ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ದಾಳಿಗೆ 3000 ಯೋಧರು ಸಾವು,10 ಸಾವಿರಕ್ಕೂ ಹೆಚ್ಚು ಮಂದಿಗೆ ಗಾಯ: ಝೆಲೆನ್ಸ್ಕಿ

|
Google Oneindia Kannada News

ಕೀವ್, ಏಪ್ರಿಲ್ 16 : ಉಕ್ರೇನ್‌ ಮೇಲೆ ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ರಷ್ಯಾ ದಾಳಿ ಮಾಡುತ್ತಲೇ ಇದೆ. ಸದ್ಯ ರಷ್ಯಾ ದಾಳಿಯಿಂದಾಗಿ ಉಕ್ರೇನ್‌ ನಲ್ಲಿ 3000 ಸಾವಿರ ಯೋಧರು ಸಾವನ್ನಪ್ಪಿದ್ದು, 10 ಸಾವಿರಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಗಾಯಗೊಂಡವರಲ್ಲಿ ಎಷ್ಟು ಮಂದಿ ಬದುಕುಳಿಯುತ್ತಾರೆ ಎಂಬುದನ್ನ ಹೇಳಲು ಸಾಧ್ಯವಿಲ್ಲ ಅಂತ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.

ಇನ್ನು ಉಕ್ರೇನ್‌ ರಾಜಧಾನಿ ಕೀವ್‌ ಸುತ್ತಮುತ್ತ ಸುಮಾರು 900 ಕ್ಕೂ ಹೆಚ್ಚು ನಾಗರಿಕರ ಮೃತದೇಹಗಳು ಪತ್ತೆಯಾಗಿದೆ. ಅದರಲ್ಲಿ ಸಾಕಷ್ಟು ಜನರ ಮೇಲೆ ಮಾರಾಣಾಂತಿಕವಾಗಿ ಗುಂಡಿನ ದಾಳಿ ಮಾಡಲಾಗಿದೆ ಅಂತ ಉಕ್ರೇನ್ ಪೊಲೀಸರು ಮಾಹಿತಿ ನೀಡಿದ್ದಾರೆ.

Russia- Ukraine War : Nearly 3,000 Ukrainian soldiers killed, 10,000 injured says Zelenskyy

ಫೆಬ್ರವರಿ 24 ರಿಂದ ಆರಂಭವಾದ ರಷ್ಯಾ-ಉಕ್ರೇನ್ ಯುದ್ಧ ಇಂದು ಕೂಡ ಮುಂದುವರೆಯುತ್ತಲೇ ಇದೆ. ಅದರಲ್ಲೂ ಪುಟಿನ್‌ ಪಡೆ ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ವಶಕ್ಕೆ ಪಡೆದುಕೊಳ್ಳಲು ಸತತ ಪ್ರಯತ್ನ ಪಡುತ್ತಿದೆ. ಇದಕ್ಕಾಗಿ ಉಕ್ರೇನ್‌ ಪ್ರಮುಖ ನಗರಗಳಾದ ಮೈಕೋಲೇವ್, ಮರಿಯುಪೋಲ್, ಕೀವ್, ಖಾರ್ಕೀವ್, ಪ್ರದೇಶಗಳಲ್ಲಿ ಶೆಲ್, ಬಾಂಬ್‌ಗಳ ದಾಳಿಯನ್ನ ಮಾಡುತ್ತಿದೆ. ಇನ್ನು ರಷ್ಯಾದ ದಾಳಿಗೆ ಈ ಎಲ್ಲಾ ನಗರಗಳು ಅಕ್ಷರಶಃ ನಲುಗಿ ಹೋಗಿದೆ. ರಷ್ಯಾ ಸೇನೆ ನಾಗರಿಕರನ್ನೇ ಟಾರ್ಗೆಟ್‌ ಮಾಡಿ ದಾಳಿ ಮಾಡುತ್ತಿದ್ದು, ಈ ಭೀಕರ ಯುದ್ಧದಲ್ಲಿ ಸಾವಿರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಉಕ್ರೇನ್‌ ಬಿಟ್ಟು ಬೇರೆ ದೇಶಗಳಿಗೆ ಪಲಾಯನ ಆಗಿದ್ದಾರೆ.

Russia- Ukraine War : Nearly 3,000 Ukrainian soldiers killed, 10,000 injured says Zelenskyy

ಸದ್ಯ ರಷ್ಯಾ ದಾಳಿಗೆ ಉಕ್ರೇನ್‌ ಕೂಡ ದಿಟ್ಟ ಉತ್ತರ ನೀಡುತ್ತಿದ್ದು, ಈವರೆಗೂ 18 ಸಾವಿರದಿಂದ 20 ಸಾವಿರ ರಷ್ಯಾ ಯೋಧರನ್ನ ಉಕ್ರೇನ್ ಯೋಧರರು ಹತ್ಯೆ ಮಾಡಿದ್ದಾರೆ ಅಂತ ಝೆಲೆನ್ಸ್ಕಿ ಹೇಳಿದ್ದಾರೆ. ಅಲ್ಲದೆ ಇದರ ಜೊತೆಗೆ ರಷ್ಯಾದ ಭೂಪ್ರದೇಶದ ಮೇಲೂ ನಮ್ಮ ಸೇನೆ ದಾಳಿ ಮುಂದುವರೆಸಿದ್ದು, ರಷ್ಯಾಗೆ ಸೇರಿದ ಯುದ್ಧವಾಹನಗಳು, ಕ್ಷಿಪಣಿಗಳು, ಟ್ಯಾಂಕರ್‌ಗಳನ್ನು ಧ್ವಂಸ ಮಾಡಿದ್ದೇವೆ ಎಂದು ಹೇಳಿದ್ದಾರೆ.

English summary
Russia- Ukraine War : Ukraine's President Volodymyr Zelenskyy has said about 3,000 Ukrainian troops have been killed, 10,000 injured in seven weeks of conflict with russia. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X