ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಲಾದಿಮಿರ್ ಪುಟಿನ್ ಕಣ್ಣು ಮಂಜು, ಅವರು ಬದುಕೋದು ಮೂರೇ ವರ್ಷವಾ?

|
Google Oneindia Kannada News

ಮಾಸ್ಕೋ, ಮೇ 31: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಆವರಿಸಿರುವ ಕ್ಯಾನ್ಸರ್ ಕಾಯಿಲೆ ಗಂಭೀರವಾಗಿ ಸ್ವರೂಪಕ್ಕೆ ತಿರುಗಿದೆ. ಅವರ ದೃಷ್ಟಿ ಮಂಜಾಗುತ್ತಿದೆ. ಅವರಿಗೆ ಬದುಕಲು ಕೇವಲ ಮೂರು ವರ್ಷದ ಸಮಯಾವಕಾಶ ಇದೆ ಎಂದು ರಷ್ಯಾದ ಭದ್ರತಾ ಸಂಸ್ಥೆ ಎಫ್‌ಎಸ್‌ಬಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.

ವ್ಲಾದಿಮಿರ್ ಪುಟಿನ್ ಅವರಿಗೆ ಅನಾರೋಗ್ಯ ಇದೆ. ಕ್ಯಾನ್ಸರ್ ಕಾಯಿಲೆ ಬಾಧಿಸುತ್ತಿದೆ ಎಂಬ ಸುದ್ದಿ ಹಲವು ವರ್ಷಗಳಿಂದಲೂ ಚಾಲನೆಯಲ್ಲಿವೆ. ಈಗ ಹೊರಗೆ ಕಾಣಿಸುತ್ತಿರುವುದು ಅಸಲಿ ಪುಟಿನ್ ಅಲ್ಲ, ಬಾಡಿ ಡಬಲ್ ಮಾತ್ರ ಎಂಬಂತಹ ಸುದ್ದಿಗಳೂ ಇವೆ. ಅದೇನೇ ಆದರೂ ಪುಟಿನ್ ಅವರಿಗೆ ಗಂಭೀರ ಸ್ವರೂಪದ ಕಾಯಿಲೆ ಇದೆ ಎನ್ನುವ ಸುದ್ದಿ ಮಾತ್ರ ಬಹಳ ದಟ್ಟವಾಗಿ ಹಬ್ಬಿದೆ. ಆದರೆ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೋವ್ ಈ ಎಲ್ಲಾ ಸುದ್ದಿಯನ್ನೂ ಗಾಳಿಸುದ್ದಿ ಎಂದು ತಳ್ಳಿಹಾಕಿದ್ದಾರೆ. ಪುಟಿನ್ ಅವರಿಗೆ ಕಾಯಿಲೆ ಇರುವ ಯಾವ ಲಕ್ಷಣವೂ ತೋರುತ್ತಿಲ್ಲ ಎಂದಿದ್ದಾರೆ.

ತಮ್ಮ ದೇಶದ ಸೈನಿಕರನ್ನು ಭೇಟಿಯಾದ ರಷ್ಯಾ ಅಧ್ಯಕ್ಷ ಪುಟಿನ್ತಮ್ಮ ದೇಶದ ಸೈನಿಕರನ್ನು ಭೇಟಿಯಾದ ರಷ್ಯಾ ಅಧ್ಯಕ್ಷ ಪುಟಿನ್

ಬ್ರಿಟನ್ ದೇಶದ ಇಂಡಿಪೆಂಡೆಂಟ್ ಪತ್ರಿಕೆ ಎಫ್‌ಎಸ್‌ಬಿ ಅಧಿಕಾರಿ ಮತ್ತು ಮಾಜಿ ರಷ್ಯನ್ ಗೂಢಚಾರಿ ಬೋರಿಸ್ ಕಾರ್ಪಿಶ್‌ಕೋವ್ ನಡುವೆ ರವಾನೆಯಾಗಿತ್ತೆನ್ನಲಾದ ಸಂದೇಶದ ಅಂಶಗಳನ್ನು ಆಧರಿಸಿ ಪುಟಿನ್‌ಗೆ ಕ್ಯಾನ್ಸರ್ ಇರಬಹುದು ಎಂದು ವರದಿ ಮಾಡಿದೆ.

Russia President Vladimir Putin Has 3 Years to Live, Says a Report

ಓದಲು ದಪ್ಪ ಅಕ್ಷರ:
"ಅವರಿಗೆ ತಲೆನೋವು ಇದೆ ಎಂದು ನಮಗೆ ತಿಳಿಸಲಾಗಿದೆ. ಅವರು ಟಿವಿಯಲ್ಲಿ ಮಾತನಾಡುವಾಗ ದೊಡ್ಡ ಅಕ್ಷರಗಳನ್ನು ಬರೆಯಲಾಗಿರುವ ಕಾಗದಗಳ ಸಹಾಯ ಪಡೆಯುತ್ತಾರೆ. ಆ ಅಕ್ಷರಗಳು ಎಷ್ಟು ದೊಡ್ಡದಿರುತ್ತವೆ ಎಂದರೆ ಒಂದೆರಡು ವಾಕ್ಯಗಳೇ ಇಡೀ ಪುಟ ತುಂಬಿಬಿಡುತ್ತವೆ. ಅವರ ದೃಷ್ಟಿ ಬಹಳ ಮಂದವಾಗುತ್ತಿದೆ" ಎಂದು ಮಾಜಿ ಗೂಢಚಾರಿ ಮತ್ತು ಎಫ್‌ಎಸ್‌ಬಿ ಅಧಿಕಾರಿ ಮಧ್ಯೆ ರವಾನೆಯಾದ ಸಂದೇಶದ ಒಂದು ಭಾಗದಲ್ಲಿ ಬರೆಯಲಾಗಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದರ ವರದಿ ಹೇಳುತ್ತಿದೆ.

ರಷ್ಯಾದಲ್ಲಿ ಸಿಲುಕಿಕೊಂಡಿದೆ ಭಾರತೀಯ ತೈಲ ಕಂಪನಿಗಳ ಕೋಟಿ ಕೋಟಿ ಹಣರಷ್ಯಾದಲ್ಲಿ ಸಿಲುಕಿಕೊಂಡಿದೆ ಭಾರತೀಯ ತೈಲ ಕಂಪನಿಗಳ ಕೋಟಿ ಕೋಟಿ ಹಣ

ಇನ್ನೂ ಹಲವು ಮಾಧ್ಯಮಗಳು ಪುಟಿನ್ ಅನಾರೋಗ್ಯದ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿವೆ. ರಷ್ಯನ್ ಅಧ್ಯಕ್ಷರ ಕಾಲುಗಳು ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ನಡುಗುತ್ತಿರುತ್ತವೆ ಎಂದು ಕೆಲ ವರದಿಗಳು ತಿಳಿಸುತ್ತಿವೆ. ಇನ್ನು, ಬ್ರಿಟನ್ ದೇಶದ ಎಕ್ಸ್‌ಪ್ರೆಸ್ ಪತ್ರಿಕೆ, ಇತ್ತೀಚೆಗೆ ಪುಟಿನ್ ಹೊಟ್ಟೆಯೊಳಗೆ ಇದ್ದ ನೀರನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ವರದಿ ಮಾಡಿದೆ.

'ಪುಟಿನ್ ದಿನವೂ ಕಾಣಿಸಿಕೊಳ್ಳುತ್ತಾರಲ್ಲ'
ಇವೆಲ್ಲವೂ ವ್ಲಾದಿಮಿರ್ ಪುಟಿನ್ ಅವರಿಗೆ ಅನಾರೋಗ್ಯ ಕಾಡುತ್ತಿರಬಹುದೆಂದು ಸಂಶಯ ಹುಟ್ಟಿಸುತ್ತವೆ. ಆದರೆ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೋವ್ ಈ ಸುದ್ದಿಗಳೆಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. "ಪುಟಿನ್ ಅವರಲ್ಲಿ ಅನಾರೋಗ್ಯ ಇರಬಹುದು ಎಂದು ಬುದ್ಧಿ ಇರುವ ಯಾವ ವ್ಯಕ್ತಿಗೂ ಅನಿಸದು" ಎಂದು ಫ್ರಾನ್ಸ್‌ನ ಮಾಧ್ಯಮವೊಂದಕ್ಕೆ ಲಾವ್ರೋವ್ ತಿಳಿಸಿದ್ದಾರೆ.

Russia President Vladimir Putin Has 3 Years to Live, Says a Report

"ಪುಟಿನ್ ಪ್ರತೀ ದಿನವೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಪರದೆ ಮೇಲೆ ಅವರು ಅವರನ್ನು ನೋಡಬಹುದು, ಅವರು ಭಾಷಣ ಮಾಡುವುದನ್ನು ಕೇಳಬಹುದು," ಎಂದು ರಷ್ಯನ್ ವಿದೇಶಾಂಗ ಸಚಿವರು ವಾದಿಸಿದ್ದಾರೆ.

ಅಮೆರಿಕ ರಷ್ಯಾ ವೈರತ್ವ
ಇಪತ್ತಕ್ಕೂ ಹೆಚ್ಚು ವರ್ಷಗಳಿಂದ ರಷ್ಯಾದಲ್ಲಿ ಆಡಳಿತ ನಡೆಸುತ್ತಿರುವ ವ್ಲಾದಿಮಿರ್ ಪುಟಿನ್ ನೇತೃತ್ವದ ಸರಕಾರ ಕಳೆದ ಕೆಲ ವರ್ಷಗಳಿಂದ ಆಕ್ರಮಕಾರಿ ಧೋರಣೆ ತೋರಿದೆ. ರಷ್ಯಾ ಮತ್ತು ಅಮೆರಿಕ ನಡುವೆ ತೊಂಬತ್ತರ ದಶಕಕ್ಕಿಂತ ಮುಂಚೆ ಇದ್ದಂತಹ ಶೀತಲ ಸಮರ ಮತ್ತೆ ಪ್ರಾರಂಭವಾಗುವ ಸುಳಿವು ಇದೆ. ಆದರೆ, ಸೋವಿಯತ್ ರಷ್ಯಾ ಎಂಬ ಬೃಹತ್ ಕಮ್ಯೂನಿಸ್ಟ್ ರಾಷ್ಟ್ರ ಪತನಗೊಂಡ ಬಳಿಕ ಉಳಿದಿರುವ ಈಗಿನ ರಷ್ಯಾ ಅಷ್ಟು ಸುದೃಢವಾಗಿಲ್ಲ ಎಂಬ ಮಾತಿದೆ. ಆದರೆ, ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ವಿರುದ್ಧ ಅಮೆರಿಕ ಹಾಗೂ ಮಿತ್ರರಾಷ್ಟ್ರಗಳು ಒಟ್ಟಾಗಿ ನಿಂತು ಉಕ್ರೇನ್ ದೇಶಕ್ಕೆ ಯುದ್ಧದಲ್ಲಿ ನೆರವು ನೀಡುತ್ತಿವೆ. ರಷ್ಯಾ ವಿರುದ್ಧ ಅಮೆರಿಕ ನೇರವಾಗಿ ಯುದ್ಧ ಮಾಡದಿದ್ದರೂ ಉಕ್ರೇನ್ ಮಿಲಿಟರಿಗೆ ಅಗತ್ಯ ಸಹಾಯ ಒದಗಿಸುತ್ತಿದೆ. ರಷ್ಯಾ ವಿರುದ್ಧ ಅನೇಕ ದೇಶಗಳು ಆರ್ಥಿಕ ದಿಗ್ಬಂಧನ ಹಾಕಿವೆ.

(ಒನ್ಇಂಡಿಯಾ ಸುದ್ದಿ)

English summary
A Russian intelligence officer has claimed that President Vladimir Putin has been given three years to live as he has a "rapidly progressing cancer".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X