ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ನಲ್ಲಿ ಗಾಯಕ ಎಸ್ಪಿಬಿ ಪಾಸ್ ಪೋರ್ಟ್ ಕಳವು

By Mahesh
|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 05: ಅಮೆರಿಕ ಪ್ರವಾಸದಲ್ಲಿರುವ ಸಂಗೀತ ದಿಗ್ಗಜ ಎಸ್​ಪಿ ಬಾಲಸುಬ್ರಮಣ್ಯಂ ಅವರು ಸಮಸ್ಯೆಗೆ ಸಿಲುಕಿದ್ದಾರೆ. ಎಸ್ಪಿಬಿ ಅವರ ಪಾಸ್​ಪೋರ್ಟ್ ಹಾಗೂ ಇನ್ನಿತರ ದಾಖಲೆ ಪತ್ರಗಳಿದ್ದ ಬ್ಯಾಗ್ ಳು ಕಳುವಾಗಿವೆ. ಎಸ್ಪಿಬಿ ಅವರು ತಮ್ಮ ಕಷ್ಟವನ್ನು ರಾಯಭಾರ ಕಚೇರಿಗೆ ತಿಳಿಸಿದ್ದು 24 ಗಂಟೆಯೊಳಗೆ ತಾತ್ಕಾಲಿಕ ಪಾಸ್ ಪೋರ್ಟ್ ನೀಡಿ, ಅವರ ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಹೂಸ್ಟನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಎಸ್ಪಿಬಿ ಅವರು ಧನ್ಯವಾದ ಅರ್ಪಿಸಿದ್ದಾರೆ.

S.P. Balasubrahmanyam’s passport, other articles stolen in the U.S.

ಪಾಸ್​ಪೋರ್ಟ್, ಕ್ರೆಡಿಟ್​ಕಾರ್ಡ್, ಒಂದಷ್ಟು ನಗದು, ಐ ಪ್ಯಾಡು, ಬರದಿಟ್ಟಿದ್ದ ಹಾಡಿನ ಪುಸ್ತಕ ಮತ್ತಿತರ ದಾಖಲೆಗಳಿದ್ದ ಬ್ಯಾಗನ್ನು ಯಾರೋ ಕದ್ದುಬಿಟ್ಟಿದ್ದಾರೆ ಎಂದು ಹಿರಿಯ ಗಾಯಕ ಬಾಲಸುಬ್ರಮಣ್ಯಂ ಅವರು ಫೇಸ್ ಬುಕ್​ನಲ್ಲಿ ತಮ್ಮ ನೋವು ತೋಡಿಕೊಂಡಿದ್ದರು. ಬಹುಭಾಷಾ ಪಾಂಡಿತ್ಯದ ಸುಮಧುರ ಗಾಯಕ ಬಾಲಸುಬ್ರಮಣ್ಯಂ ಅವರು ಅಮೆರಿಕ ಪ್ರವಾಸದಲ್ಲಿದ್ದು ''ಎಸ್ಪಿಬಿ 50'' ಸರಣಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಂಗೀತ ಮಾಂತ್ರಿಕ ಇಳಯರಾಜರಿಂದ ಲೀಗಲ್ ನೋಟಿಸ್ ಪಡೆದಿದ್ದ ಬಾಲಸುಬ್ರಮಣ್ಯಂ ಅವರು ಕಾನೂನು ರೀತಿಯಲ್ಲೇ ಉತ್ತರಿಸುತ್ತೇನೆ ಎಂದು ಹೇಳಿ ತಮ್ಮ ರಸಸಂಜೆ ಕಾರ್ಯಕ್ರಮಗಳನ್ನು ಮುಂದುವರೆಸಿದ್ದರು.

English summary
Legendary playback singer S.P. Balasubrahmanyam has said his passport and other articles were ‘stolen’ in the U.S., but officials of Indian Consulate were quick to provide him with a duplicate travel document.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X