ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದೊಂದಿಗೆ ವ್ಯಾಪಾರ ಸ್ಥಗಿತಗೊಳಿಸಲು ಟಾಟಾ ಸ್ಟೀಲ್ ನಿರ್ಧಾರ

|
Google Oneindia Kannada News

ಮಾಸ್ಕೋ, ಏಪ್ರಿಲ್ 20: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೆ ಈಗಾಗಲೇ ಜಾಗತಿಕ ಕಂಪನಿಗಳು ನಿರ್ಬಂಧ ವಿಧಿಸಿವೆ. ಬಹುರಾಷ್ಟ್ರೀಯ ಕಂಪನಿಗಳು ರಷ್ಯಾದಿಂದ ಅಂತರ ಕಾಯ್ದುಕೊಳ್ಳುತ್ತಿದೆ. ಈಗ ಅದೇ ಪಟ್ಟಿಗೆ ಭಾರತದ ಬಹುರಾಷ್ಟ್ರೀಯ ಕಂಪನಿ ಟಾಟಾ ಗ್ರೂಪ್ ಕೂಡ ಸೇರ್ಪಡೆಯಾಗಿದೆ.

ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಭಾರತದ ಬಹುರಾಷ್ಟ್ರೀಯ ಉಕ್ಕು ತಯಾರಕ ಟಾಟಾ ಸ್ಟೀಲ್ ಬುಧವಾರ ರಷ್ಯಾದೊಂದಿಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ.

ರಷ್ಯಾದಿಂದ ಸರ್ಮತ್ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ; ವಿರೋಧಿಗಳಿಗೆ ಪುಟಿನ್ ಎಚ್ಚರಿಕೆ ರಷ್ಯಾದಿಂದ ಸರ್ಮತ್ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ; ವಿರೋಧಿಗಳಿಗೆ ಪುಟಿನ್ ಎಚ್ಚರಿಕೆ

"ಟಾಟಾ ಸ್ಟೀಲ್ ರಷ್ಯಾದಲ್ಲಿ ಯಾವುದೇ ಕಾರ್ಯಾಚರಣೆ ಅಥವಾ ಉದ್ಯೋಗಿಗಳನ್ನು ಹೊಂದಿಲ್ಲ. ನಾವು ರಷ್ಯಾದೊಂದಿಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸಲು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ" ಎಂದು ಟಾಟಾ ಸ್ಟೀಲ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Russia-Ukraine War: Tata Steel to stop business with Russia

ರಷ್ಯಾ ಮೇಲಿನ ಅವಲಂಬನೆ ಅಂತ್ಯ:

ಭಾರತ, ಯುಕೆ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿರುವ ಕಂಪನಿಯ ಎಲ್ಲಾ ಉಕ್ಕಿನ ಉತ್ಪಾದನಾ ತಾಣಗಳು ರಷ್ಯಾದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವುದರಿಂದ ವ್ಯಾಪಾರದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಕಚ್ಚಾ ವಸ್ತುಗಳ ಪರ್ಯಾಯ ಪೂರೈಕೆಗಳನ್ನು ಪಡೆದಿವೆ ಎಂದು ಕಂಪನಿ ಹೇಳಿದೆ. ಭಾರತದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಟಾಟಾ ಸ್ಟೀಲ್ ಭೌಗೋಳಿಕವಾಗಿ ತನ್ನ ಕಾರ್ಯಾಚರಣೆಗಳಿಗಾಗಿ ರಷ್ಯಾದಿಂದ ಸೀಮಿತ ಪ್ರಮಾಣದ ಕಲ್ಲಿದ್ದಲನ್ನು ಪಡೆಯುತ್ತಿತ್ತು ಎಂದು ತಿಳಿಸಿದೆ.

Russia-Ukraine War: Tata Steel to stop business with Russia
English summary
Russia-Ukraine War: Tata Steel to stop business with Russia. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X