ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪುಟ್ನಿಕ್ V ಕೊರೊನಾ ಲಸಿಕೆ: 7ರಲ್ಲಿ ಒಬ್ಬರ ಮೇಲೆ ಅಡ್ಡ ಪರಿಣಾಮ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 18: ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆಯು 7ರಲ್ಲಿ ಒಬ್ಬ ವ್ಯಕ್ತಿಯ ಮೇಲೆ ಅಡ್ಡಪರಿಣಾಮ ಬೀರುತ್ತಿದೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಪ್ರಾಯೋಗಿಕ ಲಸಿಕೆ 'ಸ್ಪುಟ್ನಿಕ್‌ V' ಪ್ರಯೋಗಕ್ಕೆ ಒಳಗಾಗಿರುವ ಸ್ವಯಂ ಸೇವಕರಲ್ಲಿ ಏಳು ಜನರ ಪೈಕಿ ಒಬ್ಬರಿಗೆ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿರುವುದಾಗಿ ರಷ್ಯಾದ ಆರೋಗ್ಯ ಸಚಿವ ಹೇಳಿದ್ದಾರೆ.

ಲ್ಯಾನ್‌ಸೆಟ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿರುವ ಟ್ರಯಲ್‌ 1 ಮತ್ತು 2ರ ಮಾಹಿತಿಯ ಪ್ರಕಾರ, ಸ್ಪುಟ್ನಿಕ್‌ ವಿ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ ಹಾಗೂ ಪ್ರಯೋಗಕ್ಕೆ ಒಳಗಾದ 76 ಜನರಲ್ಲಿ ಅಗತ್ಯವಿರುವ ರೋಗ ನಿರೋಧಕ ಪ್ರಕ್ರಿಯೆ ಕಂಡು ಬಂದಿದೆ.

ಭಾರತಕ್ಕೆ ರಷ್ಯಾದಿಂದ 100 ಮಿಲಿಯನ್ ಸ್ಪುಟ್ನಿಕ್ V ಕೊರೊನಾ ಲಸಿಕೆ ಮಾರಾಟಭಾರತಕ್ಕೆ ರಷ್ಯಾದಿಂದ 100 ಮಿಲಿಯನ್ ಸ್ಪುಟ್ನಿಕ್ V ಕೊರೊನಾ ಲಸಿಕೆ ಮಾರಾಟ

ಆದರೆ, ಕೆಲವು ವಿಜ್ಞಾನಿಗಳು ಅದಕ್ಕೆ ತಕರಾರು ತೆಗೆದಿದ್ದು, ಮಾಹಿತಿಯ ಪರಿಶೀಲನೆ ನಡೆಸಲು ಹೇಳಿದ್ದಾರೆ.ಡಿಸಿಜಿಐ ಅನುಮೋದನೆ ನಂತರ 10 ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಡಾ.ರೆಡ್ಡೀಸ್‌ ಲ್ಯಾಬೊರೇಟರಿಗೆ ಪೂರೈಕೆ ಮಾಡುವುದಾಗಿ ರಷ್ಯನ್‌ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ ಹೇಳಿದೆ.

ಭಾರತದಲ್ಲಿ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಹಾಗೂ ಸ್ಪುಟ್ನಿಕ್‌ ವಿ ಲಸಿಕೆ ವಿತರಣೆಗಾಗಿ ರಷ್ಯಾದ ಸಾವೆರಿನ್‌ ವೆಲ್ತ್‌ ಫಂಡ್‌ ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

 300 ಮಂದಿ ಮೇಲೆ ಲಸಿಕೆ ಪ್ರಯೋಗ

300 ಮಂದಿ ಮೇಲೆ ಲಸಿಕೆ ಪ್ರಯೋಗ

ಸ್ಪುಟ್ನಿಕ್ V ಲಸಿಕೆಯನ್ನು 300 ಮಂದಿಯ ಮೇಲೆ ಪ್ರಯೋಗಿಸಿದ್ದಾರೆ, ಒಟ್ಟು 40 ಸಾವಿರ ಸ್ವಯಂ ಸೇವಕರ ಮೇಲೆ ಪ್ರಯೋಗ ಮಾಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಮಿಖೈಲ್‌ ಮುರಷ್ಕೊ ಹೇಳಿದ್ದಾಗಿ ಟಿಎಎಸ್‌ಎಸ್‌ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ.

 ಮಾಂಸಖಂಡಗಳಲ್ಲಿ ನೋವು

ಮಾಂಸಖಂಡಗಳಲ್ಲಿ ನೋವು

ಅಂದಾಜು ಶೇ 14ರಷ್ಟು ಜನರಲ್ಲಿ ಸುಸ್ತು, 24 ಗಂಟೆಗಳ ವರೆಗೂ ಮಾಂಸಖಂಡಗಳಲ್ಲಿ ನೋವು ಹಾಗೂ ಕೆಲವು ಬಾರಿ ದೇಹದ ಉಷ್ಣಾಂಶದಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ ಎಂದು ತಿಳಿಸಿರುವುದಾಗಿ ಮಾಸ್ಕೊ ಟೈಮ್ಸ್‌ ಉಲ್ಲೇಖಿಸಿದೆ.

 21ದಿನಗಳೊಳಗಾಗಿ ಮತ್ತೊಂದು ಡೋಸ್

21ದಿನಗಳೊಳಗಾಗಿ ಮತ್ತೊಂದು ಡೋಸ್

ಈಗಾಗಲೇ ಒಂದು ಬಾರಿ ಲಸಿಕೆ ಪಡೆದಿರುವವರಿಗೆ 21 ದಿನಗಳ ಒಳಗಾಗಿ ಮತ್ತೊಂದು ಡೋಸ್ ಸ್ಪುಟ್ನಿಕ್‌ ವಿ ಲಸಿಕೆ ನೀಡಲಾಗುತ್ತದೆ. ಈ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯಬೇಕಿದೆ. ಆದರೆ, ರಷ್ಯಾ ಸರ್ಕಾರ ಕಳೆದ ತಿಂಗಳೇ ಲಸಿಕೆ ಅನುಮೋದನೆ ನೀಡಿದೆ. ಆ ಮೂಲಕ ಮನುಷ್ಯರ ಬಳಕೆಗಾಗಿ ಅನುಮೋದನೆ ಪಡೆದ ಜಗತ್ತಿನ ಮೊದಲ ಕೊವಿಡ್‌-19 ಲಸಿಕೆಯಾಗಿ ಹೆಸರಾಗಿದೆ.

Recommended Video

RCB ಹಾಡನ್ನು ಕೇಳಿ ಕನ್ನಡಿಗರ ಕಣ್ಣು ಕಂಪಾಯ್ತು | Oneindia Kannada
 ಮಾಸ್ಕೋದಲ್ಲಿ ಅಂತಿಮ ಹಂತದ ಪ್ರಯೋಗ

ಮಾಸ್ಕೋದಲ್ಲಿ ಅಂತಿಮ ಹಂತದ ಪ್ರಯೋಗ

ಸಂಪೂರ್ಣ ಸುರಕ್ಷತೆ ಹಾಗೂ ಸಾಮರ್ಥ್ಯದ ಪರೀಕ್ಷೆಗಳನ್ನು ಪೂರ್ಣಗೊಳಿಸದ ಸ್ಪುಟ್ನಿಕ್‌ ಲಸಿಕೆ ತೆಗೆದುಕೊಳ್ಳದಂತೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಸೆಪ್ಟೆಂಬರ್‌ನಿಂದ ಮಾಸ್ಕೊದಲ್ಲಿ ಲಸಿಕೆಯ ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್‌ ಆರಂಭವಾಗಿದೆ.

English summary
One in seven volunteers complained of side effects after being injected with Sputnik V, Russia’s experimental vaccine against the coronavirus disease (Covid-19), the country’s health minister has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X