ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ಅಕ್ಟೋಬರ್‌ 15ರ ವೇಳೆಗೆ ಎರಡನೇ ಕೊರೊನಾ ಲಸಿಕೆ ನೋಂದಣಿ

|
Google Oneindia Kannada News

ಮಾಸ್ಕೋ, ಸೆಪ್ಟೆಂಬರ್ 22: ರಷ್ಯಾವು ಅಕ್ಟೋಬರ್ 15ರ ವೇಳೆಗೆ ಎರಡನೇ ಕೊರೊನಾ ಲಸಿಕೆ ನೋಂದಣಿ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಡೀ ವಿಶ್ವದಲ್ಲೇ ಮೊದಲ ಕೊರೊನಾ ಲಸಿಕೆ ನೋಂದಣಿಯನ್ನು ರಷ್ಯಾ ಮಾಡಿತ್ತು. ಅದಕ್ಕೆ ಸ್ಪುಟ್ನಿಕ್ v ಎನ್ನುವ ನಾಮಕರಣವನ್ನೂ ಕೂಡ ಮಾಡಿತ್ತು.

ಆದರೆ ಮೂರನೇ ಹಂತದ ಲಸಿಕೆ ಪ್ರಯೋಗಕ್ಕೂ ಮುನ್ನವೇ ಲಸಿಕೆಯನ್ನು ನೋಂದಣಿ ಮಾಡಿರುವುದು ತಪ್ಪು, ಲಸಿಕೆಯ ಬಗ್ಗೆ ಭರವಸೆ ಹೊಂದಲು ಸಾಧ್ಯವಿಲ್ಲ ಎಂದು ಸಾಕಷ್ಟು ರಾಷ್ಟ್ರಗಳು ಅಪಸ್ವರ ಎತ್ತಿದ್ದವು.

ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ

ಕೆಲವೇ ವಾರಗಳಲ್ಲಿ ಭಾರತದ ಡಾ. ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ಸ್ಪುಟ್ನಿಕ್ V ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯಲಿದೆ.
ಹಾಗೆಯೇ ಅಕ್ಟೋಬರ್ 15 ರವೇಳೆಗೆ ಮತ್ತೊಂದು ಲಸಿಕೆಯನ್ನು ನೋಂದಣಿ ಮಾಡುತ್ತಿರುವುದು ಸಂತಸಕ್ಕೆ ಕಾರಣವಾಗಿದೆ.

ಲಸಿಕೆ ಅಭಿವೃದ್ಧಿಪಡಿಸುತ್ತಿರುವವರು ಯಾರು?

ಲಸಿಕೆ ಅಭಿವೃದ್ಧಿಪಡಿಸುತ್ತಿರುವವರು ಯಾರು?

ಕೊರೊನಾ ಲಸಿಕೆಯನ್ನು ಸೈಬೇರಿಯಾದ ವೆಕ್ಟರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿದೆ. ಕಳೆದ ವಾರ ಮೊದಲನೇ ಹಂತದ ಮಾನವನ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದೆ.

 ಪ್ರತಿಕಾಯಗಳ ವೃದ್ಧಿ

ಪ್ರತಿಕಾಯಗಳ ವೃದ್ಧಿ

ವಿಕ್ಟರ್ ಲಸಿಕೆಯ ಪ್ರಯೋಗವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಸಲಾಗಿತ್ತು, ಈ ಲಸಿಕೆಯಿಂದ ಮಾನವನ ದೇಹದಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ವೃದ್ಧಿಯಾಗುತ್ತವೆ ಎಂಬುದು ತಿಳಿದುಬಂದಿದೆ.

ರಷ್ಯಾದ ಮೊದಲ ಲಸಿಕೆಯಿಂದ ಅಡ್ಡಪರಿಣಾಮ

ರಷ್ಯಾದ ಮೊದಲ ಲಸಿಕೆಯಿಂದ ಅಡ್ಡಪರಿಣಾಮ

ಕೊರೊನಾ ತಡೆಗಟ್ಟುವ ಉದ್ದೇಶದಿಂದ ರಷ್ಯಾ ಸಿದ್ದಪಡಿಸಿರುವ ಸ್ಪುಟ್ನಿಕ್‌ ವಿ ಎಂಬ ಲಸಿಕೆ ಬಗ್ಗೆ ವೈದ್ಯಕೀಯ ಪರಿಣಿತರ ಅನುಮಾನಗಳು ವ್ಯಕ್ತಪಡಿಸಿರುವ ಮಧ್ಯೆಯೇ ಪ್ರಯೋಗಕ್ಕೆ ಒಳಗಾಗಿರುವ ಸ್ವಯಂ ಸೇವಕರಲ್ಲಿ ಏಳು ಜನರ ಪೈಕಿ ಒಬ್ಬರಿಗೆ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದೆ.
ಈ ಬಗ್ಗೆ ರಷ್ಯಾದ ಆರರೋಗ್ಯ ಸಚಿವ ಮಿಖೈಲ್‌ ಮುರಷ್ಕೊ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಲಸಿಕೆ ಪಡೆದುಕೊಂಡ ಸ್ವಯಂ ಸೇವಕರಲ್ಲಿ ಏಳು ಜನರ ಪೈಕಿ ಒಬ್ಬರಿಗೆ 24 ಗಂಟೆಯೊಳಗೆ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದೆ. ಅಂದಾಜು ಶೇ 14ರಷ್ಟು ಜನರಲ್ಲಿ ಸುಸ್ತು, 24 ಗಂಟೆಗಳ ವರೆಗೂ ಮಾಂಸಖಂಡಗಳಲ್ಲಿ ನೋವು ಹಾಗೂ ದೇಹದ ಉಷ್ಣಾಂಶದಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Recommended Video

Pangong ಸರೋವರದಿಂದ ಹಿಂದೆ ಸರಿಯಲ್ಲ ಎಂದ China | Oneindia Kannada
ಸ್ಪುಟ್ನಿಕ್‌ ವಿ ಲಸಿಕೆ

ಸ್ಪುಟ್ನಿಕ್‌ ವಿ ಲಸಿಕೆ

ಇನ್ನು 40,000 ಜನರ ಪೈಕಿ ಈವರೆಗೂ 300 ಮಂದಿಗೆ ಸ್ಪುಟ್ನಿಕ್‌ ವಿ ಲಸಿಕೆ ನೀಡಿರುವುದಾಗಿ ಆರೋಗ್ಯ ಸಚಿವ ಮಾಹಿತಿ ನೀಡಿದ್ದಾರೆ. ಈಗಾಗಲೇ ಒಂದು ಬಾರಿ ಲಸಿಕೆ ಪಡೆದಿರುವವರಿಗೆ 21 ದಿನಗಳ ಒಳಗಾಗಿ ಮತ್ತೊಂದು ಡೋಸ್ ಸ್ಪುಟ್ನಿಕ್‌ ವಿ ಲಸಿಕೆ ನೀಡಲಾಗುತ್ತದೆ. ಈ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು. ಅಲ್ಲದೇ ಅಡ್ಡಪರಿಣಾಮ ಕಂಡು ಬಂದರು ಅದಷ್ಟು ಗಂಭಿರವಾದುದು ಅಲ್ಲ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ರಷ್ಯಾದ ಸ್ಪುಟ್ನಿಕ್‌ ವಿ ಕೊರೊನಾ ಲಸಿಕೆಯ ಸಂಬಂಧ ಭಾರೀ ವೈದ್ಯಕೀಯ ಪ್ರಯೋಗಗಳು ಬಾಕಿ ಇದೆ. ಆದರೂ ರಷ್ಯಾ ಸರಕಾರ ಇದನ್ನು ಜಗತ್ತಿನ ಮೊದಲ ಕೊರೊನಾ ಲಸಿಕೆ ಎಂದು ಕಳೆದ ತಿಂಗಳು ಘೋಷಿಸಿತ್ತು. ಅಲ್ಲದೆ ಎಲ್ಲಾ ದೇಶಗಳು ಈ ಲಸಿಕೆಯನ್ನು ಮಾನವನಿಗೆ ಬಳಸಬಹುದು ಎಂದು ಘೋಷಿಸಿತ್ತು.

English summary
Russia is expected to register a second potential vaccine against COVID-19 by October 15, reported local media citing Russian consumer safety watchdog Rospotrebnadzor on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X