ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಕ್ರಿಮಿಯಾ ಶಾಲೆಯಲ್ಲಿ ಭಯೋತ್ಪಾದಕರ ದಾಳಿ, 18 ಮಂದಿ ಸಾವು

|
Google Oneindia Kannada News

ರಷ್ಯಾದ ಕ್ರಿಮಿಯನ್ ಟ್ರೇಡ್ ಶಾಲೆಯಲ್ಲಿ ಬುಧವಾರ ಭಯೋತ್ಪಾದನಾ ದಾಳಿಯಲ್ಲಿ ಸ್ಫೋಟ ನಡೆದು, ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. ಶಂಕಿತ ದಾಳಿಕೋರ ಇಲ್ಲಿಯ ಸ್ಥಳೀಯ ನಿವಾಸಿ, ಶಾಲೆಯ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದ. ಆತ ಕೂಡ ಸಾವನ್ನಪ್ಪಿದ್ದಾರೆ ಎಂದು ಕ್ರಿಮಿಯಾದ ಗವರ್ನರ್ ಸ್ಥಳೀಯ ಟಿವಿಗೆ ತಿಳಿಸಿದ್ದಾರೆ.

ಇದನ್ನು ಭಯೋತ್ಪಾದನಾ ದಾಳಿ ಎಂದು ಪರಿಗಣಿಸಿಯೇ ತನಿಖೆ ಆರಂಭಿಸಿದ್ದೇವೆ ಎಂದು ತನಿಖಾ ಸಮಿತಿ ತಿಳಿಸಿದೆ. ಸ್ಫೋಟಕ್ಕೆ ಅತ್ಯಾಧುನಿಕ ಸ್ಫೋಟಕ ಬಳಸಲಾಗಿದೆ. ಕೆರ್ಚ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಫೋಟ ಸಂಭವಿಸಿದ್ದು, ಐವತ್ತು ಮಂದಿ ಗಾಯಗೊಂಡಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಫೆಡರಲ್ ಸೆಕ್ಯೂರಿಟಿ ಸರ್ವೀಸ್ ತನಿಖೆಗೆ ಆದೇಶ ಮಾಡಿದ್ದಾರೆ.

ಕಾಶ್ಮೀರ: ಎನ್ ಕೌಂಟರ್ ದಾಳಿಯಲ್ಲಿ ಮೂವರು ಉಗ್ರರ ಹತ್ಯೆಕಾಶ್ಮೀರ: ಎನ್ ಕೌಂಟರ್ ದಾಳಿಯಲ್ಲಿ ಮೂವರು ಉಗ್ರರ ಹತ್ಯೆ

ಇತ್ತೀಚಿನ ವರ್ಷಗಳಲ್ಲಿ ರಷ್ಯಾದಲ್ಲಿ ಭೀಕರ ಭಯೋತ್ಪಾದನಾ ದಾಳಿಗಳಾಗಿವೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದಲೂ ದಾಳಿಗಳಾಗಿವೆ. ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರರು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆಸಿದ ಭಯೋತ್ಪಾದನಾ ದಾಳಿಯಲ್ಲಿ ಹದಿನಾಲ್ಕು ಮಂದಿ ಮೃತಪಟ್ಟಿದ್ದರು.

Russia says Crimea school blast that killed 18 was terrorism

ಕ್ರಿಮಿಯಾ ಮೂಲದ ಉಗ್ರಗಾಮಿಗಳ ಪಟ್ಟಿಯೊಂದನ್ನು ರಷ್ಯಾ ಸಿದ್ಧಪಡಿಸಿದ್ದರೆ, ಆ ಪೈಕಿ ಹಲವು ಹೆಸರುಗಳನ್ನು ರಾಜಕೀಯ ಪ್ರೇರಿತವಾಗಿ ಸೇರ್ಪಡೆ ಮಾಡಿರುವುದು ಎಂದು ಮಾನವಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.

English summary
An explosion that killed at least 18 at a Crimean trade school Wednesday was terrorism, Russia officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X