ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಮೊದಲ ಕೊರೊನಾ ಲಸಿಕೆಗೆ 20 ದೇಶಗಳಿಂದ ಬೇಡಿಕೆ: ರಷ್ಯಾ

|
Google Oneindia Kannada News

ಮಾಸ್ಕೋ, ಆಗಸ್ಟ್ 11: ವಿಶ್ವದ ಮೊದಲ ಕೊರೊನಾ ಲಸಿಕೆ ಸ್ಪುಟ್ನಿಕ್ ವಿಗೆ ಈಗಾಗಲೇ 20ಕ್ಕೂ ಹೆಚ್ಚು ರಾಷ್ಟ್ರಗಳಿಂದ ಬಿಲಿಯನ್‌ಗೂ ಹೆಚ್ಚು ಕೊರೊನಾ ಲಸಿಕೆಗೆ ಬೇಡಿಕೆ ಬಂದಿದೆ ಎಂದು ರಷ್ಯಾ ತಿಳಿಸಿದೆ.

ಅದರ ಮೂರನೇ ಹಂತದ ಪ್ರಯೋಗವು ಬುಧವಾರದಿಂದ ಆರಂಭವಾಗಲಿದೆ. ಮಾರುಕಟ್ಟೆಗೆ ಸೆಪ್ಟೆಂಬರ್‌ನಿಂದ ಲಭ್ಯವಾಗಲಿದೆ ಎಂದು ಲಸಿಕೆ ಡೈರೆಕ್ಟ್ ಇನ್‌ವೆಸ್ಟ್‌ಮೆಂಟ್ ಮುಖ್ಯಸ್ಥ ಕಿರಿಲ್ ತಿಳಿಸಿದ್ದಾರೆ.

ವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟುವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟು

ಗಮಲೆಯಾ ಇನ್‌ಸ್ಟಿಟ್ಯೂಟ್ ಈ ಲಸಿಕೆಯನ್ನು ತಯಾರಿಸಿದೆ. ಇದೀಗ ಬಿಲಿಯನ್ ಡೋಸ್‌ಗಳಿಗೆ ಬೇಡಿಕೆ ಬಂದಿದೆ. ಸ್ವಲ್ಪ ತಿಂಗಳಲ್ಲಿ 20ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತಾಗಲಿದೆ. ಐದು ದೇಶಗಳಲ್ಲಿ ಒಂದು ವರ್ಷದಲ್ಲಿ 500 ಮಿಲಿಯನ್ ಲಸಿಕೆಗಳನ್ನು ತಯಾರಿಸಲಾಗುತ್ತದೆ.

Russia Says 20 Countries Have Pre-Ordered A Billion Doses Of COVID-19 Vaccine

ಇಂದು ರಷ್ಯಾದಲ್ಲಿ ನೋಂದಣಿ ಮಾಡಲಾಗಿದ್ದು, ಆಗಸ್ಟ್ 12 ರಂದು ಅಂದರೆ ಬುಧವಾರ ಲಸಿಕೆ ಬಿಡುಗಡೆಯಾಗಲಿದೆ. ವಿಶ್ವದ ಮೊದಲ ಸ್ಯಾಟಲೈಟ್ ಹೆಸರೂ ಕೂಡ ಸ್ಪುಟ್ನಿಕ್ ಆಗಿದ್ದು, ವಿಶ್ವದಲ್ಲೇ ಮೊದಲ ಕೊರೊನಾ ಲಸಿಕೆ ಇದಾಗಿರುವುದರಿಂದ ಇದೇ ಹೆಸರನ್ನು ಇಡಲಾಗಿದೆ.

ಈ ಲಸಿಕೆಯನ್ನು ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ 38 ಜನರಲ್ಲಿಯೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದನ್ನು ಗಮನಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಲಯ ಹೇಳಿದೆ.

ಮೊದಲು ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳ ಮೇಲೆ ಪ್ರಯೋಗಿಸಲಾಗುತ್ತದ. ಬಳಿಕ ವೈದ್ಯರು ಹಾಗೂ ಶಿಕ್ಷಕರಿಗೆ ನೀಡಲಾಗುತ್ತದೆ. ಅಷ್ಟೇ ಅಲ್ಲದ ರಷ್ಯಾದ ಜನತೆಗೆ ಉಚಿತವಾಗಿ ಲಸಿಕೆಯನ್ನು ನೀಡಲಾಗುತ್ತದೆ.ಮೂಲಗಳ ಪ್ರಕಾರ ಮಾಸ್ಕೊದ ಗಮೆಲಿಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯದ ಜಂಟಿಯಾಗಿ ಲಸಿಕೆ ಅಭಿವೃದ್ಧಿ ಪಡಿಸಿದೆ.

English summary
Moscow has dubbed its new coronavirus vaccine "Sputnik V" after the Soviet satellite, the head of the country's sovereign wealth fund said Tuesday, after Russia declared itself the first country to develop a vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X