ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಶ್ಚಿಮಾತ್ಯ ದೇಶಗಳ ಚೀನಾ ವಿರೋಧಿ ನೀತಿಗೆ ಭಾರತವೇ ದಾಳ: ರಷ್ಯಾ ಆರೋಪ

|
Google Oneindia Kannada News

ನವದೆಹಲಿ, ಡಿಸೆಂಬರ್ 10: ಇಂಡೋ ಪೆಸಿಫಿಕ್ ಕಾರ್ಯತಂತ್ರಗಳನ್ನು ಉತ್ತೇಜಿಸುವ ಮೂಲಕ ಪಾಶ್ಚಿಮಾತ್ಯ ದೇಶಗಳು ಭಾರತವು ಚೀನಾ ವಿರೋಧಿ ಆಟಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಆಕ್ರಮಣಕಾರಿ ಮತ್ತು ವಂಚನೆಯ ನೀತಿಯನ್ನು ಅನುಸರಿಸುತ್ತಿವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಜಿ ಲಾವ್ರೊವ್ ಬುಧವಾರ ಆರೋಪಿಸಿದ್ದಾರೆ.

ರಷ್ಯನ್ ಅಂತಾರಾಷ್ಟ್ರೀಯ ವ್ಯವಹಾರಗಳ ಮಂಡಳಿ ಎಂಬ ಸರ್ಕಾರಿ ಸ್ವಾಮ್ಯದ ಚಿಂತಕರ ಚಾವಡಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಲಾವ್ರೊವ್, ಭಾರತದೊಂದಿಗಿನ ರಷ್ಯಾದ ನಿಕಟ ಸಹಭಾಗಿತ್ವ ಮತ್ತು ವಿಶೇಷ ಸಂಬಂಧಗಳನ್ನು ಪಶ್ಚಿಮದ ದೇಶಗಳು ಕಡೆಗಣಿಸುತ್ತಿವೆ ಎಂದು ಕೂಡ ಕಿಡಿಕಾರಿದ್ದಾರೆ.

ಈ ಒಂದು ವಿಷಯ ಇಡೀ ದೇಶದ ಭಾವನೆಯನ್ನೇ ಬದಲಾಯಿಸಿದೆ; ಜೈಶಂಕರ್ಈ ಒಂದು ವಿಷಯ ಇಡೀ ದೇಶದ ಭಾವನೆಯನ್ನೇ ಬದಲಾಯಿಸಿದೆ; ಜೈಶಂಕರ್

ಪಾಶ್ಚಿಮಾತ್ಯ ದೇಶಗಳು ಜಾಗತಿಕ ಧ್ರುವೀಕರಣವನ್ನು ಮತ್ತೆ ಅಳವಡಿಸುವ ಪ್ರಯತ್ನ ಮಾಡುತ್ತಿವೆ. ಆದರೆ ರಷ್ಯಾ ಮತ್ತು ಚೀನಾಗಳು ಅದಕ್ಕೆ ತಲೆಬಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ.

ಭಾರತ-ಚೀನಾ ಮಾತುಕತೆಗೆ ಪ್ರಯತ್ನ

ಭಾರತ-ಚೀನಾ ಮಾತುಕತೆಗೆ ಪ್ರಯತ್ನ

ಇಂಡೋ-ಪೆಸಿಫಿಕ್ ಪರಿಕಲ್ಪನೆಯ ಕುರಿತಾದ ರಷ್ಯಾದ ಶಂಕೆಯನ್ನು ಈ ಹೇಳಿಕೆ ಪ್ರತಿಫಲಿಸಿದೆ. ಲಾವ್ರೊವ್ ಅವರು ಅನೇಕ ಬಾರಿ ಇದನ್ನು ಸಾರ್ವಜನಿಕವಾಗಿ ಹೇಳಿದ್ದರು. ಲಡಾಕ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಮುಂದುವರಿದಿರುವ ನಡುವೆ ರಷ್ಯಾ ವಿದೇಶಾಂಗ ಸಚಿವರ ಈ ಹೇಳಿಕೆ ಬಂದಿದೆ. ಗಡಿ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳವಂತೆ ಭಾರತ ಮತ್ತು ಚೀನಾ ಎರಡಕ್ಕೂ ಹಿಂಬದಿಯಿಂದ ರಷ್ಯಾ ಒತ್ತಡ ಹೇರುತ್ತಿದೆ ಎಂದು ಹೇಳಲಾಗಿದೆ.

ನಟೋರಿಯಸ್ ನಡೆ

ನಟೋರಿಯಸ್ ನಡೆ

ಪಾಶ್ಚಿಮಾತ್ಯ ದೇಶಗಳು ನಿಯಮ ಆಧಾರಿತ ವ್ಯವಸ್ಥೆ ಮತ್ತು ರಾಸಾಯನಿಕ ಹಾಗೂ ಸೈಬರ್ ಹ್ಯಾಕಿಂಗ್ ಉಲ್ಲಂಘನೆಗಳ ವಿರುದ್ಧ ನಿರ್ಬಂಧಗಳನ್ನು ಬಳಸುವ ನಟೋರಿಯಸ್ ನಡೆ ಅನುಸರಿಸುತ್ತಿವೆ. ವಿಶ್ವಸಂಸ್ಥೆ ಭಾಗಿಯಾಗಿಲ್ಲದೆಯೇ ಇಂತಹ ಕಠಿಣ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ಲಾವ್ರೊವ್ ಆರೋಪ ಮಾಡಿದ್ದಾರೆ.

ಚೀನಾ ಹೊಸ ವರಸೆ: ಕೊರೊನಾ ವೈರಸ್ ಬಂದಿದ್ದು ಆಸ್ಟ್ರೇಲಿಯಾದಿಂದ ಅಂತೆ!ಚೀನಾ ಹೊಸ ವರಸೆ: ಕೊರೊನಾ ವೈರಸ್ ಬಂದಿದ್ದು ಆಸ್ಟ್ರೇಲಿಯಾದಿಂದ ಅಂತೆ!

ತಮ್ಮದೇ ಸರಿ ಎನ್ನುವ ದೇಶಗಳು

ತಮ್ಮದೇ ಸರಿ ಎನ್ನುವ ದೇಶಗಳು

ತಮ್ಮ ದೃಷ್ಟಿಕೋನಗಳು ಮತ್ತು ತೀರ್ಮಾನಗಳು ಮಾತ್ರವೇ ಸರಿಯಾಗಿವೆ ಎಂಬಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಬಿಂಬಿಸುತ್ತಿವೆ. ಪ್ರಸ್ತುತ ಇರುವ ಭಿನ್ನಾಭಿಪ್ರಾಯಗಳ ನಡುವೆಯೂ ಜಾಗತಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದು ಒಳಿತು ಎಂದು ರಷ್ಯಾ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮದ ದೇಶಗಳಿಗೆ ಭಾರತ ಗುರಿ

ಪಶ್ಚಿಮದ ದೇಶಗಳಿಗೆ ಭಾರತ ಗುರಿ

ಆದರೆ ಈಗ ಪಾಶ್ಚಿಮಾತ್ಯ ದೇಶಗಳಿಗೆ ಪ್ರಸ್ತುತ ಭಾರತ ಪ್ರಮುಖ ಗುರಿಯಾಗಿದೆ. ಭಾರತವು ಚೀನಾ ವಿರೋಧಿ ಆಟಗಳಲ್ಲಿ ತೊಡಗಿಳ್ಳುವಂತೆ ಮಾಡಲು ಇಂಡೋ-ಪೆಸಿಫಿಕ್ ತಂತ್ರಗಳಲ್ಲಿ ಆಕ್ರಮಣಾಕಾರಿ ಮತ್ತು ಮೋಸದ ನೀತಿಗಳನ್ನು ಅನುಸರಿಸುತ್ತಿವೆ. 'ಕ್ವಾಡ್' (ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ) ಎಂಬಂತಹ ಒಕ್ಕೂಟದ ಮೂಲಕ ಭಾರತದೊಂದಿಗಿನ ನಮ್ಮ ವಿಶೇಷ ಸಂಬಂಧಗಳು ಮತ್ತು ಸಮೀಪದ ಸಹಭಾಗಿತ್ವವನ್ನು ಕಡೆಗಣಿಸುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದರು.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

English summary
Russian foriegn minister Sergey Lavrov alleged West nations adopting and aggressive and devious policy to engage India in anti China games.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X