ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ರಷ್ಯಾದಿಂದ 100 ಮಿಲಿಯನ್ ಸ್ಪುಟ್ನಿಕ್ V ಕೊರೊನಾ ಲಸಿಕೆ ಮಾರಾಟ

|
Google Oneindia Kannada News

ಮಾಸ್ಕೋ, ಸೆಪ್ಟೆಂಬರ್ 16: ರಷ್ಯಾದ ಸಾವರಿನ್ ಹೆಲ್ತ್ ಫಂಡ್ ಭಾರತದ ರೆಡ್ಡೀಸ್ ಲ್ಯಾಬೊರೇಟರಿಗೆ ಸ್ಪುಟ್ನಿಕ್ V ಲಸಿಕೆಯ 100 ಮಿಲಿಯನ್ ಡೋಸ್‌ಗಳನ್ನು ನೀಡುವುದಾಗಿ ತಿಳಿಸಿದೆ.

ಭಾರತದಲ್ಲಿ ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ V ನೀಡಲು ಅನುಮತಿ ದೊರೆತಿದೆ. ಭಾರತದಲ್ಲಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಯಲಿದೆ.

ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ

ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಕಜಕಿಸ್ತಾನ, ಬ್ರೆಜಿಲ್, ಮೆಕ್ಸಿಕೋ ಜತೆ ಒಪ್ಪಂದ ಮಾಡಿಕೊಂಡಿದೆ. 300 ಮಿಲಿಯನ್ ಸ್ಪುಟ್ನಿಕ್ V ಲಸಿಕೆಯನ್ನು ನೀಡುವುದಾಗಿ ರಷ್ಯಾ ಹೇಳಿದೆ. ಫೇಸ್‌ 3 ಟ್ರಯಲ್‌ನಲ್ಲಿ 40 ಸಾವಿರ ಸ್ವಯಂಸೇವಕರು ಪಾಲ್ಗೊಳ್ಳಲಿದ್ದಾರೆ.

ಫೇಸ್‌ 3 ಟ್ರಯಲ್ ನಡೆಯುವುದೆಲ್ಲಿ?

ಫೇಸ್‌ 3 ಟ್ರಯಲ್ ನಡೆಯುವುದೆಲ್ಲಿ?

ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ Vಯ ಮೂರನೇ ಹಂತದ ಪ್ರಯೋಗ ಡಾ. ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ನಡೆಯಲಿದೆ. ಭಾರತದಲ್ಲಿ ಕೂಡ ಕೊರೊನಾ ಸೋಂಕಿನ ವಿರುದ್ಧ ಈ ಲಸಿಕೆ ಹೋರಾಡಲಿದೆ ಎನ್ನುವ ನಂಬಿಕೆ ಇದೆ ಎಂದು ಕೋ ಚೇರ್ಮನ್ ಜಿವಿ ಪ್ರಸಾದ್ ತಿಳಿಸಿದ್ದಾರೆ.

ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ V ಲಸಿಕೆ ತಯಾರಿಕೆ, ಪ್ರಯೋಗಕ್ಕೆ ಒಪ್ಪಿಗೆ

ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ V ಲಸಿಕೆ ತಯಾರಿಕೆ, ಪ್ರಯೋಗಕ್ಕೆ ಒಪ್ಪಿಗೆ

ಸ್ಪುಟ್ನಿಕ್ 5 ಲಸಿಕೆಯ ಮೂರನೇ ಹಂತದ ಪ್ರಯೋಗ ಮತ್ತು ಲಸಿಕೆ ತಯಾರಿಕೆ ಕುರಿತು ರಷ್ಯಾದ ಮನವಿಯನ್ನು ಭಾರತ ಸ್ವೀಕರಿಸಿದೆ ಎಂದು ಸರ್ಕಾರ ತಿಳಿಸಿದೆ. ರಷ್ಯಾದ ಮನವಿಗೆ ಅನುಕೂಲವಾಗುವಂತೆ ಭಾರತ ಕಾರ್ಯ ನಿರ್ವಹಿಸಲಿದೆ. ರಷ್ಯಾವು ಸೂಕ್ತ ಕಾರಣಗಳ ಮೂಲಕ ಭಾರತವನ್ನು ತಲುಪಿದೆ. ಹಾಗೂ ಎರಡು ಕಡೆಗಳಲ್ಲಿ ಭಾರತದ ಸಹಾಯವನ್ನು ಕೋರಿದೆ. ಲಸಿಕೆ ತಯಾರಿಕಾ ಕಂಪನಿ ಕೂಡ ಉತ್ತಮವಾಗಿದೆ. ಭಾರತದ ಕಂಪನಿ ಜೊತೆ ಸೇರಿ ದೊಡ್ಡ ಮಟ್ಟದಲ್ಲಿ ಲಸಿಕೆ ತಯಾರಿಕೆಯ ಗುರಿ ಹೊಂದಿದೆ ಎಂದು ಹೇಳಿದೆ. ಸಮಗ್ರ ದತ್ತಾಂಶವನ್ನು ನೀಡಲಾಗಿದ್ದು, ಭಾರತದಲ್ಲಿ ಮೂರನೇ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೋರಿದ್ದಾರೆ. ಭಾರತದಿಂದ ಅನುಮೋದನೆ ಸಿಕ್ಕಿದ ನಂತರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತದಲ್ಲಿ ಆರಂಭವಾಗುತ್ತದೆ.

ರಷ್ಯಾ ಮನವಿಗೆ ಸಮ್ಮತಿ

ರಷ್ಯಾ ಮನವಿಗೆ ಸಮ್ಮತಿ

ರಷ್ಯಾದ ಮನವಿಗೆ ಭಾರತ ಒಪ್ಪಿಗೆ ನೀಡಿದೆ. ರಷ್ಯಾದೊಂದಿಗೆ ಭಾರತಕ್ಕೆ ಈಗ ತುಂಬಾ ಹತ್ತಿರದ ಗೆಳೆತನವಿದೆ. ಸ್ಪುಟ್ನಿಕ್ 5 ಲಸಿಕೆಯನ್ನು ಭಾರತದಲ್ಲಿಯೇ ತಯಾರಿಸಲು ಮೂರನಾಲ್ಕು ಕಂಪನಿಗಳು ಒಪ್ಪಿಗೆ ನೀಡಿವೆ. ಕಂಪನಿಯೊಂದು ಅಂತಿಮಗೊಳಿಸಿದ ನಂತರ ಭಾರತೀಯ ಸ್ವಯಂಸೇವಕರೊಂದಿಗೆ ಪ್ರಯೋಗಗಳು ಆರಂಭವಾಗುತ್ತವೆ. ಉಭಯ ರಾಷ್ಟ್ರಗಳ ಒಗ್ಗೂಡುವಿಕೆಯಿಂದ ಹೆಚ್ಚೆಚ್ಚು ಲಸಿಕೆಗಳನ್ನು ತಯಾರಿಸಬಹುದಾಗಿದೆ.

Recommended Video

Diganth ಹಾಗು Aindrita Ray ಮೊದಲ ದಿನದ ವಿಚಾರಣೆ ಹೇಗಾಯ್ತು | Oneindia Kannada
ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ

ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ

ವಿಶ್ವದ ಮೊಟ್ಟ ಮೊದಲ ಕೊರೊನಾ ಲಸಿಕೆ ಎನಿಸಿಕೊಂಡಿರುವ ರಷ್ಯಾದ ಸ್ಪುಟ್ನಿಕ್ 5 ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆಯಾಗಿದೆ. ಲಸಿಕೆಯನ್ನು ರಷ್ಯಾದ ಗಮಲೇಯ ನ್ಯಾಷನಲ್ ರೆಸರ್ಚ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಆಂಡ್ ಮೈಕ್ರೋಬಯೋಲಜಿ ಹಾಗೂ ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಈ ಲಸಿಕೆ ಉತ್ಪಾದಿಸಿವೆ.

English summary
Under the agreement, Russia's sovereign wealth fund will supply 100 million doses of Russia's COVID-19 vaccine to Indian drug maker. Both the trials and supply deal depend on central drug regulator's approval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X