿದ್ದರು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಒಪ್ಪಿಕೊಳ್ಳುವ ಅಥವಾ ಗುರುತಿಸುವ ಮೊದಲು ಜಗತ್ತು ಯೋಚಿಸಬೇಕು ಎಂದಿದ್ದರು. ಅಲ್ಲದೇ, ಕಾಬೂಲ್‌ನ ತಾಲಿಬಾನ್ ಸರ್ಕಾರದಲ್ಲಿ ಮಹಿಳೆಯರು, ಅಲ್ಪಸಂಖ್ಯಾತರಿಗೆ ಯಾವುದೇ ಪ್ರಾತಿನಿಧ್ಯವಿಲ್ಲ ಎಂದು ಅವರು ಉಲ್ಲೇಖಿಸಿದ್ದರು.

ಸಾರ್ಕ್ ಸದಸ್ಯ ರಾಷ್ಟ್ರಗಳು ಯಾವುವು?:

ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘವು ಎಂಟು ದೇಶಗಳ ಪ್ರಾದೇಶಿಕ ಸಂಸ್ಥೆಯಾಗಿದೆ. ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳನ್ನು ಒಳಗೊಂಡಿದೆ. ಭೇಟಿಯ ಸಮಯದಲ್ಲಿ ಅಫ್ಘಾನಿಸ್ತಾನದ ಸದಸ್ಯರ ಕುರ್ಚಿಯನ್ನು ಖಾಲಿ ಇಡಬಹುದು ಎಂದು ಸಾರ್ಕ್‌ನ ಬಹುತೇಕ ಸದಸ್ಯರು ಒಪ್ಪಿಕೊಂಡಿದ್ದರು. ಆದರೆ, ಪಾಕಿಸ್ತಾನ ಒಪ್ಪಲಿಲ್ಲದ ಕಾರಣಕ್ಕೆ ಸಭೆಯನ್ನು ರದ್ದುಗೊಳಿಸಲಾಯಿತು ಎಂದು ತಿಳಿದು ಬಂದಿದೆ.

English summary
SAARC Foreign Ministers Meet Stands Cancelled because of Pakistan Demand to Represent Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X