ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2036ರವರೆಗೂ ಅಧ್ಯಕ್ಷಗಿರಿ ತಮ್ಮದೇ!: ಹೊಸ ಕಾನೂನಿಗೆ ಪುಟಿನ್ ಸಹಿ

|
Google Oneindia Kannada News

ಮಾಸ್ಕೋ, ಏಪ್ರಿಲ್ 6: ಇನ್ನೂ 15 ವರ್ಷ ತಾವು ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವಂತಹ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಈ ಮೂಲಕ ಪುಟಿನ್ ಅವರು ಆರು ವರ್ಷದ ಅಧಿಕಾರಾವಧಿಯನ್ನು ಇನ್ನೂ ಎರಡು ಬಾರಿ ಪಡೆದುಕೊಳ್ಳಲಿದ್ದಾರೆ. ಅಂದರೆ ಅವರು 2036ರವರೆಗೂ ರಷ್ಯಾ ಅಧ್ಯಕ್ಷರಾಗಿ ಇರುವ ಸಾಧ್ಯತೆ ಇದೆ.

68 ವರ್ಷದ ಪುಟಿನ್, ಈಗಾಗಲೇ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಅಧಿಕಾರದಲ್ಲಿದ್ದಾರೆ. ಸಂವಿಧಾನದ ಸುಧಾರಣೆಯ ಭಾಗವಾಗಿ ಕಳೆದ ವರ್ಷ ಅವರು ಬದಲಾವಣೆಯ ಪ್ರಸ್ತಾವನೆ ಇರಿಸಿದ್ದರು. 2020ರ ಜುಲೈ ತಿಂಗಳಲ್ಲಿ ನಡೆದ ಸಾರ್ವಜನಿಕ ಮತದಾನದಲ್ಲಿ ಇದಕ್ಕೆ ಬೆಂಬಲ ದೊರಕಿತ್ತು. ಕಳೆದ ತಿಂಗಳು ಶಾಸನವನ್ನು ರಷ್ಯಾ ಸಂಸತ್ತಿನ ಕೆಳ ಹಾಗೂ ಮೇಲ್ಮನೆಗಳಲ್ಲಿ ಅಂಗೀಕರಿಸಲಾಗಿತ್ತು.

3ನೇ ಮಹಾಯುದ್ಧಕ್ಕೆ ಅಮೆರಿಕ ರಣಕಹಳೆ? ರಷ್ಯಾ ಅಧ್ಯಕ್ಷ ಕೊಲೆಗಾರ ಎಂದ ಬೈಡನ್!3ನೇ ಮಹಾಯುದ್ಧಕ್ಕೆ ಅಮೆರಿಕ ರಣಕಹಳೆ? ರಷ್ಯಾ ಅಧ್ಯಕ್ಷ ಕೊಲೆಗಾರ ಎಂದ ಬೈಡನ್!

ಪುಟಿನ್ ಸಹಿ ಹಾಕಿರುವ ಕಾನೂನಿನ ಪ್ರಕಾರ ಭವಿಷ್ಯದಲ್ಲಿ ಅಧ್ಯಕ್ಷರ ಅಧಿಕಾರವು ಎರಡು ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಈ ಆಯ್ಕೆ ಪುಟಿನ್ ಅವರಿಗೂ ಸಿಗಲಿದೆ. ಅಂದರೆ ಇದು ಅವರ ಈಗಿನ ಹಾಗೂ ಹಿಂದಿನ ಅಧಿಕಾರಗಳನ್ನು ಪರಿಗಣಿಸುವುದಿಲ್ಲ. ಯಾವುದೇ ವಿದೇಶಿ ಪೌರತ್ವ ಹೊಂದಿರುವ ವ್ಯಕ್ತಿ ರಷ್ಯಾ ಅಧ್ಯಕ್ಷರಾಗುವ ಅವಕಾಶ ಪಡೆದುಕೊಳ್ಳುವುದನ್ನು ಇದು ನಿರ್ಬಂಧಿಸುತ್ತದೆ.

 Russian President Vladimir Putin Signs Law That Allows Him To Stay In Power For Two More Terms

ಇಷ್ಟೇ ಅಲ್ಲದೆ ಈ ಹೊಸ ಕಾನೂನು, ದೇಶದ ಉನ್ನತ ನ್ಯಾಯಾಲಯಗಳ ನ್ಯಾಯಧೀಶರನ್ನು ವಜಾಗೊಳಿಸುವ ಮತ್ತು ಸಂಸತ್ತು ಅಂಗೀಕರಿಸುವ ಕಾನೂನುಗಳನ್ನು ತಿರಸ್ಕರಿಸುವ ಹೆಚ್ಚುವರಿ ಅಧಿಕಾರಗಳನ್ನು ಅಧ್ಯಕ್ಷರಿಗೆ ನೀಡುತ್ತದೆ. ಸರ್ಕಾರದ ಮುಖ್ಯಸ್ಥರನ್ನು ನೇಮಿಸುವ ಹೆಚ್ಚುವರಿ ಅಧಿಕಾರವನ್ನು ದೇಶದ ಸಂಸತ್‌ಗೆ ನೀಡುತ್ತದೆ.

ಪುಟಿನ್ ಹಂತಕ ಎಂಬ ಹೇಳಿಕೆ ಹಿಂಪಡೆಯುವಂತೆ ಬೈಡನ್‌ಗೆ ರಷ್ಯಾ ಒತ್ತಾಯಪುಟಿನ್ ಹಂತಕ ಎಂಬ ಹೇಳಿಕೆ ಹಿಂಪಡೆಯುವಂತೆ ಬೈಡನ್‌ಗೆ ರಷ್ಯಾ ಒತ್ತಾಯ

Recommended Video

Rafale ಯುದ್ಧ ವಿಮಾನದ ಮತ್ತೊಂದು ಕರ್ಮ ಕಾಂಡ ಬಯಲು | Oneindia Kannada

ಪುಟಿನ್ ಅವರ ಈ ಹೊಸ ಕಾನೂನಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದು ಸಾಂವಿಧಾನಿಕ ಧಂಗೆ ಎಂದು ಟೀಕಿಸಲಾಗಿದೆ. ಪುಟಿನ್ ಅವರು 20 ವರ್ಷಕ್ಕೂ ಹೆಚ್ಚು ಕಾಲದಿಂದ ರಷ್ಯಾವನ್ನು ಆಳಿದ್ದಾರೆ. ಸತತವಾಗಿ ನಾಲ್ಕು ವರ್ಷದ ಎರಡು ಅವಧಿಗಳನ್ನು ಪೂರೈಸಿದ್ದರು. 2008ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. 2012ರಲ್ಲಿ ಅಧ್ಯಕ್ಷರ ಅವಧಿಯನ್ನು ಆರು ವರ್ಷಕ್ಕೆ ವಿಸ್ತರಿಸಿದ ಬಳಿಕ ಅಧ್ಯಕ್ಷ ಹುದ್ದೆಗೆ ಮರಳಿದ್ದರು. 2018ರಲ್ಲಿ ಮರಳಿ ಆಯ್ಕೆಯಾಗಿದ್ದರು. ಈಗಿನ ಅವರ ಅಧಿಕಾರಾವಧಿ 2024ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಅವರ ಹೊಸ ಕಾನೂನಿನ ಪ್ರಕಾರ ಇನ್ನೂ 12 ವರ್ಷ ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಸಿಗಲಿದೆ.

English summary
Russian President Vladimir Putin signed a law that allows him to stay in power for two more terms, which could he will remain on the post till 2036.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X