ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಸಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ ಉಡಾವಣೆ ಯಶಸ್ವಿ

|
Google Oneindia Kannada News

ಮಾಸ್ಕೋ, ನವೆಂಬರ್ 30: ಸಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿಯಾಗಿ ಉಡಾವಣೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಷ್ಯಾದ ಯುದ್ಧನೌಕೆ ಅಡ್ಮಿರಲ್ ಗೋರ್ಶ್ಕೋವ್ ವೈಟ್​​ ಸಮುದ್ರದಿಂದ ಸಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

S-400 ಖರೀದಿ ವಿಚಾರ: ಭಾರತಕ್ಕೆ ಇನ್ನೂ ಕಾಟ್ಸಾ ಕಾಯ್ದೆಯಿಂದ ರಿಯಾಯಿತಿ ನೀಡಿಲ್ಲ ಎಂದ ಅಮೆರಿಕS-400 ಖರೀದಿ ವಿಚಾರ: ಭಾರತಕ್ಕೆ ಇನ್ನೂ ಕಾಟ್ಸಾ ಕಾಯ್ದೆಯಿಂದ ರಿಯಾಯಿತಿ ನೀಡಿಲ್ಲ ಎಂದ ಅಮೆರಿಕ

ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​, ಕ್ಷಿಪಣಿಯ ಪರೀಕ್ಷೆಯು ಮುಕ್ತಾಯ ಹಂತದಲ್ಲಿದೆ, 2022 ರಲ್ಲಿ ನೌಕಾಪಡೆಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

Russia Successfully Test-Fires Tsirkon Hypersonic Missile

ಕ್ಷಿಪಣಿಯು 400 ಕಿ.ಮೀ ದೂರದಲ್ಲಿರುವ ಗುರಿಯನ್ನು ಯಶಸ್ವಿಯಾಗಿ ಛೇದಿಸಿದೆ ಎಂದು ಮಾಹಿತಿ ನೀಡಿದೆ. ಅಡ್ಮಿರಲ್ ಗೋರ್ಶ್ಕೋವ್ ಹಲವಾರು ಬಾರಿ ಯುದ್ಧನೌಕೆ ಮತ್ತು ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಯಿಂದ ಹಾರಿಸುವ ಮೂಲಕ ಪ್ರಯೋಗಕ್ಕೆ ಒಳಪಡಿಸಲಾಗಿತ್ತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಭೂಮಿಯಿಂದ ಆಗಸಕ್ಕೆ ಚಿಮ್ಮುವ ಎಸ್-400 ಕ್ಷಿಪಣಿ ವ್ಯವಸ್ಥೆಗಳ ವಿತರಣೆ ಈಗಾಗಲೇ ಪ್ರಾರಂಭವಾಗಿದೆ. ಇದು ಸುಧಾರಿತ, ದೂರಗಾಮಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. 'ವಿತರಣೆಗಳು ಯೋಜಿಸಿದಂತೆ ನಡೆಯುತ್ತಿವೆ. ಭಾರತಕ್ಕೆ S-400 ವಾಯು ರಕ್ಷಣಾ ವ್ಯವಸ್ಥೆಯ ಸರಬರಾಜು ಪ್ರಾರಂಭವಾಗಿದೆ ಮತ್ತು ನಿಗದಿತ ಸಮಯಕ್ಕೆ ಈ ಘಟಕಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು' ಎಂದು ರಷ್ಯಾ ಸರ್ಕಾರದ ಮಿಲಿಟರಿ-ತಾಂತ್ರಿಕ ಸೇವೆಯ ನಿರ್ದೇಶಕ ಡಿಮಿಟ್ರಿ ಶುಗೇವ್ ಹೇಳಿದ್ದಾರೆ.

ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತವು 2019ರಲ್ಲಿ ರಷ್ಯಾಕ್ಕೆ ಮೊದಲ ಹಂತವಾಗಿ ಸುಮಾರು 80 ಕೋಟಿ ಡಾಲರ್ ಪಾವತಿಸಿದೆ. ಟ್ರಯಂಫ್ಸ್ ಎಸ್-400ರ ಮೊದಲ ತುಕಡಿ ನಿರ್ವಹಿಸಲು ರಷ್ಯಾ ಈಗಾಗಲೇ ಭಾರತೀಯ ಸಿಬ್ಬಂದಿಯ ಗುಂಪಿಗೆ ತರಬೇತಿ ನೀಡಿದೆ. 2022ರ ಜನವರಿಯ ಆರಂಭದಲ್ಲಿ ರಷ್ಯಾದ ತಜ್ಞರು ಭಾರತಕ್ಕೆ ಭೇಟಿ ನೀಡಲಿದ್ದು, ಶಸ್ತ್ರಾಸ್ತ್ರಗಳು ನೆಲೆಗೊಂಡಿರುವ ಸ್ಥಳಗಳಲ್ಲಿ ಅವುಗಳ ಸ್ಥಾಪನೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. 2022ರ ಅಂತ್ಯದ ವೇಳೆಗೆ ಕ್ಷಿಪಣಿ ವ್ಯವಸ್ಥೆಗಳ ಸಾಗಣೆ ಪೂರ್ಣಗೊಳ್ಳಲಿದೆ ಎಂದು ರಷ್ಯಾದ ಸರ್ಕಾರಿ ಮಿಲಿಟರಿ ಸಂಸ್ಥೆ ರೊಸೊಬೊರೊನೆಕ್ಸ್‌ಪೋರ್ಟ್‌ನ ಮುಖ್ಯಸ್ಥ ಅಲೆಕ್ಸಾಂಡರ್ ಮಿಖೇವ್ ಹೇಳಿದ್ದಾರೆ.

ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ವ್ಯವಸ್ಥೆ ಖರೀದಿಸಿದ್ದಕ್ಕಾಗಿ CAATSA ಅಡಿಯಲ್ಲಿ ಅಮೆರಿಕವು ಈಗಾಗಲೇ ಟರ್ಕಿಯ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಅಂತಹ ಭೀತಿಯ ಕಾರ್ಮೋಡ ಭಾರತದ ಮೇಲೂ ಬೃಹತ್ತಾಗಿ ಆವರಿಸಿದೆ. ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ವೆಂಡಿ ಶೆರ್ಮನ್, ಯಾವುದೇ ದೇಶವು S-400 ಕ್ಷಿಪಣಿಗಳನ್ನು ಬಳಸಲು ನಿರ್ಧರಿಸುವುದು ಅಪಾಯಕಾರಿ.

ಅದು ಯಾರ ಸುರಕ್ಷತೆಯ ಹಿತಾಸಕ್ತಿಯನ್ನೂ ಹೊಂದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಅಮೆರಿಕ ಆಡಳಿತದ ಚಿಂತನೆಯನ್ನು ಅರ್ಥೈಸಲಾಗುತ್ತಿದೆ. ಶಸ್ತ್ರಾಸ್ತ್ರ ಖರೀದಿ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಮೂಡಿರುವ ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ಪರಿಹರಿಸಿಕೊಳ್ಳಬಹುದಾಗಿದೆ ಎಂದು ವೆಂಡಿ ಶೆರ್ಮನ್ ಸಲಹೆ ಮಾಡಿದ್ದರು.

ಒಪ್ಪಂದದೊಂದಿಗೆ ಮುಂದುವರಿಯುವುದು ಅಮೆರಿಕದ ನಿರ್ಬಂಧಗಳನ್ನು ಆಹ್ವಾನಿಸಬಹುದು ಎಂದು ಅಮೆರಿಕ ಭಾರತಕ್ಕೆ ಎಚ್ಚರಿಸಿತ್ತು. ಅಕ್ಟೋಬರ್ 2018ರಲ್ಲಿ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು ಭಾರತವು ರಷ್ಯಾದೊಂದಿಗೆ 5 ಶತಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು. ಅಮೆರಿಕ ಎಚ್ಚರಿಕೆಯನ್ನು ನಿರ್ಲಕ್ಷಸಿರುವುದರ ಪರಿಣಾಮ ಏನಾಗಬಹುದು ಎಂಬ ಬಗ್ಗೆ ಇನ್ನೂ ಅಸ್ಪಷ್ಟತೆ ಮಂದುವರಿದಿದೆ. ತನ್ನ ವಿರೋಧಿಗಳನ್ನು ಮಟ್ಟಹಾಕಲು ಅಮೆರಿಕ ಸಾಮಾನ್ಯವಾಗಿ ಬಳಸುವ ಕಾಟ್ಸಾ

S-400 ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಅಮೆರಿಕ ತನ್ನ ವಿರೋಧಿಗಳನ್ನು ಹಣಿಯಲೆಂದೇ ನಿರ್ಬಂಧಗಳನ್ನು ವಿಧಿಸಲು ಅವಕಾಶ ಮಾಡಿಕೊಡುವ ಕಾಟ್ಸಾ ಮೂಲಕ (Countering America's Adversaries Through Sanctions Act - CAATSA) ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆಯೇ ಎಂದು ಹಾಲಿ ಅಧ್ಯಕ್ಷ ಜೋ ಬಿಡೆನ್ ಇನ್ನೂ ಸ್ಪಷ್ಟಪಡಿಸಿಲ್ಲ. 2017ರಲ್ಲಿ ಜಾರಿಗೆ ತರಲಾದ CAATSA, ರಷ್ಯಾದ ರಕ್ಷಣಾ ಮತ್ತು ಗುಪ್ತಚರ ಕ್ಷೇತ್ರಗಳೊಂದಿಗೆ ವಹಿವಾಟುಗಳಲ್ಲಿ ತೊಡಗಿರುವ ಯಾವುದೇ ದೇಶದ ವಿರುದ್ಧ ದಂಡನಾತ್ಮಕ ಕ್ರಮಗಳಿಗೆ ಅವಕಾಶ ಒದಗಿಸುತ್ತದೆ.

Recommended Video

KL Rahul ಹಾಗು Rashid Khanಗೆ ಎದುರಾಯಿತು ಭಾರೀ ಕಂಟಕ | Oneindia Kannada

English summary
Russian frigate Admiral Gorshkov has successfully test-launched a Tsirkon hypersonic cruise missile from the White Sea, Russia's Defense Ministry said Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X