ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಮೇಲೆ ರಷ್ಯಾ ದಾಳಿ ಸರಿ ಎಂದ ಅಭಯ್ ಕುಮಾರ್ ಸಿಂಗ್ ಯಾರು?

|
Google Oneindia Kannada News

ಮಾಸ್ಕೋ, ಮಾರ್ಚ್ 2: ಸದ್ಯಕ್ಕೆ ಪ್ರಪಂಚದ ಎಲ್ಲರ ಕಣ್ಣು ರಷ್ಯಾ ಉಕ್ರೇನ್ ಯುದ್ಧದ ಮೇಲಿದೆ. ಇದರ ನಡುವೆ ಭಾರತ ಮೂಲದ ರಷ್ಯಾ ಶಾಸಕರೊಬ್ಬರ ಹೇಳಿಕೆ ಕೆಲವರ ಕೆಂಗಣ್ಣಿಗೆ ಕಾರಣವಾಗಿದೆ.

ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ದಾಳಿಯನ್ನು ರಷ್ಯಾದ ಶಾಸಕರೊಬ್ಬರು ಸಮರ್ಥಿಸಿಕೊಂಡಿದ್ದಾರೆ, ಹೌದು, ಬಿಹಾರ ಮೂಲದ ಡಾ. ಅಭಯ್ ಕುಮಾರ್ ಸಿಂಗ್ ಎಂಬುವವರು ಸದ್ಯ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಂಪುಟದಲ್ಲಿ ವಿಧಾಯಕರಾಗಿ ಕೆಲಸ ಮಾಡುತ್ತಿದ್ದು ರಷ್ಯಾದ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕ್ರಿಮಿಯಾ ಹತ್ತಿರದ ಖೆರ್ಸನ್ ನಗರ ವಶಕ್ಕೆ ಪಡೆದ ರಷ್ಯಾಕ್ರಿಮಿಯಾ ಹತ್ತಿರದ ಖೆರ್ಸನ್ ನಗರ ವಶಕ್ಕೆ ಪಡೆದ ರಷ್ಯಾ

ಪುಟಿನ್ ಅವರ ಯುನೈಟೆಡ್ ರಷ್ಯಾ ಪಾರ್ಟಿಯ ಸದಸ್ಯರಾಗಿರುವ ಅಭಯ್ ಕುಮಾರ್ ಅವರು ಈ ದಾಳಿಗೂ ಮುಂಚೆ ಉಕ್ರೇನ್ ದೇಶಕ್ಕೆ ಮಾತುಕತೆ ನಡೆಸಲು ಸಾಕಷ್ಟು ಅವಕಾಶ ನೀಡುತ್ತು ಎಂದು ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

Russia-Ukraine Crisis: Meet Bihars Abhay Kumar Singh, Member Of Putins Party

ಹೀಗಾಗಿ, ರಷ್ಯಾ ಅಧ್ಯಕ್ಷರಿಗೆ ಹಾಗೂ ಸಂಸತ್ತಿಗೆ ಉಕ್ರೇನ್ ಮೇಲೆ ದಾಳಿ ಮಾಡದ ಹೊರತು ಮತ್ಯಾವುದೇ ಆಯ್ಕೆಗಳಿರಲಿಲ್ಲ ಎಂಬ ಅವರ ಹೇಳಿಕೆಯಿಂದ ತಿಳಿದುಬಂದಿದೆ.
ಮುಂದುವರೆಯುತ್ತ, ಉಕ್ರೇನ್ ಮೇಲೆ ಯಾವುದೇ ರೀತಿಯ ಅಣು ಬಾಂಬ್ ಪ್ರಯೋಗಿಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ ಎಂದು ಹೇಳಲಾಗಿದೆ.

ಡಾ. ಅಭಯ್ ಕುಮಾರ್ ಸಿಂಗ್ ಅವರು ಮೂಲತಃ ಭಾರತದ ಬಿಹಾರ ರಾಜ್ಯದ ಪಾಟ್ನಾದವರಾಗಿದ್ದಾರೆ. 1991ರಲ್ಲಿ ಅವರು ವೈದ್ಯಕೀಯ ಶಿಕ್ಷಣ ಪಡೆಯಲು ರಷ್ಯಾಗೆ ತೆರಳಿದ್ದರು. ಬಳಿಕ ಅವರು ಭಾರತಕ್ಕೆ ಮರಳಿ ವೈದ್ಯಕೀಯ ವೃತ್ತಿ ಅಭ್ಯಸಿಸುವ ಉದ್ದೇಶ ಹೊಂದಿದ್ದರು.

ಆದರೆ ಕಾರಣಾಂತರಗಳಿಂದ ಮತ್ತೆ ಅವರು ರಷ್ಯಾಗೆ ಹಿಂತಿರುಗಿ ಅಲ್ಲಿ ಫಾರ್ಮಾ ವ್ಯಾಪಾರದಲ್ಲಿ ತೊಡಗಿಸಿಕೊಂಡರು. 2015ರಲ್ಲಿ ಪುಟಿನ್ ಅವರ ಪಕ್ಷವನ್ನು ಸೇರಿದ ಅವರು 2018ರಲ್ಲಿ ಪಶ್ಚಿಮ ರಷ್ಯಾದ ಖುರ್ಸ್ಕ್ ಪ್ರದೇಶದಲ್ಲಿ ಪ್ರಾಂತೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು.

ಆದರೆ, ಇಂತಹ ಪರಿಸ್ಥಿತಿಯಲ್ಲಿ ಬೇರೆ ಯಾವುದೇ ದೇಶ ರಷ್ಯಾದ ಮೇಲೆ ಆಕ್ರಮಣ ಮಾಡಿದರೆ ಅದಕ್ಕೆ ಪ್ರತ್ಯುತ್ತರ ನೀಡಲು ಸಮರ್ಥರಾಗುವ ನಿಟ್ಟಿನಲ್ಲಿ ಅಣು ಬಾಂಬ್ ಪಡೆಯನ್ನು ಸಚೇತವಾಗಿರುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ.

ಈ ಮಧ್ಯೆ ಯುದ್ಧಕ್ಕೆ ಸಂಬಂಧಿಸಿದಂತೆ, ಉಕ್ರೇನ್ ಸೇನೆ ಹೇಳಿಕೊಂಡಿರುವಂತೆ ಉಕ್ರೇನಿನ ಖಾರ್ಕೀವ್ ನಗರದಲ್ಲಿ ರಷ್ಯಾದ ವಾಯುಪಡೆ ಸೇನೆ ಪ್ರವೇಶಿಸಿದ್ದು ತ್ವರಿತವಾಗಿ ಸಂಘರ್ಷಗಳು ಉಂಟಾಗಿವೆ.

ಉಕ್ರೇನಿನ ಸೇನೆಯು ಟೆಲಿಗ್ರಾಂ ಆಪ್ ನಲ್ಲಿ ರಷ್ಯಾ ವಾಯುಪಡೆ ಸೇನೆಯು ಖಾರ್ಕೀವ್ ನಗರಕ್ಕೆ ಬಂದಿಳಿದಿದ್ದು ತಕ್ಷಣವೇ ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದಾರೆ ಎಂಬ ಸಂದೇಶ ಬಿತ್ತರಿಸಿದೆ.

ಚೀನಾ ದೇಶವು ಒಂದು ವೇಳೆ ಬಾಂಗ್ಲಾ ದೇಶದಲ್ಲಿ ತನ್ನ ಸೈನ್ಯದ ಬೇಸನ್ನು ನಿರ್ಮಿಸಿದರೆ ಭಾರತಕ್ಕೆ ಏನು ಅನಿಸಬಹುದೆಂಬ ಪ್ರಶ್ನೆ ಕೇಳಿದ್ದಾರೆ. ಅದರಂತೆ, ಉಕ್ರೇನ್ ನಾಟೊ ಕಾರ್ಯಪಡೆಯೊಂದಿಗೆ ಸೇರಿದರೆ, ನಾಟೊ ತನ್ನ ಸೈನ್ಯವನ್ನು ಉಕ್ರೇನ್ ದೇಶದಲ್ಲಿ ನಿಯೋಜಿಸುತ್ತದೆ ಹಾಗೂ ಉಕ್ರೇನ್ ನಮ್ಮ ನೆರೆಯ ದೇಶವಾಗಿದೆ. ಇದು ಒಪ್ಪಂದದ ಉಲ್ಲಂಘನೆಯಾಗಿದೆ ಎಂಬುದಾಗಿ ಅಭಯ ಕುಮಾರ್ ಹೇಳಿದ್ದಾರೆ ಎಂದು ಹೇಳಲಾಗಿದೆ.

English summary
As Russia is on a warpath with Ukraine which President Vladimir Putin terms as a special military operation, Abhay Kumar Singh, an Indian-origin member of Putin's party has come into the news for his support to Russia's military action on Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X