ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿರುದ್ಧ ಭಾರತಕ್ಕೆ ಬೆಂಬಲ, ಇಂಡಿಯಾಗೆ ಪುಟಿನ್ ವಿಸಿಟ್..!

|
Google Oneindia Kannada News

ಚೀನಾ ಹೆಸರು ಕೇಳಿದರೆ ಸಾಕು ಉರಿದು ಬೀಳದ ದೇಶವಿಲ್ಲ. ಏಕೆಂದರೆ ಚೀನಿಯರ ವರ್ತನೆ ಹಾಗೂ ಅವರ ಆಕ್ರಮಣಕಾರಿ ಮನೋಭಾವ ಯಾರಿಗೂ ಹಿಡಿಸುವುದಿಲ್ಲ. ಅದರಲ್ಲೂ ಚೀನಾದ ನೆರೆ ರಾಷ್ಟ್ರಗಳು ಡ್ರ್ಯಾಗನ್‌ನ ಕಿರುಕುಳಕ್ಕೆ ಬಲಿಯಾಗುತ್ತಲೇ ಇವೆ. ಹೀಗೆ ಭಾರತದ ಗಡಿಯಲ್ಲಿ ಚೀನಾ ಕಿರಿಕಿರಿ ಮಾಡುತ್ತಿರುವಾಗಲೇ ರಷ್ಯಾ ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಿನ ವರ್ಷ ಅಂದರೆ 2021ರಲ್ಲಿ ಭಾರತಕ್ಕೆ ಬರಲಿದ್ದು, ರಷ್ಯಾ-ಭಾರತದ ನಡುವೆ ಮಹತ್ವದ ವ್ಯಾಪಾರ ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆ ದಟ್ಟವಾಗಿದೆ. ಇನ್ನು ಈ ಬಗ್ಗೆ ಭಾರತಕ್ಕೆ ರಷ್ಯಾ ರಾಯಭಾರಿಯಾಗಿರುವ ನಿಕೋಲಾಯ್ ಕುದಶೇವ್ ಮಾಹಿತಿ ನೀಡಿದ್ದಾರೆ.

ಕೊರೊನಾ ಲಸಿಕೆ ರಾಜಕೀಯಗೊಳಿಸಬೇಡಿ: ಪುಟಿನ್ ಎಚ್ಚರಿಕೆಕೊರೊನಾ ಲಸಿಕೆ ರಾಜಕೀಯಗೊಳಿಸಬೇಡಿ: ಪುಟಿನ್ ಎಚ್ಚರಿಕೆ

ಭಾರತದ ಜೊತೆ ಮಾತುಕತೆ ಮತ್ತು ಸಂಬಂಧ ವೃದ್ಧಿಗೆ ರಷ್ಯಾ ಸದಾ ಸಿದ್ಧವಾಗಿದೆ. ಆದ್ರೆ ಕೊರೊನಾ ಕಾರಣಕ್ಕೆ 2020ರಲ್ಲಿ ಇದು ಅಂದುಕೊಂಡಷ್ಟರ ಮಟ್ಟಿಗೆ ಸಾಧ್ಯವಾಗಲಿಲ್ಲ. ಹಾಗೇ ಪುಟಿನ್ ಭೇಟಿ ಕೂಡ ಸಾಧ್ಯವಾಗಲಿಲ್ಲ. ಆದರೆ 2021ರ ಮೊದಲ 6 ತಿಂಗಳ ಒಳಗೆ (ಅಂದರೆ ಮೇ-ಜೂನ್ ಒಳಗೆ) ರಷ್ಯಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ನಿಕೋಲಾಯ್ ಕುದಶೇವ್ ಮಾಹಿತಿ ನೀಡಿದ್ದಾರೆ.

 ಭಾರತಕ್ಕೆ ಭರ್ಜರಿ ಲಾಭ..!

ಭಾರತಕ್ಕೆ ಭರ್ಜರಿ ಲಾಭ..!

ಅತ್ತ ನರಿಬುದ್ಧಿ ಚೀನಾ ಭಾರತಕ್ಕೆ ಪ್ರತಿನಿತ್ಯ ಗಡಿಯಲ್ಲಿ ತೊಂದರೆ ಕೊಡುತ್ತಿದೆ. ಇತ್ತ ರಷ್ಯಾ ಭಾರತದ ಜೊತೆಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾಗುತ್ತಿರುವುದು ಡ್ರ್ಯಾಗನ್ ನಾಡಿಗೆ ನುಂಗಲಾರದ ತುತ್ತಾಗಿದೆ. ಏಕೆಂದರೆ ರಷ್ಯಾ ಬಲಿಷ್ಠ ರಾಷ್ಟ್ರವಾಗಿದ್ದು, ಜಗತ್ತಿನಲ್ಲಿ ಚೀನಾ ಯಾರದ್ದಾದರೂ ಮಾತು ಕೇಳುತ್ತೆ ಅನ್ನೋದಾದರೆ ಅದು ರಷ್ಯಾದ ಮಾತನ್ನು ಮಾತ್ರ. ಹೀಗಾಗಿ ಭಾರತದ ಜೊತೆ ರಷ್ಯಾ ಸಂಬಂಧ ವೃದ್ಧಿಗೆ ಮುಂದಾಗುತ್ತಿರುವುದು ಡ್ರ್ಯಾಗನ್‌ಗೆ ಶಾಕ್ ನೀಡಿದಂತಾಗಿದೆ. ಒಪ್ಪಂದ ಭಾರತಕ್ಕೆ ಲಾಭ ತಂದುಕೊಡುವ ಜೊತೆಗೆ, ಚೀನಾದ ಗಡಿಯಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಸಹಕಾರಿಯಾಗಲಿದೆ.

 ‘ಯುರೇಷಿಯಾ’ ಜೊತೆ ಮುಕ್ತ ವ್ಯಾಪಾರ

‘ಯುರೇಷಿಯಾ’ ಜೊತೆ ಮುಕ್ತ ವ್ಯಾಪಾರ

ಪುಟಿನ್ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಮುಖವಾಗಿ 'ಯುರೇಷಿಯಾ' ಜೊತೆ ಮುಕ್ತ ವ್ಯಾಪಾರಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. 'ಯುರೇಷಿಯಾ' ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿಯನ್ನ ಹಾಕಿದರೆ, ರಷ್ಯಾ ಸೇರಿದಂತೆ ಅರ್ಮೇನಿಯಾ, ಬೆಲಾರಸ್, ಕಜಖಸ್ತಾನ್, ಕಿರ್ಗಿಸ್ತಾನ್ ದೇಶಗಳ ಜೊತೆಯಲ್ಲಿ ಮುಕ್ತ ವ್ಯಾಪಾರ ನಡೆಸಲು ಸಹಕಾರಿಯಾಗಲಿದೆ. ಇದು ಚೀನಾಗೆ ತಿರುಗೇಟು ನೀಡುವ ಜೊತೆಗೆ ಭಾರತಕ್ಕೂ ಸಹಕಾರಿಯಾಗಲಿದೆ. ಭವಿಷ್ಯದ ದೃಷ್ಟಿಯಿಂದ ಇದು ಮಹತ್ವದ ಒಪ್ಪಂದವಾಗಲಿದೆ.

ರಷ್ಯಾ ಅಧ್ಯಕ್ಷ ಸ್ಥಾನ ತೊರೆಯಲು ಮುಂದಾದ ವ್ಲಾದಿಮಿರ್ ಪುಟಿನ್ ?ರಷ್ಯಾ ಅಧ್ಯಕ್ಷ ಸ್ಥಾನ ತೊರೆಯಲು ಮುಂದಾದ ವ್ಲಾದಿಮಿರ್ ಪುಟಿನ್ ?

 ‘ಯುರೇಷಿಯಾ’ ತೈಲ ಸಮೃದ್ಧ ಪ್ರದೇಶ

‘ಯುರೇಷಿಯಾ’ ತೈಲ ಸಮೃದ್ಧ ಪ್ರದೇಶ

ಜಗತ್ತಿನಲ್ಲಿ ಅಪಾರ ಪ್ರಮಾಣದ ತೈಲ ಅಡಗಿರುವುದು ಅರಬ್ ರಾಷ್ಟ್ರಗಳಲ್ಲಿ. ಇನ್ನು ಈ ಅರಬ್ ರಾಷ್ಟ್ರಗಳನ್ನು ಹೊರತುಪಡಿಸಿದರೆ 'ಯುರೇಷಿಯಾ' ಭಾಗದಲ್ಲಿ ಭಾರಿ ಪ್ರಮಾಣದ ತೈಲ ನಿಕ್ಷೇಪಗಳು ಅಡಗಿವೆ. ತೈಲವನ್ನು ಆಮದು ಮಾಡಿಕೊಳ್ಳಲು ಭಾರತಕ್ಕೆ ಈ ಮೂಲಕ ಸುಲಭದ ದಾರಿ ಸಿಗಲಿದೆ. ಭವಿಷ್ಯದಲ್ಲಿ ಅರಬ್ ರಾಷ್ಟ್ರಗಳ ಮೇಲಿನ ಅವಲಂಬನೆ ಕೂಡ ಇದರಿಂದ ತಗ್ಗಬಹುದು. ಇದೀಗ ಇರಾನ್ ಚೀನಾದ ಮಾತು ಕೇಳಿ ಭಾರತದ ಸ್ನೇಹದಿಂದ ದೂರ ಓಡುತ್ತಿದೆ. ಹೀಗಾಗಿ 'ಯುರೇಷಿಯಾ' ರಾಷ್ಟ್ರಗಳ ಸಹಕಾರ ಸಿಕ್ಕರೆ ಭಾರತಕ್ಕೆ ಇರಾನ್‌ನ ಅಗತ್ಯತೆ ಇರುವುದೇ ಇಲ್ಲ.

ಶಸ್ತ್ರಾಸ್ತ್ರ, ಸೇನಾ ಸಹಕಾರ ಒಪ್ಪಂದ

ಶಸ್ತ್ರಾಸ್ತ್ರ, ಸೇನಾ ಸಹಕಾರ ಒಪ್ಪಂದ

2021ರ ಪುಟಿನ್ ಭೇಟಿ ವೇಳೆ ಮತ್ತೊಂದು ಮಹತ್ವದ ಒಪ್ಪಂದ ನಡೆಯುವ ಸಾಧ್ಯತೆ ದಟ್ಟವಾಗಿದೆ. ಭಾರತಕ್ಕೆ ಹಲವು ದಶಕಗಳಿಂದಲೂ ರಷ್ಯಾ ಸೇನಾ ಸರಕುಗಳನ್ನ ಪೂರೈಕೆ ಮಾಡುತ್ತಾ ಬಂದಿದೆ. ಈ ಸಂಬಂಧ ಮತ್ತಷ್ಟು ವೃದ್ಧಿಸುವ ಕುರಿತು ಮಾತುಕತೆ ನಡೆಯಬಹುದು.

ಹಾಗೇ ಸೇನಾ ಒಪ್ಪಂದಗಳ ಪರಿಣಾಮ ಗಡಿಯಲ್ಲಿ ಚೀನಾದ ಪ್ರಭಾವ ತಗ್ಗಿಸಲು ಎರಡೂ ರಾಷ್ಟ್ರಗಳು ಮಾಸ್ಟರ್ ಪ್ಲಾನ್ ಮಾಡಬಹುದು. ಏಕೆಂದರೆ ರಷ್ಯಾ ಕೂಡ ಚೀನಾದ ಜೊತೆ ಅಂತರ ಕಾಯ್ದುಕೊಳ್ಳುತ್ತಲೇ ಬಂದಿದೆ. ಹಿಂದೆ ಚೀನಾ ರಷ್ಯಾ ಬೆನ್ನಿಗೆ ಚೂರಿ ಹಾಕಿದ್ದನ್ನ ಸ್ಮರಿಸಬಹುದು. ಇದೇ ಕಾರಣಕ್ಕೆ ರಷ್ಯಾ ಚೀನಾ ಮೇಲೆ ಅಷ್ಟೊಂದು ನಂಬಿಕೆ ಇಡಲು ಸಿದ್ಧವಿಲ್ಲ. ಪರಿಣಾಮ ತನ್ನ ಬಹುಕಾಲದ ಗೆಳೆಯ ಭಾರತದ ಜೊತೆ ರಷ್ಯಾ ಸಂಬಂಧ ವೃದ್ಧಿಗೆ ಯೋಜನೆಗಳನ್ನ ರೂಪಿಸುತ್ತಾ ಬಂದಿದೆ.

English summary
Russian President Vladimir Putin has scheduled a visit to India. Russia's ambassador to India said Putin is likely to visit India within the first six months of 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X