ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಲಸಿಕೆ ಪೈಪೋಟಿ: "Cheap And Best" ಬೆಲೆಗೆ ಸ್ಪುಟಿಕ್-ವಿ

|
Google Oneindia Kannada News

ಕ್ಯಾಲಿಫೋರ್ನಿಯಾ, ನವೆಂಬರ್.23: ಕೊರೊನಾವೈರಸ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಮುಂದುವರಿದ ರಾಷ್ಟ್ರಗಳ ನಡುವೆ ಪೈಪೋಟಿ ನಡೆಯುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಸಿದ್ಧವಾಗುತ್ತಿರುವ ಕೊವಿಡ್-19 ಲಸಿಕೆಗಿಂತ ಕಡಿಮೆ ದರದಲ್ಲಿ ರಷ್ಯಾದ ಸ್ಪುಟಿಕ್-ವಿ ಲಸಿಕೆ ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪಿ-ಫಿಜರ್ ಮತ್ತು ಮಾಡರ್ನಾ ಕಂಪನಿಯ ಕೊವಿಡ್-19 ಲಸಿಕೆಗಿಂತ ಅಗ್ಗದ ದರದಲ್ಲಿ ರಷ್ಯಾದ ಸ್ಪುಟಿಕ್-ವಿ ಲಸಿಕೆಯನ್ನು ನೀಡಲಾಗುತ್ತದೆ ಎಂದು ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ.

Covid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿCovid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿ

ವಿಶ್ವದಲ್ಲಿ 5,89,70,525 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ ಈವರೆಗೂ 13,93,227 ಜನರು ಪ್ರಾಣ ಬಿಟ್ಟಿದ್ದಾರೆ. ಕೊಂಚ ಸಮಾಧಾನದ ವಿಚಾರ ಎಂದರೆ 4,07,59,532 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಈ ಪೈಕಿ ಅಮೆರಿಕಾ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದರ ನಡುವೆ ಕೊವಿಡ್-19 ಲಸಿಕೆಗಳಿಗೆ ಕಂಪನಿಗಳು ಬೆಲೆ ನಿಗದಿಗೊಳಿಸುತ್ತಿವೆ. ಯಾವ ಕಂಪನಿಯ ಲಸಿಕೆಗೆ ಎಷ್ಟು ಬೆಲೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ.

ಕೊವಿಡ್-19 ಲಸಿಕೆ ನೀಡಲು ಮಾಡರ್ನಾ ಸಿದ್ಧ

ಕೊವಿಡ್-19 ಲಸಿಕೆ ನೀಡಲು ಮಾಡರ್ನಾ ಸಿದ್ಧ

ಸರ್ಕಾರಕ್ಕೆ ಮಾಡರ್ನ ಕಂಪನಿಯು ಕೊರೊನಾವೈರಸ್ ಲಸಿಕೆ ಮಾರಾಟ ಮಾಡುವುದಕ್ಕೆ ಸಿದ್ಧವಾಗಿದೆ. ಒಂದು ಡೋಸ್ ಕೊವಿಡ್-19 ಲಸಿಕೆಗೆ 1854 ರೂಪಾಯಿಯಿಂದ 2744 ರೂಪಾಯಿ (25-37 ಡಾಲರ್) ನಿಗದಿಗೊಳಿಸಲಾಗುತ್ತದೆ ಎಂದು ಕಂಪನಿಯ ಸಿಇಓ ಸ್ಟೆಫನ್ ಬ್ಯಾನ್ಸಲ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ನೀಡುವ ಲಸಿಕೆಗೆ ಕಂಪನಿಯು 740 ರೂಪಾಯಿಯಿಂದ 3708 ರೂಪಾಯಿವರೆಗೂ ದರ ನಿಗದಿಗೊಳಿಸಲಾಗಿರುತ್ತದೆ ಎಂದು ಜರ್ಮನ್ ಕಂಪನಿಗೆ ಮಾಹಿತಿ ನೀಡಿದ್ದಾರೆ.

ಪಿ-ಫಿಜರ್ ಕಂಪನಿಯ ಕೊರೊನಾವೈರಸ್ ಲಸಿಕೆ ಬೆಲೆ?

ಪಿ-ಫಿಜರ್ ಕಂಪನಿಯ ಕೊರೊನಾವೈರಸ್ ಲಸಿಕೆ ಬೆಲೆ?

ಕೊರೊನಾವೈರಸ್ ಸೋಂಕಿತರಿಗೆ ಪಿ-ಫಿಜರ್ ಕಂಪನಿಯ ಲಸಿಕೆಯ ಒಂದು ಡೋಸ್ ಗೆ 1447 ರೂಪಾಯಿ(19.50 ಡಾಲರ್ ) ದರ ನಿಗದಿಗೊಳಿಸಲಾಗಿದೆ. ಒಬ್ಬ ಕೊವಿಡ್-19 ಸೋಂಕಿತನಿಗೆ ಕನಿಷ್ಠ 2 ಡೋಸ್ ಲಸಿಕೆ ಅಗತ್ಯವಿರುತ್ತದೆ. ಈ ಹಿನ್ನೆಲೆ ಪಿ-ಫಿಜರ್ ಕಂಪನಿಯ ಲಸಿಕೆ ಪಡೆದುಕೊಳ್ಳಲು ಕನಿಷ್ಠ 3708 ರೂಪಾಯಿ (50 ಡಾಲರ್) ವೆಚ್ಚವಾಗಲಿದೆ.

ರಷ್ಯಾದ ಸ್ಪುಟಿಕ್-ವಿ ಲಸಿಕೆ ಮೌಲ್ಯ ಕಡಿಮೆ

ರಷ್ಯಾದ ಸ್ಪುಟಿಕ್-ವಿ ಲಸಿಕೆ ಮೌಲ್ಯ ಕಡಿಮೆ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪಿ-ಫಿಜರ್ ಮತ್ತು ಮಾಡರ್ನಾ ಕಂಪನಿಯ ಕೊರೊನಾವೈರಸ್ ಲಸಿಕೆಗಿಂತ ರಷ್ಯಾದ ಸ್ಪುಟಿಕ್-ವಿ ಲಸಿಕೆ ದರವು ತೀರಾ ಕಡಿಮೆಯಾಗಿರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ರಷ್ಯಾದಲ್ಲಿರುವ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದ ಗಮಾಲಿಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಅಭಿವೃದ್ಧಿಪಡಿಸಿರುವ ಸ್ಪುಟಿಕ್-ವಿ ಲಸಿಕೆಯನ್ನು ಆಗಸ್ಟ್.11ರಂದೇ ನೋಂದಾಯಿಸಲಾಗಿತ್ತು. ವಿಶ್ವದಲ್ಲೇ ಮೊದಲ ಕೊವಿಡ್-19 ಲಸಿಕೆ ನೋಂದಾಯಿಸಿದ ಮೊದಲ ರಾಷ್ಟ್ರ ಎಂದು ರಷ್ಯಾ ಎನಿಸಿಕೊಂಡಿದೆ.

ಶೇ.92ರಷ್ಟು ಪರಿಣಾಮಕಾರಿ ಲಸಿಕೆ ಸ್ಪುಟಿಕ್-ವಿ

ಶೇ.92ರಷ್ಟು ಪರಿಣಾಮಕಾರಿ ಲಸಿಕೆ ಸ್ಪುಟಿಕ್-ವಿ

ಕೊರೊನಾವೈರಸ್ ಸೋಂಕಿತರ ಮೇಲೆ ಪ್ರಯೋಗಿಸುವುದಕ್ಕೆ ರಷ್ಯಾದಲ್ಲಿ ಸಿದ್ಧಪಡಿಸಿರುವ ಸ್ಟುಟಿಕ್-ವಿ ಲಸಿಕೆಯು ಶೇ.92ರಷ್ಟು ಪರಿಣಾಮಕಾರಿ ಮತ್ತು ಸುರಕ್ಷಿತವಾಗಿದೆ. ಕಳೆದ ನವೆಂಬರ್.11ರಂದು ಈ ಬಗ್ಗೆ ಲಸಿಕೆ ಸಂಶೋಧನಾ ಸಂಸ್ಥೆಯು ಖಾತ್ರಿಪಡಿಸಿತ್ತು. ನವೆಂಬರ್.17ರಂದು ಮಾಡರ್ನಾ ಲಸಿಕೆಯು ನಡೆಸಿದ ಮೂರನೇ ಹಂತದ ವೈದ್ಯಕೀಯ ತಪಾಸಣೆಯಲ್ಲಿ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಮೆರಿಕಾದ ಡಾಟಾ ಸೇಫ್ಟಿ ಮಾನಿಟರಿಂಗ್ ಬೋರ್ಡ್ ಹೇಳಿತ್ತು. ಅದೇ ರೀತಿ ಪಿ-ಫಿಜರ್ ಲಸಿಕೆಯು ಶೇ.95ರಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಹೇಳಲಾಗಿತ್ತು.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada
ಭಾರತದಲ್ಲಿ ಕನಿಷ್ಠ ಬೆಲೆಗೆ ಕೊರೊನಾವೈರಸ್ ಲಸಿಕೆ ಲಭ್ಯ

ಭಾರತದಲ್ಲಿ ಕನಿಷ್ಠ ಬೆಲೆಗೆ ಕೊರೊನಾವೈರಸ್ ಲಸಿಕೆ ಲಭ್ಯ

ಅಗ್ಗದ ದರದಲ್ಲಿ ಭಾರತೀಯರಿಗೆ ಕೊವಿಡ್-19 ಲಸಿಕೆಯನ್ನು ಒದಗಿಸಲಾಗುತ್ತದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅದರ್ ಪೂನಾವಾಲಾ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಲ್ಪಟ್ಟ ಕೊರೊನಾವೈರಸ್ ಸೋಂಕಿನ ಲಸಿಕೆಯು ಭಾರತೀಯರಿಗೆ ಅತ್ಯಂತ ಅಗ್ಗದ ದರದಲ್ಲಿ ಸಿಗಲಿದೆ. ಸಾಮಾನ್ಯರಲ್ಲೇ ಸಾಮಾನ್ಯ ಜನರಿಗೆ ಕೇವಲ 500 ರಿಂದ 600 ರೂಪಾಯಿಗೆ ಕೊರೊನಾವೈರಸ್ ಲಸಿಕೆಯು ಸಿಗಲಿದೆ ಎಂದು ಪೂನಾವಾಲಾ ಮಾಹಿತಿ ನೀಡಿದ್ದಾರೆ. ಯುನೈಟೆಡ್ ಕಿಂಗ್ ಡಮ್ ಸರ್ಕಾರಕ್ಕೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಲಸಿಕೆಯನ್ನು ತುರ್ತು ದೃಢೀಕರಿಸುವಂತೆ ಕೋರಲಾಗಿದೆ.

English summary
Russian Coronavirus Vaccine Sputnik V Will Be Priced Much Lower Than Pfizer And Moderna Vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X