ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಉಕ್ರೇನ್‌ನ ಶಾಪಿಂಗ್ ಮಾಲ್‌ಗೆ ಅಪ್ಪಳಿಸಿದ್ದು ಹೇಗೆ ಕ್ಷಿಪಣಿ?

|
Google Oneindia Kannada News

ಕೀವ್, ಜೂನ್ 27: ಉಕ್ರೇನ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಶಾಪಿಂಗ್ ಮಾಲ್‌ಗೆ ರಷ್ಯಾದ ಕ್ಷಿಪಣಿಯೊಂದು ಬಂದು ಅಪ್ಪಳಿಸಿದ್ದು, ಸ್ಥಳದಲ್ಲಿ ಇಬ್ಬರು ಪ್ರಾಣ ಬಿಟ್ಟಿದ್ದರೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪೂರ್ವ ಉಕ್ರೇನ್‌ನ "ಕಿಕ್ಕಿರಿದ" ಮಾಲ್‌ಗೆ ಕ್ಷಿಪಣಿ ಅಪ್ಪಳಿಸಿತು. ಈ ವೇಳೆ ಇಬ್ಬರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿರುವ ಬಗ್ಗೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ದಾಳಿ ನಡೆದಾಗ ಕ್ರೆಮೆನ್‌ಚುಕ್‌ನಲ್ಲಿರುವ ಶಾಪಿಂಗ್ ಸೆಂಟರ್‌ನಲ್ಲಿ ಸಾವಿರಕ್ಕೂ ಹೆಚ್ಚು ನಾಗರಿಕರು ಇದ್ದರು ಎಂದು ತಿಳಿಸಿದ್ದಾರೆ.

ರಷ್ಯಾದ ಅಗ್ಗದ ತೈಲ, ಭಾರತಕ್ಕೆ ಸುಗ್ಗಿ- ಏಪ್ರಿಲ್‌ನಿಂದೀಚೆ ಖರೀದಿ ಪ್ರಮಾಣ 50 ಪಟ್ಟು ಹೆಚ್ಚುರಷ್ಯಾದ ಅಗ್ಗದ ತೈಲ, ಭಾರತಕ್ಕೆ ಸುಗ್ಗಿ- ಏಪ್ರಿಲ್‌ನಿಂದೀಚೆ ಖರೀದಿ ಪ್ರಮಾಣ 50 ಪಟ್ಟು ಹೆಚ್ಚು

"ಶಾಪಿಂಗ್ ಮಾಲ್ ಮೇಲೆ ಆಕ್ರಮಣಕಾರರು ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದರು. ಈ ವೇಳೆ ಮಾಲ್‌ನಲ್ಲಿ ಸಾವಿರಕ್ಕೂ ಹೆಚ್ಚು ನಾಗರಿಕರು ಇದ್ದರು. ಮಾಲ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಆದರೆ ಈವರೆಗೂ ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ಊಹಿಸುವುದಕ್ಕೆ ಸಾಧ್ಯವಾಗಿಲ್ಲ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟೆಲಿಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

Russian Missile Hits Crowded Shopping Mall in Ukraine; 2 Dead, 20 People Injured

ಕ್ಷಿಪಣಿ ದಾಳಿಯ ವಿಡಿಯೋ ವೈರಲ್: ಉಕ್ರೇನ್ ನೆಲದಲ್ಲಿ ರಷ್ಯಾ ನಡೆಸಿರುವ ಕ್ಷಿಪಣಿ ದಾಳಿಯ ವಿಡಿಯೋದಲ್ಲಿ ದಟ್ಟವಾದ ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವುದು ಕಂಡು ಬಂದಿದೆ. ಬೆಂಕಿಯ ಬೃಹತ್ ಜ್ವಾಲೆಯಲ್ಲಿ ಮಾಲ್ ಸುಟ್ಟುಹೋಗುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಇದರ ಮಧ್ಯೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಯು ಬೆಂಕಿ ನಂದಿಸುವುದರ ಜೊತೆಗೆ ಗಾಯಗೊಂಡವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಗಾಯಗೊಂಡವರು ಆಸ್ಪತ್ರೆಗೆ ಸ್ಥಳಾಂತರ: ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡವರಿಗೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಈ ವೇಳೆ ವೈದ್ಯರಿಗೆ ಸ್ಥಳೀಯರೇ ಸಹಾಯ ಮಾಡುತ್ತಿರುವುದು ಮತ್ತೊಂದು ವಿಡಿಯೋದಲ್ಲಿ ಕಂಡು ಬಂದಿತು. ಇನ್ನು ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು.

ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ಯುದ್ಧ: ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿದ ರಷ್ಯಾ ನಾಲ್ಕು ತಿಂಗಳಿನಿಂದಲೂ ಬಿಟ್ಟು ಬಿಟ್ಟು ದಾಳಿಗಳನ್ನು ನಡೆಸುತ್ತಲೇ ಇದೆ. ಡ್ನಿಪ್ರೊ ನದಿಯ ದಡದಲ್ಲಿರುವ ಪ್ರಮುಖ ಕೈಗಾರಿಕಾ ನಗರವಾಗಿ ಕ್ರೆಮೆನ್‌ಚುಕ್, ರಷ್ಯಾದ ಆಕ್ರಮಣದ ಮೊದಲು ಎರಡು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿತ್ತು, ಆದರೆ ಈಗ ನಗರದಲ್ಲಿನ ಜನಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

Recommended Video

ಯಾರು ಇಲ್ಲದಿದ್ದರೂ ನಗುಮುಖದಲ್ಲಿ ನಮಸ್ಕಾರ ಮಾಡುತ್ತಿರುವ ರಾಜಕಾರಣಿ! | *Politics | OneIndia Kannada

English summary
Russian missile hits crowded' shopping mall in Ukraine; 2 Daed, 20 People Injured. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X