• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಟ್ಟಿದ್ರೆ ಸುಟ್ಟು ಹೋಗ್ತೀರ ಹುಷಾರ್..! ರಷ್ಯಾ ವಾರ್ನಿಂಗ್ ಹೆಂಗಿತ್ತು ಗೊತ್ತಾ..?

|
Google Oneindia Kannada News

ಅತ್ಯಂತ ಶಕ್ತಿಶಾಲಿ ಮಿಲಿಟರಿ ಹೊಂದಿರುವ ರಾಷ್ಟ್ರಗಳ ಪೈಕಿ ರಷ್ಯಾ ಕೂಡ ಒಂದಾಗಿದೆ. ಆದ್ರೆ ಇಂತಹ ರಾಷ್ಟ್ರಕ್ಕೆ ಕಿರಿಕಿರಿ ಉಂಟು ಮಾಡಿದ್ರೆ ರಷ್ಯಾ ಸುಮ್ಮನೆ ಕೂರುತ್ತಾ ಹೇಳಿ? ನೋ ಚಾನ್ಸ್! ರಷ್ಯಾ ತಿರುಗಿಬಿದ್ದಿದೆ. ಬ್ರಿಟನ್ ತನ್ನ ಜಲಗಡಿ ಪ್ರವೇಶ ಮಾಡಿತ್ತು ಅಂತಾ ಬಾಂಬ್ ಹಾಕಿದ್ದ ರಷ್ಯಾ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದೆ. 'ಕ್ರಿಮಿಯಾ' ಸಮೀಪ ತನ್ನ ಶಸ್ತ್ರಾಸ್ತ್ರ ಪ್ರದರ್ಶಿಸುವ ಮೂಲಕ ಖಡಕ್ ಎಚ್ಚರಿಕೆಯನ್ನೇ ನೀಡಿದೆ.

ಈ ಮೂಲಕ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳಿಗೆ ವಾರ್ನಿಂಗ್ ಕೊಟ್ಟಿದೆ ರಷ್ಯಾ. ಕ್ಷಿಪಣಿ ನಿರೋಧಕ 'ಎಸ್-400'ನ್ನು ಕೂಡ ಪ್ರದರ್ಶನ ಮಾಡಿದೆ. ಈ ಮೂಲಕ 'ನಮ್ಮನ್ನ ಮುಟ್ಟಿದ್ರೆ ಸುಟ್ಟು ಹೋಗ್ತೀರ' ಎಂಬ ಸಂದೇಶ ಕೊಟ್ಟಿದೆ. ರಷ್ಯಾ ಕಪ್ಪು ಸಮುದ್ರದ ಮೇಲೆ ಹಿಡಿತ ಸಾಧಿಸಲು ಸದಾ ಯತ್ನಿಸುತ್ತಿದೆ. ವಿವಾದದ ಕೇಂದ್ರ ಬಿಂದುವಾಗಿರುವ ಕಪ್ಪು ಸಮುದ್ರ ರಂಗೇರಿದೆ. ಕೆಲ ತಿಂಗಳ ಹಿಂದೆ ಉಕ್ರೇನ್ ಜೊತೆ ರಷ್ಯಾ ಕಿರಿಕ್ ಮಾಡಿ, ಗಡಿಯಲ್ಲಿ ಮಿಲಿಟರಿ ನಿಯೋಜಿಸಿತ್ತು. ಆಗ ಯುದ್ಧದ ಭೀತಿ ಉಂಟಾದಾಗ, ಹೀರೋ ರೀತಿ ಪೋಸ್ ಕೊಟ್ಟ ಬ್ರಿಟನ್ ತನ್ನ ಯುದ್ಧ ನೌಕೆಯನ್ನ ವಿವಾದಿತ ಕಪ್ಪು ಸಮುದ್ರಕ್ಕೆ ಕಳುಹಿಸಲು ಮುಂದಾಗಿತ್ತು. ಈ ಮೂಲಕ ತಾನು ಉಕ್ರೇನ್ ಪರ ಎಂದು ತೋರಿಸಿಕೊಳ್ಳಲು ಯತ್ನಿಸಿತ್ತು ಬ್ರಿಟನ್. ಆದರೆ ರಷ್ಯಾ ಬಾಂಬ್ ದಾಳಿ ಮೂಲಕ ಎಚ್ಚರಿಸಿತ್ತು.

ರಷ್ಯಾ ಸುಮ್ಮನೆ ಕೂರುತ್ತಾ..?

ರಷ್ಯಾ ಸುಮ್ಮನೆ ಕೂರುತ್ತಾ..?

ಬ್ರಿಟನ್‌ನ ಪ್ರಚೋದನೆಗೆ ರಷ್ಯಾದ ಪ್ರತಿಕ್ರಿಯೆ ಆಘಾತಕಾರಿಯಾಗೇ ಇರಲಿದೆ ಎಂದು ತಜ್ಞರ ಎಚ್ಚರಿಸಿದ್ದರು. ಏಕೆಂದರೆ ರಷ್ಯಾ ಮಿಲಿಟರಿ ಎದುರು ಬ್ರಿಟನ್ ಮಿಲಿಟರಿ ಅಷ್ಟು ಪ್ರಬಲವೂ ಅಲ್ಲ, ರಷ್ಯಾ ವಿರುದ್ಧ ಗುಡುಗಲು ಸಾಧ್ಯವಿಲ್ಲ. ಆದರೆ ಅಮೆರಿಕ ಬ್ರಿಟನ್ ಬೆನ್ನಿಗೆ ನಿಂತು ಇದನ್ನೆಲ್ಲಾ ಆಡಿಸುತ್ತಿದೆ ಎಂಬ ಆರೋಪವಿತ್ತು. ಆದರೂ ಈ ಮುನ್ನೆಚ್ಚರಿಕೆಗೆ ಕೇರ್ ಮಾಡದೆ ಬ್ರಿಟನ್ ತಪ್ಪು ಮಾಡಿತ್ತು. ಬ್ರಿಟನ್‌ಗೆ ರಷ್ಯಾ ಎಚ್ಚರಿಕೆ ಸಂದೇಶ ನೀಡಿದ ಬಳಿಕ ನ್ಯಾಟೋ ಪಡೆಗಳು ವಿವಾದಿತ ಜಾಗದಲ್ಲಿ ಮಿಲಿಟರಿ ಕವಾಯತು ನಡೆಸಲು ಮುಂದಾದವು. ಇದರಿಂದ ಮತ್ತಷ್ಟು ಕೆರಳಿರುವ ರಷ್ಯಾ ಸೇನೆ, ತನ್ನಲ್ಲಿರುವ ಅಷ್ಟೂ ವಿನಾಶಕಾರಿ ಅಸ್ತ್ರಗಳನ್ನು ಹೊರಗೆ ತೆಗೆದಿದೆ.

ಬ್ರಿಟನ್ ಏನ್ ಹೇಳಿತ್ತು..?

ಬ್ರಿಟನ್ ಏನ್ ಹೇಳಿತ್ತು..?

ಕಪ್ಪು ಸಮುದ್ರದ ಮೇಲೆ ಹಲವು ರಾಷ್ಟ್ರಗಳ ಒಡೆತನವಿದೆ. ಇದರಲ್ಲಿ ಪ್ರಮುಖವಾಗಿ ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಕಿರಿಕ್ ಆಗುತ್ತಿರುತ್ತದೆ. ಹೀಗಾಗಿಯೇ ರಷ್ಯಾಗೆ ಠಕ್ಕರ್ ಕೊಡಲು ಸಿದ್ಧವಾಗಿದ್ದ ಅಮೆರಿಕ ಹಾಗೂ ಅದರ ಮಿತ್ರಪಡೆಗಳು ಹೊಸ ದಾಳ ಉರುಳಿಸಿದ್ದವು. ಇದರ ಮೊದಲ ಭಾಗವಾಗಿ ಬ್ರಿಟನ್ ನೌಕೆ ಕಳುಹಿಸಲು ಸಿದ್ಧತೆ ನಡೆಸಿತ್ತು. ಹೇಗೋ ಮಾಡಿ ವಿವಾದಿತ ಜಲ ಗಡಿಯಲ್ಲಿ ಬ್ರಿಟನ್ ನೌಕೆ ನುಗ್ಗಿಸಿದ್ರೂ ಅಲ್ಲಿ ದೊಡ್ಡ ಗಂಡಾಂತರ ಎದುರಾಗಿತ್ತು. ಹೇಗೋ ಸಮಸ್ಯೆ ತಣ್ಣಗಾಯಿತು ಎನ್ನುವಷ್ಟರಲ್ಲಿ ಮತ್ತೊಂದು ಕಿಡಿ ಹೊತ್ತುಕೊಂಡಿದೆ.

ಸೈನಿಕರ ಜೊತೆ ಟ್ಯಾಂಕರ್..!

ಸೈನಿಕರ ಜೊತೆ ಟ್ಯಾಂಕರ್..!

ಇಷ್ಟೆಕ್ಕೆಲ್ಲಾ ಕಾರಣವಾಗಿದ್ದು ರಷ್ಯಾ ಆಕ್ರಮಣಕಾರಿ ನೀತಿ ಎಂಬ ಆರೋಪವೂ ಕೇಳಿಬರುತ್ತಿದೆ. ಏಕೆಂದರೆ ಕೆಲ ತಿಂಗಳ ಹಿಂದೆ ಅಪಾರ ಪ್ರಮಾಣದ ಸೇನೆಯನ್ನ ಉಕ್ರೇನ್ ಗಡಿಯಲ್ಲಿ ನಿಯೋಜಿಸಿತ್ತು ರಷ್ಯಾ, ಜೊತೆಯಲ್ಲೇ ಟ್ಯಾಂಕರ್‌ಗಳನ್ನೂ ಗಡಿಗೆ ಕೊಂಡೊಯ್ದಿತ್ತು. ಇದು ಸಹಜವಾಗಿ ಆತಂಕ ಹೆಚ್ಚಿಸಿತ್ತಲ್ಲದೆ ಉಕ್ರೇನ್‌ಗೆ ಎದೆಯಲ್ಲಿ ಢವಢವ ಶುರುವಾಗಿತ್ತು. ಗಡಿಯಲ್ಲಿ ರಷ್ಯಾ ನಡೆ ಭಯ ಹುಟ್ಟಿಸುತ್ತಿತ್ತು. ಇದು ಯುರೋಪ್ ಮತ್ತು ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳ ನಿದ್ದೆ ಹಾರಿಹೋಗುವಂತೆ ಮಾಡಿತ್ತು. ಇದೀಗ ದೊಡ್ಡ ಹೈಡ್ರಾಮಾ ನಡೆಯುತ್ತಿದೆ.

ಅಮೆರಿಕದ ಸ್ನೇಹ ಮುಳುವಾಯ್ತಾ..?

ಅಮೆರಿಕದ ಸ್ನೇಹ ಮುಳುವಾಯ್ತಾ..?

ಉಕ್ರೇನ್-ಅಮೆರಿಕ ಮಿತ್ರರು. ಆದ್ರೆ ಇದು ಸಹಜವಾಗಿ ರಷ್ಯಾ ಕಣ್ಣು ಕೆಂಪಗಾಗುವಂತೆ ಮಾಡಿದೆ. ಇತ್ತೀಚೆಗೆ ಅಮೆರಿಕದ ವೆಪನ್‌ಗಳನ್ನ ಉಕ್ರೇನ್ ಖರೀದಿ ಮಾಡಿತ್ತು, ರಷ್ಯಾ ಈ ಒಪ್ಪಂದವನ್ನ ತೀವ್ರವಾಗಿ ವಿರೋಧಿಸಿತ್ತು. ಘಟನೆ ನಡೆದು ಕೆಲವೇ ದಿನಗಳಲ್ಲಿ ರಷ್ಯಾ ತನ್ನ ಅಪಾರ ಪ್ರಮಾಣದ ಸೇನೆ ಹಾಗೂ ಯುದ್ಧ ಟ್ಯಾಂಕರ್‌ಗಳನ್ನು ಉಕ್ರೇನ್ ಗಡಿಗೆ ತಂದು ಬಿಟ್ಟಿತ್ತು. ಇದು ಯುದ್ಧ ನಡೆಯುವ ಲಕ್ಷಣ ಎಂದು ತಜ್ಞರ ಎಚ್ಚರಿಸಿದ್ದರು. ನಂತರ ಉಕ್ರೇನ್‌ಗೆ ಸಹಾಯ ಮಾಡುವ ನೆಪದಲ್ಲಿ ಅನೇಕ ರಾಷ್ಟ್ರಗಳು ತಮ್ಮ ತಮ್ಮ ಶಸ್ತ್ರಾಗಳನ್ನ ಝಳಪಿಸುತ್ತಿವೆ.

English summary
Russia tests S-400 missiles and other weapons to warn NATO and Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X