ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪ್ ರಾಷ್ಟ್ರಗಳಲ್ಲಿ ನಿರಾಶ್ರಿತರ ಬಿಕ್ಕಟ್ಟು ಸೃಷ್ಟಿಸಿದ ರಷ್ಯಾ-ಉಕ್ರೇನ್ ಯುದ್ಧ

|
Google Oneindia Kannada News

ಕೀವ್, ಮಾರ್ಚ್ 29: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಯುರೋಪ್ ರಾಷ್ಟ್ರಗಳಲ್ಲಿ ಅತ್ಯಂತ ಕೆಟ್ಟದಾದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಎರಡನೇ ಮಹಾಯುದ್ಧದ ನಂತರದಲ್ಲಿ ಮೊದಲ ಬಾರಿಗೆ ಐರೋಪ್ಯ ರಾಷ್ಟ್ರಗಳಲ್ಲಿ ಅತಿಹೆಚ್ಚು ನಿರಾಶ್ರಿತರ ಬಿಕ್ಕಟ್ಟು ಉಲ್ಬಣಿಸಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಆಯೋಗ(ಯುಎನ್‌ಹೆಚ್‌ಸಿಆರ್) ತಿಳಿಸಿದೆ.

ರಷ್ಯಾ ದಾಳಿಯಿಂದ ಬೆದರಿದ 38 ಲಕ್ಷಕ್ಕೂ ಹೆಚ್ಚು ಜನರು ಅಕ್ಕಪಕ್ಕದ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ಪೊಲೆಂಡ್, ರೋಮೇನಿಯಾ, ಮಾಲ್ಡೋವಾ, ಹಂಗೇರಿ, ಸ್ಲೋವಾಕಿಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ನಿರಾಶ್ರಿತರು ವಲಸೆ ಹೋಗಿದ್ದಾರೆ ಎಂದು ಯುಎನ್‌ಹೆಚ್‌ಸಿಆರ್ ತಿಳಿಸಿದೆ.

3ನೇ ಮಹಾಯುದ್ಧ?: ರಷ್ಯಾ-ಉಕ್ರೇನ್ ಹಿಂದಿರುವ ದೈತ್ಯ ರಾಷ್ಟ್ರಗಳು ಯಾವುವು?3ನೇ ಮಹಾಯುದ್ಧ?: ರಷ್ಯಾ-ಉಕ್ರೇನ್ ಹಿಂದಿರುವ ದೈತ್ಯ ರಾಷ್ಟ್ರಗಳು ಯಾವುವು?

ಕಳೆದ ಸೋಮವಾರ ಯುಎನ್‌ಹೆಚ್‌ಸಿಆರ್ ಘೋಷಿಸಿದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಒಟ್ಟು 3.87 ಮಿಲಿಯನ್ ಜನರು ಉಕ್ರೇನ್ ತೊರೆದು ಹೋಗಿದ್ದಾರೆ. ರಾಜಕೀಯವಾಗಿ ಸಮಸ್ಯೆ ಪರಿಹಾರ ಆಗುವವರೆಗೂ ಉಕ್ರೇನ್ ನೆಲದಿಂದ ತಮ್ಮ ದೇಶಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆಯಾಗುವ ಭರವಸೆಯಿಲ್ಲ ಎಂದು ಪೋಲೆಂಡ್‌ನಲ್ಲಿರುವ ಏಜೆನ್ಸಿಯ ಹಿರಿಯ ತುರ್ತು ಸಂಯೋಜಕ ಅಲೆಕ್ಸ್ ಮುಂಡ್ಟ್ ಹೇಳಿದ್ದಾರೆ.

Russia-Ukraine conflict has triggered Europe’s worst refugee crisis; UNHCR

ಉಕ್ರೇನ್ ತೊರೆಯುವುದಕ್ಕೆ ಸಿದ್ಧರಿಲ್ಲ ಕೆಲವು ಮಂದಿ:

ರಷ್ಯಾದ ಯುದ್ಧದಿಂದಾಗಿ ಯುಕ್ರೇನ್‌ನಲ್ಲಿ 6.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದು, ದೇಶದ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಸ್ಥೆ (ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್) ಅಂದಾಜಿಸಿದೆ. ಇನ್ನೂ 12 ಮಿಲಿಯನ್ ಜನರು ಹೋರಾಟ ತೀವ್ರವಾಗಿರುವ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಅಥವಾ ಅವರು ಉಕ್ರೇನ್ ತೊರೆಯುವುದಕ್ಕೆ ಸಿದ್ಧರಿಲ್ಲ ಎಂದು ಹೇಳಿದೆ.

ಉಕ್ರೇನ್-ರಷ್ಯಾ ಸಂಧಾನ ಮಾತುಕತೆ ಸಫಲ:
ರಷ್ಯಾದ ದಾಳಿಗೆ ಬೆದರಿದ ಉಕ್ರೇನ್, ನ್ಯಾಟೋ ಸದಸ್ಯತ್ವ ಪಡೆದುಕೊಳ್ಳುವ ತನ್ನ ಉದ್ದೇಶದಿಂದ ಹಿಂದೆ ಸರಿದಿದೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಚರ್ಚೆಯ ನಂತರ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಮಿಲಿಟರಿ ಚಟುವಟಿಕೆಯನ್ನು ಕಡಿಮೆ ಮಾಡುವುದಾಗಿ ಮಾಸ್ಕೋ ಹೇಳಿದೆ. ಆ ಮೂಲಕ ಮಂಗಳವಾರ ನಡೆದ ಸಂಧಾನ ಮಾತುಕತೆಯು ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.

ಉಕ್ರೇನ್‌ನ ಕೀವ್ ಮತ್ತು ಚೆರ್ನಿಹಿವ್ ಸುತ್ತಮುತ್ತಲಿನ ಮಿಲಿಟರಿ ಚಟುವಟಿಕೆಯನ್ನು ತೀವ್ರವಾಗಿ ಕಡಿತಗೊಳಿಸಲು ರಷ್ಯಾ ನಿರ್ಧರಿಸಿದೆ ಎಂದು ಇಸ್ತಾನ್‌ಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮಾತುಕತೆಯ ನಂತರ ರಕ್ಷಣಾ ಸಚಿವರೊಬ್ಬರು ಹೇಳಿದ್ದಾರೆ.

English summary
Russia-Ukraine conflict has triggered Europe’s worst refugee crisis; UNHCR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X