ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನಿಮಾ ಚಿತ್ರೀಕರಣಕ್ಕೆಂದು ಬಾಹ್ಯಾಕಾಶಕ್ಕೆ ಹಾರಿದ ರಷ್ಯಾ ಚಿತ್ರತಂಡ

|
Google Oneindia Kannada News

ಮೊದಲ ಬಾರಿ ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ಅವಕಾಶ ನೀಡಲಾಗಿದೆ. ಬಾಹ್ಯಾಕಾಶದಲ್ಲಿ ಸಿನಿಮಾವೊಂದರ ಚಿತ್ರೀಕರಣಕ್ಕೆ ರೋಸ್ಕೋಸ್ಮೀಸ್ ಅನುಮತಿ ನೀಡಿದೆ.

ರಷ್ಯಾದ ಗಗನಯಾತ್ರಿ ಆಂಟನ್ ಶಕಾಪ್ಲೆರೋವ್, ಚಲನಚಿತ್ರ ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ನಟಿ ಯೂಲಿಯಾ ಪೆರೆಸಿಲ್ಡ್ ಜೊತೆಗಿನ ಸೊಯುಜ್ ಎಂಎಸ್-19 ಬಾಹ್ಯಾಕಾಶ ನೌಕೆಯನ್ನು ಅಕ್ಟೋಬರ್ 5 ರಂದು ಉಡಾವಣೆ ಮಾಡಲಾಗಿದೆ. ಶಿಪೆಂಕೊ ಮತ್ತು ಪೆರೆಸಿಲ್ಡ್ ಬಾಹ್ಯಾಕಾಶದಲ್ಲಿ "ಚಾಲೆಂಜ್" ಚಿತ್ರೀಕರಣ ನಡೆಸಲಿದ್ದಾರೆ. ಅಕ್ಟೋಬರ್ 17 ರಂದು ಗಗನಯಾತ್ರಿ ಒಲೆಗ್ ನೊವಿಟ್ಸ್ಕಿಯೊಂದಿಗೆ ಸೋಯುಜ್ ಎಂಎಸ್-18 ಮೂಲಕ ಭೂಮಿಗೆ ಹಿಂತಿರುಗಲಿದ್ದಾರೆ.

ನಟಿ ಯೂಲಿಯಾ ಪೆರೆಸಿಲ್ಡ್, ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ಗಗನಯಾತ್ರಿ ಆಂಟನ್ ಶಕಾಪ್ಲೆರೋವ್ ಮಂಗಳವಾರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ ಎಂದು ರಷ್ಯಾದ ರಾಜ್ಯ ಬಾಹ್ಯಾಕಾಶ ನಿಗಮ ರೋಸ್ಕೋಸ್ಮೋಸ್ ತಿಳಿಸಿದೆ.

Russian Crew Blast Off To Film First Movie In Space

ಮುಖ್ಯ ಮತ್ತು ಬ್ಯಾಕಪ್ ಸಿಬ್ಬಂದಿಯನ್ನು ಅನುಮೋದಿಸಲಾಗಿದೆ. ರೋಸ್ಕೋಸ್ಮೋಸ್ ಮತ್ತು ರಷ್ಯಾದ ಚಾನೆಲ್ ಒನ್ ಕಳೆದ ನವೆಂಬರ್‌ನಲ್ಲಿ ಬಾಹ್ಯಾಕಾಶದಲ್ಲಿ ಚಲನಚಿತ್ರವನ್ನು ನಿರ್ಮಿಸುವ ಯೋಜನೆಯನ್ನು ಅನಾವರಣಗೊಳಿಸಿತು.

ನಟಿ ಯೂಲಿಯಾ ಪೆರೆಸಿಲ್ಡ್, ಚಲನಚಿತ್ರ ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ಗಗನಯಾತ್ರಿ ಆಂಟನ್ ಶಕಾಪ್ಲೆರೋವ್ ಇಂದು ಅ. 5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದಾರೆ.

37ರ ಹರೆಯದ ನಟಿ ಯೂಲಿಯಾ ಪೆರೆಸಿಲ್ಡ್‌ ಹಾಗೂ 38 ವರ್ಷದ ಚಲನಚಿತ್ರ ನಿರ್ದೇಶಕ ಕ್ಲಿಮ್ ಶಿಪೆಂಕೊ ಅವರು, ಅನುಭವಿ ಗಗನಯಾತ್ರಿ ಆಂಟನ್ ಶ್ಕಾಪ್ಲೆರೋವ್ ನೇತೃತ್ವದಲ್ಲಿ ಸೋಯಸ್ ಎಂಎಸ್ 19 ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದಾರೆ.

ಈ ತಂಡ 12 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಚಾಲೆಂಜ್ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ.ನನ್ನನ್ನು ಈ ಬಾಹ್ಯಾಕಾಶ ತುಂಬಾ ಆಕರ್ಷಕವಾಗಿ ಸ್ವಾಗತಿಸುತ್ತಿದೆ ಹಾಗೂ ಇಲ್ಲಿ ಯಾವುದೇ ಗಡಿಗಳಿಲ್ಲ ಎಂದು ನಟಿ ಪೆರೆಸಿಲ್ಡ್ ತಿಳಿಸಿದ್ದಾರೆ.

ಇದುವರೆಗೂ ಗೌಪ್ಯವಾಗಿಡಲಾಗಿದ್ದ ಚಲನಚಿತ್ರದ ಕಥಾವಸ್ತುವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ಬಹಿರಂಗಪಡಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಗಗನಯಾನಿಯೊಬ್ಬರನ್ನು ರಕ್ಷಿಸುವ ಸಲುವಾಗಿ ಶಸ್ತ್ರಚಿಕಿತ್ಸಕಿಯೊಬ್ಬರನ್ನು ಅಂತರಿಕ್ಷಕ್ಕೆ ಕಳುಹಿಸುವ ರೋಚಕ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.

English summary
A Russian actress and director blasted off to the International Space Station on Tuesday in a historic bid to best the United States to film the first movie in orbit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X