ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ವಿದೇಶಿ ಕಾಂಡೋಮ್ ಗೆ ನಿಷೇಧ

By Vanitha
|
Google Oneindia Kannada News

ಮಾಸ್ಕೋ, ಆಗಸ್ಟ್ , 06 : ರಷ್ಯಾವು ವಿದೇಶದಲ್ಲಿ ತಯಾರಾಗುವ ವಿವಿಧ ವೈದ್ಯಕೀಯ ಉಪಕರಣಗಳ ಮೇಲೆ ನಿರಾಸಕ್ತಿ ವಹಿಸಿದ್ದು, ಅದರಲ್ಲಿ ಮುಖ್ಯವಾಗಿ ಕಾಂಡೋಮ್ ನ ಆಮದು ಮಾಡಿಕೊಳ್ಳುವುದಕ್ಕೆ ಸರ್ಕಾರ ಸಂಪೂರ್ಣ ನಿಷೇಧ ಹೇರಿದೆ.

ಇತ್ತೀಚಿನ ದಿನಗಳಲ್ಲಿ ಕಾಂಡೋಮ್ ನಿಂದ ಹೆಚ್ಐವಿ ಸೋಂಕು ಹರಡುವಿಕೆ ಅಧಿಕಗೊಳ್ಳುತ್ತಿರುವುದನ್ನು ಅರಿತ ರಷ್ಯಾ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಇದನ್ನು ತಡೆಗಟ್ಟುವಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನುಅನುಸರಿಸುತ್ತಿದೆ.[ಪಾರ್ಸಿಗಳಿಂದ ಕಾಂಡೋಮ್ ವಿರೋಧಿ ಅಭಿಯಾನ...!]

Russia proposes a ban on foreign-made condoms

ಸುಮಾರು 25 ರಿಂದ 35 ವಯೋಮಾನದವರು ಕಾಂಡೋಮ್ ಮೊರೆ ಹೋಗುತ್ತಿದ್ದು, 35 ವರ್ಷ ತುಂಬುವುದರೊಳಗೆ ಸಾವನ್ನಪ್ಪುತ್ತಿರುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾದ ರಷ್ಯಾ ಕಾಂಡೋಮ್ ನಿರ್ಬಂಧಕ್ಕೆ ಮುಂದಾಗಿದೆ.

ದೇಶದಲ್ಲಿ ಸುಮಾರು 5 ವರ್ಷಗಳಿಂದ ಹೆಚ್ಐವಿ ಸೋಂಕಿತರ ಸಂಖ್ಯೆ 2 ಮಿಲಿಯನ್‌ಗೆ ಏರಿದ್ದು, 2010ರಲ್ಲಿ 500,000 ಮಿಲಿಯನ್ ಇದ್ದದ್ದು, ಇದೀಗ ಸುಮಾರು 930,000ಗೆ ಹೆಚ್ಚಳವಾಗಿದೆ. ಅಲ್ಲದೆ ಅದರಲ್ಲಿ 192,000 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಏಡ್ಸ್ ಪರಿಣಿತ ಪ್ರೊಕೋವೊಸ್ಕಿ ತಿಳಿಸಿದ್ದಾರೆ.

ವೈದ್ಯರ ತಂಡ ಕೈಗೊಂಡ ಒಂದು ಅಧ್ಯಯನ ಪ್ರಕಾರ ಈ ಅಂಕಿ ಅಂಶಗಳು ದೊರೆತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ದೇಶದಲ್ಲಿ ಹೆಚ್ಐವಿ ಸೋಂಕು ಪೀಡಿತರ ಸಂಖ್ಯೆ ಸುಮಾರು 90,000 ಅಧಿಕಗೊಂಡಿದ್ದು, ಇದಕ್ಕೆ ರಬ್ಬರ್ ರೂಪದ ಕಾಂಡೋಮ್ ಪ್ರಮುಖ ಕಾರಣ ಎಂದು ವರದಿ ಸಲ್ಲಿಸಿದ್ದಾರೆ.

English summary
Russia proposes a ban on foreign-made condoms. Because these condoms has increased HIV infections in this year.HIV infections are on the rise in Russia—according to official statistics, 90,000 people contracted the virus last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X