ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ನೇ ಮಹಾಯುದ್ಧಕ್ಕೆತಯಾರಿ..? ಶಾಂತಿ ಒಪ್ಪಂದಕ್ಕೆ ಒಪ್ಪಲಿಲ್ವಾ ರಷ್ಯಾ..?

|
Google Oneindia Kannada News

ರಷ್ಯಾ ಹಾಗೂ ಉಕ್ರೇನ್ ಗಡಿಯಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಉದ್ವಿಗತೆ ಪಡೆಯುತ್ತಿದೆ. ಗಡಿಯಲ್ಲಿ ರಷ್ಯಾ ತನ್ನ ಸೇನೆ ಹಾಗೂ ಶಸ್ತ್ರಾಸ್ತ್ರ ನಿಯೋಜಿಸಿದ ಬಳಿಕ ಪರಿಸ್ಥಿತಿ ಗಂಭೀರವಾಗುತ್ತಿದೆ. ಆದರೆ ಹಲವು ಒತ್ತಡಕ್ಕೆ ಮಣಿದು ರಷ್ಯಾ ತನ್ನ ಸೇನೆಯನ್ನು ಹಿಂದಕ್ಕೆ ಪಡೆದಿದೆ. ಆದರೆ ಮತ್ತೊಂದು ಬದಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು ಪರಿಸ್ಥಿತಿ ಗಂಭೀರವಾಗಿದೆ. ಇತ್ತ ಉಕ್ರೇನ್ ನಾಯಕರಿಗೆ ಯುದ್ಧದ ಭೀತಿ ಶುರುವಾಗಿ ರಷ್ಯಾ ಜೊತೆ ಒಪ್ಪಂದಕ್ಕೆ ಬರಲು ಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆಲ್ಲಾ ರಷ್ಯಾ ಒಪ್ಪುತ್ತಿಲ್ಲ.

ಏಕೆಂದರೆ ಅಮೆರಿಕದ ಜೊತೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಮುಂದಾಗಿದ್ದ ಉಕ್ರೇನ್ ರಷ್ಯಾದ ಮಾತನ್ನು ಕೇಳಿರಲಿಲ್ಲ. ಇದರ ಜೊತೆಗೆ ಯುರೋಪ್‌ನ ಕೆಲವು ರಾಷ್ಟ್ರಗಳಿಂದ ಪರೋಕ್ಷವಾಗಿ ರಷ್ಯಾಗೆ ಧಮ್ಕಿ ಹಾಕಿಸಲು ಯತ್ನಿಸಿತ್ತು ಎಂಬ ಆರೋಪವಿದೆ. ಇದೆಲ್ಲಾ ರಷ್ಯಾದ ನಾಯಕರನ್ನ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಕೆಣಕಿದೆ.

ಉಕ್ರೇನ್ -ಅಮೆರಿಕ-ರಷ್ಯಾ ತಿಕ್ಕಾಟ, ಕರ್ನಾಟಕಉಕ್ರೇನ್ -ಅಮೆರಿಕ-ರಷ್ಯಾ ತಿಕ್ಕಾಟ, ಕರ್ನಾಟಕ

ಅದರಲ್ಲೂ ಕಪ್ಪು ಸಮುದ್ರಕ್ಕೆ ಬ್ರಿಟನ್‌ನ ಯುದ್ಧ ನೌಕೆ ಎಂಟ್ರಿ ಕೊಡಲು ಯತ್ನಿಸಿದ್ದು ರಷ್ಯಾ ಕೊತಕೊತ ಕುದಿಯುವಂತೆ ಮಾಡಿದೆ. ಹೀಗಾಗಿ ಉಕ್ರೇನ್‌ಗೆ ಬಿಸಿ ಮುಟ್ಟಿಸಲು ರಷ್ಯಾ ಮುಂದಾಗಿದೆ. ಹೀಗಾಗಿ ಜಗತ್ತಿನಾದ್ಯಂತ 3ನೇ ಮಹಾಯುದ್ಧದ ಕಾರ್ಮೋಡ ಕವಿದಿದೆ.

ರಷ್ಯಾ v/s ಅಮೆರಿಕ ವೆಪನ್ ಕಿರಿಕ್..!

ರಷ್ಯಾ v/s ಅಮೆರಿಕ ವೆಪನ್ ಕಿರಿಕ್..!

ಇಡೀ ಜಗತ್ತಿನಲ್ಲಿ ಸದ್ಯಕ್ಕೆ ಅತಿಹೆಚ್ಚು ಶಸ್ತ್ರಾಸ್ತ್ರ ಅಥವಾ ವೆಪನ್ ಪೂರೈಕೆ ಮಾಡುವ ರಾಷ್ಟ್ರಗಳು ಎಂದರೆ ರಷ್ಯಾ ಹಾಗೂ ಅಮೆರಿಕ ಮಾತ್ರ. ಹೀಗಿರುವಾಗ ಎರಡೂ ರಾಷ್ಟ್ರಗಳ ನಡುವೆ ವೆಪನ್ ಪೂರೈಕೆಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ರಷ್ಯಾ ದೇಶದಿಂದ ಯಾರೇ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಂಡರೂ ಅಮೆರಿಕ ಕಣ್ಣು ಕೆಂಪಾಗುತ್ತದೆ.

ಅಂಥ ದೇಶಗಳ ವಿರುದ್ಧ ನಿರ್ಬಂಧ ವಿಧಿಸಲು ದೊಡ್ಡಣ್ಣ ಸಂಚು ಹೂಡುತ್ತೆ. ಹೀಗಾಗೇ ರಷ್ಯಾ ರೊಚ್ಚಿಗೆದ್ದು, ಅಮೆರಿಕದಿಂದ ವೆಪನ್ ಪಡೆಯುವ ತನ್ನ ಸುತ್ತಮುತ್ತಲ ದೇಶಗಳಿಗೆ ಬಿಸಿ ಮುಟ್ಟಿಸುತ್ತಿದೆ. ಅದರಲ್ಲೂ ಎರಡೂವರೆ ದಶಕಗಳ ಹಿಂದೆ ತನ್ನದೇ ದೇಶದ ಭಾಗವಾಗಿದ್ದ ಉಕ್ರೇನ್ ಅಮೆರಿಕದ ಜೊತೆ ಹೀಗೆ ಬೀಗುತ್ತಿರುವುದು ರಷ್ಯಾಗೆ ಬಿಲ್‌ಕುಲ್ ಇಷ್ಟವಿಲ್ಲ.

ಸೈನಿಕರ ಜೊತೆ ಟ್ಯಾಂಕರ್..!

ಸೈನಿಕರ ಜೊತೆ ಟ್ಯಾಂಕರ್..!

ಅಪಾರ ಪ್ರಮಾಣದ ಸೇನೆಯನ್ನ ಉಕ್ರೇನ್ ಗಡಿಯಲ್ಲಿ ನಿಯೋಜನೆ ಮಾಡಿರುವ ರಷ್ಯಾ, ಇವರ ಜೊತೆಯಲ್ಲಿ ಟ್ಯಾಂಕರ್‌ಗಳನ್ನೂ ಗಡಿಗೆ ಕೊಂಡೊಯ್ದಿದೆ. ಇದು ಸಹಜವಾಗಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ಈ ಬಗ್ಗೆ ಉಕ್ರೇನ್ ಆತಂಕ ಹೊರಹಾಕಿದೆ. ಗಡಿಯಲ್ಲಿ ರಷ್ಯಾ ನಡೆ ಭಯ ಹುಟ್ಟಿಸುತ್ತಿದೆ. ವಿವಾದವಿರುವ ಗಡಿ ಭಾಗದಲ್ಲೇ ಭಾರಿ ಪ್ರಮಾಣದ ಸೇನೆ ನಿಯೋಜನೆ ಮಾಡಿದೆ ಎಂದಿದೆ. ಇದು ಯುರೋಪ್ ಹಾಗೂ ಅಮೆರಿಕ ಮತ್ತಿತರ ರಾಷ್ಟ್ರಗಳ ನಿದ್ದೆ ಹಾರಿಹೋಗುವಂತೆ ಮಾಡಿದೆ. ಏಕೆಂದರೆ ಯುರೋಪ್‌ನಲ್ಲಿ ಯುದ್ಧ ಆರಂಭವಾದರೆ 3ನೇ ಮಹಾಯುದ್ಧ ಆರಂಭ ಆದಂತೆ ಎಂಬುದು ತಜ್ಞರ ಆತಂಕ.

ಅಮೆರಿಕದ ಸ್ನೇಹ ಮುಳುವಾಯ್ತಾ..?

ಅಮೆರಿಕದ ಸ್ನೇಹ ಮುಳುವಾಯ್ತಾ..?

ಉಕ್ರೇನ್ ರಷ್ಯಾದ ಆಪ್ತಮಿತ್ರ. ಆದರೆ ಇದು ಸಹಜವಾಗಿ ರಷ್ಯಾ ಕಣ್ಣು ಕೆಂಪಗಾಗುವಂತೆ ಮಾಡಿದೆ. ಇತ್ತೀಚೆಗೆ ಅಮೆರಿಕದ ವೆಪನ್‌ಗಳನ್ನ ಉಕ್ರೇನ್ ಖರೀದಿ ಮಾಡಿತ್ತು, ರಷ್ಯಾ ಈ ಒಪ್ಪಂದವನ್ನ ತೀವ್ರವಾಗಿ ವಿರೋಧಿಸಿತ್ತು. ಘಟನೆ ನಡೆದು ಕೆಲವೇ ದಿನಗಳಲ್ಲಿ ರಷ್ಯಾ ತನ್ನ ಅಪಾರ ಪ್ರಮಾಣದ ಸೇನೆ ಹಾಗೂ ಯುದ್ಧ ಟ್ಯಾಂಕರ್‌ಗಳನ್ನು ಉಕ್ರೇನ್ ಗಡಿಗೆ ತಂದು ಬಿಟ್ಟಿದೆ. ಇದು ಯುದ್ಧ ನಡೆಯುವ ಪರೋಕ್ಷ ಎಚ್ಚರಿಕೆ ಎಂಬುದು ತಜ್ಞರ ವಿಶ್ಲೇಷಣೆ. ಆದರೆ ರಷ್ಯಾ ಮಾತ್ರ ಹೆದರಬೇಡಿ, ನಾವು ಏನೂ ಮಾಡೋದಿಲ್ಲ ಅಂತಾ ಭರವಸೆ ನೀಡುತ್ತಿದೆ

ರಷ್ಯಾ ನೆನೆದು ನಡುಗಿದೆ ಜರ್ಮನಿ..!

ರಷ್ಯಾ ನೆನೆದು ನಡುಗಿದೆ ಜರ್ಮನಿ..!

ಯುರೋಪ್ ಮೇಲೆ ನಿಯಂತ್ರಣ ಸಾಧಿಸಲು ರಷ್ಯಾ ಕಾದು ಕುಳಿತಿದೆ ಎಂದು ಯುರೋಪ್ ಒಕ್ಕೂಟದ ಕೆಲ ಬಲಾಢ್ಯ ರಾಷ್ಟ್ರಗಳು ಆರೋಪ ಮಾಡುತ್ತಾ ಬಂದಿವೆ. ಹೀಗಾಗಿಯೇ ಅಮೆರಿಕದ ಜೊತೆ ಸಾಧ್ಯವಾದಷ್ಟು ಸ್ನೇಹ ಗಿಟ್ಟಿಸಿಕೊಂಡಿತ್ತು ಯುರೋಪ್. ಆದರೆ ಅದ್ಯಾವಾಗ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೋ ಅಂದಿನಿಂದ ಈ ಸಂಬಂಧ ಹಳಸುತ್ತಾ ಬಂದಿದೆ. ಅಮೆರಿಕ ಮತ್ತು ಯುರೋಪ್ ಸ್ನೇಹ ನಾಶವಾಗುವ ಹಂತಕ್ಕೆ ಬಂದಿದೆ. ಇದೇ ಸಂದರ್ಭವನ್ನ ರಷ್ಯಾ ಬಳಸಿಕೊಂಡು, ಯುದ್ಧ ಸಾರುವ ಆತಂಕ ಜರ್ಮನಿಗೆ ಕಾಡುತ್ತಿದೆ. 2ನೇ ಮಹಾಯುದ್ಧ ನಡೆದಾಗ ಜರ್ಮನಿಯನ್ನ ಧೂಳಿಪಟ ಮಾಡಿತ್ತು ರಷ್ಯಾ. ಎರಡೂ ರಾಷ್ಟ್ರಗಳ ಮಧ್ಯೆ ಆ ದ್ವೇಷ ಇನ್ನೂ ಆರಿಲ್ಲ.

English summary
Russia refused Ukraine's push to revise 2015 peace deal, this step of Russia worried Ukraine leaders
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X