ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ವೋಲ್ಗಾ ನದಿಯಲ್ಲಿ ಮುಳುಗಿ ತಮಿಳುನಾಡಿನ ನಾಲ್ವರು ವಿದ್ಯಾರ್ಥಿಗಳ ದುರ್ಮರಣ

|
Google Oneindia Kannada News

ರಷ್ಯಾದ ವೋಲ್ಗಾ ನದಿಯಲ್ಲಿ ಶನಿವಾರ ನಡೆದ ದಾರುಣ ಘಟನೆಯಲ್ಲಿ ತಮಿಳುನಾಡಿನ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ನಾಲ್ವರು ಯುವಕರ ಮೃತದೇಹಗಳನ್ನು ತರಿಸಿಕೊಳ್ಳಲು ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಪ್ರಯತ್ನ ನಡೆಸಿದ್ದಾರೆ.

Recommended Video

ರಾಜಸ್ಥಾನ ವಿಧಾನಸಭೆ ಅಧಿವೇಶನ ಆಗಸ್ಟ್ 14ರಿಂದ | Oneindia Kannada

ನಾಲ್ವರಲ್ಲಿ ಒಬ್ಬಾತ ಚೆನ್ನೈನವನಾಗಿದ್ದು, ಒಟ್ಟೇರಿಯ ಎಂ. ಸ್ಟೀಫನ್ (20) ಎಂದು ಗುರುತಿಸಲಾಗಿದೆ. ತಾರಾಪುರಂನ ಮೊಹಮ್ಮದ್ ಆಶಿಕ್, ತಿಟ್ಟಕುಡುವಿ ರಾಮು ವಿಘ್ನೇಶ್ ಮತ್ತು ಸೇಲಂನ ತಲೈವಸಲ್‌ನ ಮನೋಜ್ ಆನಂದ್ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಈ ನಾಲ್ವರೂ ರಷ್ಯಾದ ವೋಲ್ಗೊಗ್ರಾಡ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಕ್ಯಾಲಿಫೋರ್ನಿಯ ನದಿಯಲ್ಲಿ ಮಕ್ಕಳನ್ನು ಕಾಪಾಡಲು ಹೋಗಿ ಪ್ರಾಣಬಿಟ್ಟ ಭಾರತೀಯಕ್ಯಾಲಿಫೋರ್ನಿಯ ನದಿಯಲ್ಲಿ ಮಕ್ಕಳನ್ನು ಕಾಪಾಡಲು ಹೋಗಿ ಪ್ರಾಣಬಿಟ್ಟ ಭಾರತೀಯ

ಶನಿವಾರ ರಾತ್ರಿ ಈ ನಾಲ್ವರು ಸೇರಿದಂತೆ ಕೆಲವು ವಿದ್ಯಾರ್ಥಿಗಳು ಈಜುವ ಸಲುವಾಗಿ ನದಿಗೆ ಇಳಿದಿದ್ದರು. ಅವರಲ್ಲಿ ಒಬ್ಬ ಮುಳುಗಿ ಹೋದ. ಆತನನ್ನು ಕಾಪಾಡಲು ಪ್ರಯತ್ನಿಸಿದ ಉಳಿದ ಮೂವರು ಕೂಡ ಮುಳುಗಿ ಜೀವ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

 Russsia: Four Students From Tamil Nadu Drown In Volga River

ಕೆಲವು ಗಂಟೆಗಳ ಬಳಿಕ ಈ ನಾಲ್ವರೂ ಯುವಕರ ಮೃತದೇಹಗಳು ನದಿ ತೀರಕ್ಕೆ ಬಂದು ಬಿದ್ದಿದ್ದವು. ದೇಹಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ರಾಯಭಾರ ಕಚೇರಿ ಮೂಲಕ ವಿದ್ಯಾರ್ಥಿಗಳ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಈ ದೇಹಗಳನ್ನು ಮರಳಿ ತಾಯ್ನಾಡಿಗೆ ತರಿಸಲು ಸಹಾಯ ಮಾಡುವಂತೆ ವಿದ್ಯಾರ್ಥಿಗಳ ಕುಟುಂಬದವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಷ್ಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿರುವ ಪಳನಿಸ್ವಾಮಿ, ಮೃತದೇಹ ತರಿಸಿಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.

ಸಾಮಾನ್ಯವಾಗಿ ನದಿ ತೀರದಲ್ಲಿ ಈಜಾಟ ನಡೆಸುತ್ತಿದ್ದ ವಿದ್ಯಾರ್ಥಿಗಳು, ಈ ಬಾರಿ ಸ್ವಲ್ಪ ಆಳದ ಪ್ರದೇಶಕ್ಕೆ ಹೋಗಿದ್ದರು. ಅವರ ಜತೆಯಲ್ಲಿ ಇನ್ನೂ ಮೂವರು ವಿದ್ಯಾರ್ಥಿಗಳಿದ್ದು, ಅವರಿಗೆ ಯಾವುದೇ ಅಪಾಯವಾಗಿಲ್ಲ.

English summary
Four students from Tamil Nadu who were studying medicine in Russia allegedly drowned in the Volga river on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X