ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರಿಗೆ ಲಸಿಕೆ ಪಡೆಯುವಂತೆ ಮಾಡಲು ರಷ್ಯಾದಲ್ಲೊಂದು ಹೊಸ ತಂತ್ರ

|
Google Oneindia Kannada News

ಮಾಸ್ಕೊ, ಫೆಬ್ರುವರಿ 08: ಹಲವು ಕಾರಣಗಳಿಂದ ಜನರು ಕೊರೊನಾ ಲಸಿಕೆಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಕುರಿತು ಅಸ್ಪಷ್ಟ ಮಾಹಿತಿ, ಹಾಗೆಯೇ ಲಸಿಕೆ ಪಡೆದ ನಂತರದ ಅಡ್ಡಪರಿಣಾಮಗಳ ಕುರಿತ ಆತಂಕದಿಂದ ಲಸಿಕೆ ತೆಗೆದುಕೊಳ್ಳಲು ಜನರು ನಿರಾಕರಿಸುತ್ತಿದ್ದಾರೆ.

ಹೀಗೆ ನಿರಾಕರಿಸುತ್ತಿರುವ ಜನರನ್ನು ಲಸಿಕೆ ಪಡೆಯುವಂತೆ ಮಾಡಲು ರಷ್ಯಾದಲ್ಲಿನ ಲಸಿಕಾ ಕೇಂದ್ರವೊಂದು ಹೊಸ ತಂತ್ರ ಹೂಡಿದೆ. ಮಾಸ್ಕೊ ರೆಡ್ ಸ್ಕ್ವಾರ್ ಮಾಲ್‌ನಲ್ಲಿನ ಲಸಿಕಾ ಕೇಂದ್ರದಲ್ಲಿ, "ಲಸಿಕೆ ತೆಗೆದುಕೊಳ್ಳಿ, ಉಚಿತವಾಗಿ ಐಸ್ ಕ್ರೀಂ ಪಡೆಯಿರಿ" ಎಂಬ ಕೊಡುಗೆ ಮುಂದಿಡಲಾಗಿದೆ.

 ಭಾರತದಲ್ಲಿ ಬೇಕಾದಷ್ಟು ಲಸಿಕೆಯಿದೆ, ಆದರೆ... ಸಮಸ್ಯೆ ಬೇರೆಯೇ ಆಗಿದೆ ಭಾರತದಲ್ಲಿ ಬೇಕಾದಷ್ಟು ಲಸಿಕೆಯಿದೆ, ಆದರೆ... ಸಮಸ್ಯೆ ಬೇರೆಯೇ ಆಗಿದೆ

ಮಾಲ್ ನಲ್ಲಿ ಪ್ರತಿ ದಿನ ಸುಮಾರು 300 ಮಂದಿ ಕೊರೊನಾ ಲಸಿಕೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಎಲ್ಲರಿಗೂ ಐಸ್ ಕ್ರೀಂಗಳನ್ನು ನೀಡಲಾಗುತ್ತಿದೆ ಎಂದು ಲಸಿಕಾ ಕೇಂದ್ರದ ವೈದ್ಯ ನತಲ್ಯಾ ಕುಜೆಂಟೊವಾ ಹೇಳಿದ್ದಾರೆ.

Russias Sweet Deal To Get People Inoculated Corona Vaccine

ರಷ್ಯಾದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ. ಲಸಿಕೆಗಳ ದಾಸ್ತಾನು ಕೂಡ ಇದೆ. ಆದರೆ ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಿದೆ. ಕೆಲ ಕಾರಣದಿಂದಾಗಿ ಲಸಿಕೆ ತೆಗೆದುಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಸ್ಪುಟ್ನಿಕ್ ವಿ ಲಸಿಕೆ ತೆಗೆದುಕೊಳ್ಳಲು ರಷ್ಯಾದ ಕೇವಲ 38% ಮಂದಿ ಸಿದ್ಧವಾಗಿರುವುದಾಗಿ ಈಚಿನ ವರದಿಯೊಂದು ತಿಳಿಸಿದೆ. ಹೀಗಾಗಿ ನಾಗರಿಕರನ್ನು ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಲು ಸರ್ಕಾರ ಹಾಗೂ ಆಡಳಿತ ಹಲವು ತಂತ್ರಗಳನ್ನು ಹೂಡುತ್ತಿದೆ. ಇದರಲ್ಲಿ ಐಸ್ ಕ್ರೀಂ ಕೂಡ ಒಂದಾಗಿದೆ.

ರಷ್ಯಾದಲ್ಲಿ ಸದ್ಯಕ್ಕೆ ಪ್ರತಿ ದಿನಕ್ಕೆ 66,000 ಮಂದಿಗೆ ಲಸಿಕೆ ನೀಡಲಾಗುತ್ತದೆ.

English summary
Coronavirus vaccination center in Russia has now rolled out sweet deal of giving ice cream to get inoculated people. Here is detail,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X