ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ಪುಟಿನ್ ಅಧ್ಯಕ್ಷ ಪಟ್ಟ ಉಳಿಸುವ ಸಾಂವಿಧಾನಿಕ ತಿದ್ದುಪಡಿ!

|
Google Oneindia Kannada News

ಮಾಸ್ಕೋ, ಜೂನ್.27: ಕೊರೊನಾವೈರಸ್ ಮಹಾಸ್ಫೋಟದ ನಡುವೆ ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹದ ಕುರಿತು ಮಹತ್ವದ ಸಾಂವಿಧಾನಿಕ ಬದಲಾವಣೆಗೆ ಒಪ್ಪಿಗೆ ಸಿಕ್ಕುವ ದಿನವು ಸನ್ನಿಹಿತವಾಗಿದೆ.

Recommended Video

Community spreading started in India ? The stats are scary | Oneindia Kannada

ವಿಶ್ವದಲ್ಲೇ ಪ್ರಖ್ಯಾತಿ ಗಳಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕಾರವಧಿ 2024ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಆದರೆ ಜನಮೆಚ್ಚುಗೆ ಗಳಿಸಿರುವ ವ್ಲಾಡಿಮಿರ್ ಪುಟಿನ್ ಅವರಿಗೆ ಮುಂದಿನ ಎರಡು ಅವಧಿಗೆ ಅಧ್ಯಕ್ಷೀಯ ಪಟ್ಟವನ್ನು ಕಟ್ಟುವ ಮಹತ್ವ ಸಾಂವಿಧಾನಿಕ ತಿದ್ದುಪಡಿ ಮಸೂದೆ ಈಗಾಗಲೇ ಅಂಗೀಕಾರಗೊಂಡಿದೆ.

ದೇಶದ 1993ರ ಸಂವಿಧಾನದ ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲಿ ಮಾಡಿರುವ ಬದಲಾವಣೆಗಳನ್ನು ಜನವರಿಯಲ್ಲಿ ಬಹಿರಂಗಪಡಿಸಲಾಯಿತು. ಕಳೆದ ಮಾರ್ಚ್‌ ತಿಂಗಳಿನಲ್ಲಿ ರಷ್ಯಾದ ಸಂಸತ್ತು ಸ್ಟೇಟ್ ಡುಮಾ ಸಂವಿಧಾನಿಕ ತಿದ್ದುಪಡಿಗೆ ಅಸ್ತು ಎಂದಿತು. ಇದೀಗ ಎಲ್ಲವೂ ಅಂದುಕೊಂಡಂತೆ ನಡೆದರೆ 67 ವರ್ಷದ ವ್ಲಾಡಿಮಿರ್ ಪುಟಿನ್ ಮುಂದಿನ 12 ವರ್ಷಗಳವರೆಗೂ ಅಂದರೆ 2036ರವರೆಗೂ ರಷ್ಯಾದ ಅಧ್ಯಕ್ಷರಾಗಿ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

ರಷ್ಯಾದಲ್ಲಿ ತೈಲ ಸೋರಿಕೆ: ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರಷ್ಯಾದಲ್ಲಿ ತೈಲ ಸೋರಿಕೆ: ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಇದೀಗ ಜುಲೈ.1ರಂದು ರಷ್ಯಾದಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆ ಹೇಗಿರುತ್ತದೆ. ವ್ಲಾಡಿಮಿರ್ ಪುಟಿನ್ ಅವರ ಪರ ಜನಾಭಿಪ್ರಾಯ ಸಂಗ್ರಹದ ಪ್ರಕ್ರಿಯೆ ನಡೆಯುವುದು ಹೇಗೆ. ರಷ್ಯಾ ಸಂವಿಧಾನದ ತಿದ್ದುಪಡಿಯಲ್ಲಿ ಮಾಡಿಕೊಂಡಿರುವ ತಿದ್ದುಪಡಿ ಅಂಶಗಳೇನು. ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವಂತಾ ವಿಶೇಷ ವರದಿ 'ಒನ್ ಇಂಡಿಯಾ' ಓದುಗರಿಗಾಗಿ.

ಏಪ್ರಿಲ್ ನಲ್ಲೇ ಮುಂದೂಡಿಕೆಯಾಗಿದ್ದ ಪ್ರಕ್ರಿಯೆ

ಏಪ್ರಿಲ್ ನಲ್ಲೇ ಮುಂದೂಡಿಕೆಯಾಗಿದ್ದ ಪ್ರಕ್ರಿಯೆ

ಕಳೆದ ಏಪ್ರಿಲ್.22ರಂದು ರಷ್ಯಾದಲ್ಲಿ ಸಾಂವಿಧಾನಿಕ ಜನಾಭಿಪ್ರಾಯ ಸಂಗ್ರಹಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಕುರಿತು ಸಂಸತ್ ನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ ಕೊರೊನಾವೈರಸ್ ಅಟ್ಟಹಾಸವು ಆರಂಭಿಕ ಹಂತದಲ್ಲಿ ಉಗ್ರ ಸ್ವರೂಪದಲ್ಲಿ ದೇಶವನ್ನು ವ್ಯಾಪಿಸುತ್ತಿತ್ತು. ಇದರ ಬೆನ್ನಲ್ಲೇ ಎರಡನೇ ಮಹಾಯುದ್ಧದ ವಿಜಯೋತ್ಸವದ ಸಂಕೇತವಾಗಿ 75ನೇ ವರ್ಷದ ದಿನಾಚರಣೆ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಈ ಹಿನ್ನೆಲೆ ಸಾಂವಿಧಾನಿಕ ಜನಾಭಿಪ್ರಾಯ ಸಂಗ್ರಹ ಪ್ರಸ್ತಾವನೆ ಕುರಿತು ಜುಲೈ.1ರಂದು ತೀರ್ಮಾನಿಸುವುದಾಗಿ ಮುಂದೂಡಿಕೆ ಮಾಡಲಾಗಿತ್ತು.

ದೇಶದ ಸಂವಿಧಾನಕ್ಕೆ ಬದಲಾವಣೆ ಕುರಿತು ಪುಟಿನ್ ಪ್ರಸ್ತಾಪ

ದೇಶದ ಸಂವಿಧಾನಕ್ಕೆ ಬದಲಾವಣೆ ಕುರಿತು ಪುಟಿನ್ ಪ್ರಸ್ತಾಪ

ಕಳೆದ ಜನವರಿ ತಿಂಗಳಿನಲ್ಲಿ ರಷ್ಯಾದ ಫೆಡರಲ್ ಅಸೆಂಬ್ಲಿಯ ಭಾಷಣದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ಸಂವಿಧಾನಕ್ಕೆ ಸಾಕಷ್ಟು ತಿದ್ದುಪಡಿಗಳನ್ನು ತರುವುದಾಗಿ ಪ್ರಸ್ತಾಪಿಸಿದ್ದರು. ಅಲ್ಲದೇ. ಅದಕ್ಕಾಗಿ ರಾಷ್ಟ್ರವ್ಯಾಪಿ ಸಾಂವಿಧಾನಿಕ ಜನಾಭಿಪ್ರಾಯ ಸಂಗ್ರಹವನ್ನು ನಡೆಸುವಂತೆ ಸೂಚಿಸಿದ್ದರು. ಜನವರಿಯಲ್ಲಿ ರಷ್ಯಾದ ಫೆಡರಲ್ ಅಸೆಂಬ್ಲಿಯ ಕೆಳಮನೆಯ ಸ್ಟೇಟ್ ಡುಮಾಕ್ಕೆ ಸಲ್ಲಿಸಿದ ಪುಟಿನ್ ಪ್ರಸ್ತಾವಿತ ಮಸೂದೆಗೆ ಮಾರ್ಚ್ ನಲ್ಲಿ ಅಂಗೀಕಾರ ದೊರೆಯಿತು. ಇದಾಗಿ ಕೆಳ ದಿನಗಳಲ್ಲೇ ರಷ್ಯಾದ ಸಾಂವಿಧಾನಿಕ ನ್ಯಾಯಾಲಯವು ಪ್ರಸ್ತಾವಿತ ಮಸೂದೆಗೆ ಅನುಮೋದನೆ ನೀಡಿತು.

ರಷ್ಯಾದಲ್ಲಿ ಕೊರೊನಾ ಅಟ್ಟಹಾಸ: ಅಸಲಿ ಸಾವಿನ ಸಂಖ್ಯೆಯಲ್ಲಿ ಪುತಿನ್ ಭಂಡತನರಷ್ಯಾದಲ್ಲಿ ಕೊರೊನಾ ಅಟ್ಟಹಾಸ: ಅಸಲಿ ಸಾವಿನ ಸಂಖ್ಯೆಯಲ್ಲಿ ಪುತಿನ್ ಭಂಡತನ

ರಷ್ಯಾ ಅಧ್ಯಕ್ಷರಿಗೆ ವಿಶೇಷ ಅಧಿಕಾರ ನೀಡಲಿರುವ ತಿದ್ದುಪಡಿ

ರಷ್ಯಾ ಅಧ್ಯಕ್ಷರಿಗೆ ವಿಶೇಷ ಅಧಿಕಾರ ನೀಡಲಿರುವ ತಿದ್ದುಪಡಿ

ಸದ್ಯ ಪ್ರಸ್ತಾವಿತ ತಿದ್ದುಪಡಿ ಪ್ರಕಾರ ರಷ್ಯಾದಲ್ಲಿ ಕಾನೂನು ಜಾರಿ ಸಂಸ್ಥೆಗಳ ಮುಖ್ಯಸ್ಥರನ್ನು ಫೆಡರೇಶನ್ ಕೌನ್ಸಿಲ್‌ನೊಂದಿಗೆ ಸಮಾಲೋಚಿಸಿ ಅಧ್ಯಕ್ಷರು ನೇಮಕ ಮಾಡಬೇಕು. ರಷ್ಯಾದ ಸಂಸತ್ತಿನ ಮೇಲ್ಮನೆ ಫೆಡರಲ್ ನ್ಯಾಯಾಧೀಶರನ್ನು ವಜಾಗೊಳಿಸುವ ಬಗ್ಗೆ ಅಧ್ಯಕ್ಷರೇ ಪ್ರಸ್ತಾಪಿಸಲು ಅವಕಾಶವಿದೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, ರಷ್ಯಾದ ಅಧ್ಯಕ್ಷರ ಪ್ರಸ್ತಾಪಗಳನ್ನು ಅನುಸರಿಸಿ ಸಾಂವಿಧಾನಿಕ ಮತ್ತು ಸುಪ್ರೀಂ ನ್ಯಾಯಾಲಯಗಳ ನ್ಯಾಯಾಧೀಶರನ್ನು ತೆಗೆದುಹಾಕುವ ಹಕ್ಕನ್ನು ಫೆಡರೇಶನ್ ಕೌನ್ಸಿಲ್ ಹೊಂದಿರುತ್ತದೆ.

ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿಯ ಪ್ರಮುಖಾಂಶಗಳು

ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿಯ ಪ್ರಮುಖಾಂಶಗಳು

ಇನ್ನು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಾಂಪ್ರದಾಯಿಕವಾಗಿ ಬದಲಾವಣೆಗಳನ್ನು ವಿರೋಧಿಸಿದ್ದರೂ ಸಂವಿಧಾನಕ್ಕೆ ಸುಮಾರು 200 ತಿದ್ದುಪಡಿಗಳನ್ನು ತರುವ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ರಷ್ಯಾ ಸಂವಿಧಾನದ ಪ್ರಮುಖ ತಿದ್ದುಪಡಿಗಳ ಪಟ್ಟಿ:

1. ರಷ್ಯಾದಲ್ಲಿ 2024ರ ನಂತರ ವ್ಲಾಡಿಮಿರ್ ಪುಟಿನ್ ಅವರ ಅಧಿಕಾರಾವಧಿಯನ್ನು ಮುಕ್ತಾಯಗೊಳ್ಳಲಿದ್ದು, 2036ರವರೆಗೂ ಅಧಿಕಾರ ವಿಸ್ತರಣೆ ಆಗಲಿದೆ. ಇದರ ಜೊತೆಗೆ ದೇಶದ ಯಾವುದೇ ಅತ್ಯುನ್ನತ ಹುದ್ದೆ ಅಲಂಕರಿಸಲು ಅವಕಾಶ ನೀಡುತ್ತದೆ. ಆರು ವರ್ಷಗಳ ಎರಡು ಅವಧಿಗೆ ಪುಟಿನ್ ಅಧ್ಯಕ್ಷರಾಗಿ ಮುಂದುವರಿಯುವುದಕ್ಕೆ ಅವಕಾಶ ನೀಡುವುದೂ ಆಗಿದೆ.

2. ರಷ್ಯಾ ಅಧ್ಯಕ್ಷರ ಅಧಿಕಾರವಧಿಯನ್ನು ನಾಲ್ಕು ವರ್ಷಗಳಿಂದ ಆರು ವರ್ಷಕ್ಕೆ ಏರಿಕೆ ಮಾಡಲಾಗಿದೆ.

3. ಪ್ರಸ್ತಾವಿತ ತಿದ್ದುಪಡಿಗಳಲ್ಲಿ ರಷ್ಯಾದ ಸಂವಿಧಾನವು ಅಂತರರಾಷ್ಟ್ರೀಯ ಕಾನೂನನ್ನು ಸ್ವಾಧೀನಪಡಿಸಿಕೊಳ್ಳುವ ನಿಬಂಧನೆಗಳನ್ನು ಒಳಗೊಂಡಿದೆ.

4. ನ್ಯಾಯಾಂಗ ಸೇರಿದಂತೆ ಉನ್ನತ ಸರ್ಕಾರಿ ಹುದ್ದೆಗಳನ್ನು ಅಲಂಕರಿಸುವ ವ್ಯಕ್ತಿಗಳಿಗೆ ವಿದೇಶಿ ಪೌರತ್ವ ಹಾಗೂ ನಿವಾಸಗಳನ್ನು ಹೊಂದಲು ಅವಕಾಶ ಕಲ್ಪಿಸಿ ಕೊಡುತ್ತದೆ.

5. ರಷ್ಯಾದ ಅಧ್ಯಕ್ಷೀಯ ಅಭ್ಯರ್ಥಿಯು ದೇಶದಲ್ಲಿ ಕನಿಷ್ಠ 25 ವರ್ಷಗಳ ಕಾಲ ವಾಸಿಸಬೇಕಾಗಿತ್ತು ಮತ್ತು ವಿದೇಶಿ ಪೌರತ್ವ ಅಥವಾ ರೆಸಿಡೆನ್ಸಿಯನ್ನು ಹೊಂದಿರಬಾರದು ಎಂಬ ನಿಯಮವನ್ನು ವಿಧಿಸಲಾಗಿದೆ.

6. ಕೆಲವು ಆರ್ಥಿಕ ಬದಲಾವಣೆಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಜೀವನಾಧಾರಕ್ಕೆ ಕಡಿಮೆಯಾಗದಂತೆ ಕನಿಷ್ಠಕ್ಕಿಂತ ಕಡಿಮೆಯಾಗದಂತೆ ವೇತನ ನಿಗದಿಗೊಳಿಸುವುದು.

7. ದೇಶದಲ್ಲಿ ಹಣದುಬ್ಬರಕ್ಕೆ ಅನುಗುಣವಾಗಿ ರಾಜ್ಯ ಪಿಂಚಣಿಗೆ ಹೊಂದಾಣಿಕೆ ಮಾಡುವುದು.

8. ಸಲಿಂಗಕಾಮಿ ವಿವಾಹವನ್ನು ನಿಷೇಧಿಸುವುದು.

ಪುಟಿನ್ ಅವರಿಗೆ ಮಾತ್ರ ತಿದ್ದುಪಡಿಯ ನಿಯಮ ಅನ್ವಯ

ಪುಟಿನ್ ಅವರಿಗೆ ಮಾತ್ರ ತಿದ್ದುಪಡಿಯ ನಿಯಮ ಅನ್ವಯ

ರಷ್ಯಾದಲ್ಲಿ ಈಗಾಗಲೇ ವ್ಲಾಡಿಮಿರ್ ಪುಟಿನ್ 2000 ಮೇ.7ರಿಂದ, 2008ರ ಮೇ.7ರವರೆಗೂ ಮೊದಲ ಅವಧಿಗೆ ಅಧ್ಯಕ್ಷರಾಗಿದ್ದರು. 2008ರ ಮೇ.7ರಿಂದ 2012ರ ಮೇ.7ರವರೆಗೂ ಡಿಮಿಟ್ರಿ ಮೆಡ್ವೆಡೆವ್ ರಷ್ಯಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವ್ಲಾಡಿಮಿರ್ ಪುಟಿನ್ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ತದನಂತರ ಮತ್ತೆ 2012ರ ಮೇ.7ರಂದು ರಷ್ಯಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ವ್ಲಾಡಿಮಿರ್ ಪುಟಿನ್ ಸೇವಾ ಅವಧಿಯು 2024ರ ಮೇ.7ಕ್ಕೆ ಮುಕ್ತಾಯಗೊಳ್ಳಲಿದೆ. ಇದಾಗಿಯೂ ರಷ್ಯಾ ಅಧ್ಯಕ್ಷರಾಗಿರುವ ಪುಟಿನ್, 2024ರ ನಂತರವೂ ಮುಂದಿನ 12 ವರ್ಷಗಳ ಕಾಲ ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎನ್ನುವ ಬಗ್ಗೆ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಮುಂಬರುವ ರಷ್ಯಾದ ಅಧ್ಯಕ್ಷರಿಗೆ ಈ ನಿಯಮವು ಅನ್ವಯವಾಗುವುದಿಲ್ಲ ಎಂದೇ ಸಾಂವಿಧಾನದ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.

ಪೂರ್ವ ಉಕ್ರೇನ್ ನಲ್ಲಿರುವ ರಷ್ಯನ್ನರಿಗೆ ಮತದಾನದ ಹಕ್ಕು

ಪೂರ್ವ ಉಕ್ರೇನ್ ನಲ್ಲಿರುವ ರಷ್ಯನ್ನರಿಗೆ ಮತದಾನದ ಹಕ್ಕು

ಜುಲೈ.01ರಂದು ರಷ್ಯಾದಲ್ಲಿ ನಡೆಯುವ ಜನಾಭಿಪ್ರಾಯ ಸಂಗ್ರಹ ಪ್ರಕ್ರಿಯೆಯಲ್ಲಿ ಪೂರ್ವ ಉಕ್ರೇನ್ ನಲ್ಲಿರುವ ಪ್ರಜೆಗಳಿಗೂ ವಿಶೇಷ ಅವಕಾಶವನ್ನು ನೀಡಲಾಗಿದೆ. ಈ ಹಿಂದೆಯೇ ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ಪೂರ್ವ ಉಕ್ರೇನ್‌ನಲ್ಲಿರುವ ರಷ್ಯಾದ ಪೌರತ್ವ ಹೊಂದಿರುವ ವ್ಯಕ್ತಿಗಳಿಗೆ ಮತ ಚಲಾಯಿಸಲು ಅನುಮತಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿ ಆಗಿದೆ.

ಸಾಂವಿಧಾನಿಕ ತಿದ್ದುಪಡಿ ಬಗ್ಗೆ ವಿಮರ್ಶಕರು ಹೇಳುವುದೇನು?

ಸಾಂವಿಧಾನಿಕ ತಿದ್ದುಪಡಿ ಬಗ್ಗೆ ವಿಮರ್ಶಕರು ಹೇಳುವುದೇನು?

ರಷ್ಯಾದಲ್ಲಿ ಅಧಿಕಾರದ ಗದ್ದುಗೆ ಉಳಿಸಿಕೊಳ್ಳುವುದಕ್ಕಾಗಿ 2024ರ ನಂತರ ತನ್ನ ಅಧಿಕಾರಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಲು ಈ ರೀತಿಯ ತಿದ್ದುಪಡಿಗಳನ್ನು ಮಾಡಲಾಗುತ್ತಿದೆ. ಆದರೆ ವ್ಲಾಡಿಮಿರ್ ಪುಟಿನ್ ಭಾವಿಸಿದಂತೆ ಎಲ್ಲವೂ ನಡೆಯುವುದಿಲ್ಲ. 2024ರ ನಂತರದಲ್ಲಿ ಈಗಿನಂತಾ ಚಿತ್ರಣವು ಇರುವುದಿಲ್ಲ. ಏಕೆಂದರೆ ಈ ಸಾಂವಿಧಾನಿಕ ಜನಾಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ಸರಳವಾಗಿರುವುದಿಲ್ಲ ಎಂದು ವಿಮರ್ಶಕರು ನಂಬಿದ್ದಾರೆ. ಪುಟಿನ್ ಅವರ ಅಧಿಕಾರಾವಧಿಯನ್ನು ಮೀರಿ ಅಧಿಕಾರದಲ್ಲಿ ಉಳಿಯುವ ಯೋಜನೆ ಇಲ್ಲ ಎಂದು ಸೂಚಿಸಿದ್ದಾರೆ.

ತಿದ್ದುಪಡಿ ಅಂಗೀಕಾರದ ಬಳಿಕ ಮತ್ತೇಕೆ ಜನಾಭಿಪ್ರಾಯ ಸಂಗ್ರಹ?

ತಿದ್ದುಪಡಿ ಅಂಗೀಕಾರದ ಬಳಿಕ ಮತ್ತೇಕೆ ಜನಾಭಿಪ್ರಾಯ ಸಂಗ್ರಹ?

ರಷ್ಯಾದ ಸಂಸತ್ತಿನ ಎರಡು ಕೆಳಮನೆ ಮತ್ತು ಮೇಲ್ಮನೆ ಸೇರಿದಂತೆ ಎರಡೂ ಸದನಗಳಲ್ಲಿ ಈ ಪ್ರಸ್ತಾಪಗಳನ್ನು ಈಗಾಗಲೇ ಅಂಗೀಕರಿಸಲಾಗಿದೆ. ರಷ್ಯಾ ಸಂವಿಧಾನಕ್ಕೆ ಈ ತಿದ್ದುಪಡಿ ಜಾರಿಗೊಳಿಸಲು ಕಾನೂನುಬದ್ಧವಾಗಿ ಯಾವುದೇ ಜನಾಭಿಪ್ರಾಯ ಸಂಗ್ರಹಣೆಯ ಅಗತ್ಯವಿಲ್ಲ. ಹೀಗಿದ್ದರೂ, ಪುಟಿನ್ ಅವರು ನ್ಯಾಯಸಮ್ಮತತೆ ನೀಡಲು ಉದ್ದೇಶದಿಂದಾಗಿ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಪ್ರಸ್ತಾಪಗಳ ಟೀಕೆಗಳನ್ನು ಸರ್ಕಾರಿ ಅಧಿಕಾರಿಗಳು ಶೀಘ್ರವಾಗಿ ಹೊಡೆದುರುಳಿಸಿದ್ದಾರೆ. ಈ ತಿದ್ದುಪಡಿಗಳನ್ನು ಅಂಗೀಕರಿಸುವಲ್ಲಿ ಪುಟಿನ್ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ವೀಕ್ಷಕರು ನಂಬುವುದಿಲ್ಲ. ಈ ಕ್ರಮಗಳು, ಪುಟಿನ್ ಅವರ ಅಧಿಕಾರಾವಧಿಯ ನಂತರವೂ ಸರ್ಕಾರದ ಮೇಲೆ ಪ್ರಭಾವ ಬೀರಲು ಯೋಜಿಸುತ್ತಿರುವುದರ ಸೂಚನೆ ಎಂದು ವಿಮರ್ಶಿಸಲಾಗುತ್ತಿದೆ.

ಕೊವಿಡ್-19 ಆತಂಕದಲ್ಲಿ ಜನಾಭಿಪ್ರಾಯ ಸಂಗ್ರಹ

ಕೊವಿಡ್-19 ಆತಂಕದಲ್ಲಿ ಜನಾಭಿಪ್ರಾಯ ಸಂಗ್ರಹ

ರಷ್ಯಾದಲ್ಲಿ ಜನಾಭಿಪ್ರಾಯ ಸಂಗ್ರಹದ ಪ್ರಕ್ರಿಯೆಗೆ ಚಾಲನೆ ಸಿಗುವುದಕ್ಕೆ ಇನ್ನೇನು ತುಂಬಾ ದಿನಗಳು ಉಳಿದಿಲ್ಲ. ಆದರೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಸೂಕ್ತವಾದ ವಾತಾವರಣವು ದೇಶಾದ್ಯಂತ ಯಾವುದೇ ಮೂಲೆಯಲ್ಲೂ ಇಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಸೋಂಕು ಅಂಟಿಕೊಳ್ಳುವ ಭೀತಿ ಹೆಜ್ಜೆ ಹೆಜ್ಜೆಗೂ ಕಾಡುತ್ತಿದೆ. ಯಾವಾಗ, ಯಾರಿಗೆ, ಯಾವ ರೂಪದಲ್ಲಿ ಮಹಾಮಾರಿ ಬೆನ್ನೇರುತ್ತದೆ ಎನ್ನುವ ಆತಂಕದಲ್ಲೇ ಜನರು ಜೀವನ ಸಾಗಿಸುವಂತಾ ವಾತಾವರಣ ಸೃಷ್ಟಿಯಾಗಿದೆ. ಇದರ ಮಧ್ಯದಲ್ಲೇ ಜನಾಭಿಪ್ರಾಯ ಸಂಗ್ರಹಿಸಲು ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಪ್ರತಿಯೊಬ್ಬ ಮತದಾರರಿಗೂ ಮುಖಕ್ಕೆ ಮಾಸ್ಕ್ ಹಾಗೂ ಪ್ರತ್ಯೇಕವಾಗಿ ಹಾಳೆ ಮತ್ತು ಪೆನ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಕೊರೊನಾವೈರಸ್ ಸೋಂಕಿಗೆ ರಷ್ಯಾ ತಲ್ಲಣ

ಕೊರೊನಾವೈರಸ್ ಸೋಂಕಿಗೆ ರಷ್ಯಾ ತಲ್ಲಣ

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ಸೋಂಕಿತರ ಪ್ರಮಾಣದ ಮೇಲೆ ಒಮ್ಮೆ ಬೆಳಕು ಚೆಲ್ಲಿದರೆ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ರಷ್ಯಾ ಮೂರನೇ ಸ್ಥಾನದಲ್ಲಿದೆ. ಅಂದರೆ ಶನಿವಾರದ ಅಂಕಿ-ಅಂಶಗಳ ಪ್ರಕಾರ ರಷ್ಯಾದಲ್ಲಿ 6,20,794ಕ್ಕೂ ಅಧಿಕ ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿರುವುದು ದೃಢಪಟ್ಟಿದೆ. ಈ ಪೈಕಿ 3,84,152 ಸೋಂಕಿತರು ಗುಣಮುಖರಾಗಿದ್ದರೆ, 2,27,861 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೇಶದಲ್ಲಿ ಇದುವರೆಗೂ 8,781ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ.

English summary
Russia Referendum: How Constitutional Change Give A Power To Putin Untill 2036.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X