ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಿನ್ ಗೆ ಭರ್ಜರಿ ಜಯ, ನಾಲ್ಕನೇ ಅವಧಿಗೆ ರಷ್ಯಾ ಅಧ್ಯಕ್ಷ ಸ್ಥಾನ

By Sachhidananda Acharya
|
Google Oneindia Kannada News

ಮಾಸ್ಕೊ, ಮಾರ್ಚ್ 19: ವ್ಲಾಡಿಮಿರ್ ಪುಟಿನ್ ನಾಲ್ಕನೇ ಅವಧಿಗೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸದ್ಯದ ಮತ ಎಣಿಕೆ ಪ್ರಕಾರ ಭಾನುವಾರ ನಡೆದ ಮತದಾನದಲ್ಲಿ ಅವರು ಶೇಕಡಾ 76 ಮತಗಳನ್ನು ಪಡೆದಿದ್ದು ಭರ್ಜರಿ ಜಯದತ್ತ ಮುನ್ನಡೆದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಮೂಲಕ ಇನ್ನೂ 6 ವರ್ಷಗಳ ಅವಧಿಗೆ ಪುಟಿನ್ ರಷ್ಯಾ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅವರ ಪ್ರತಿಸ್ಪರ್ಧಿ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಪಾವೆಲ್ ಗ್ರುಡಿನಿನ್ ಶೇಕಡಾ 13 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಇನ್ನು ನ್ಯಾಷನಲಿಸ್ಟ್ ಪಕ್ಷದ ವ್ಲಾಡಿಮಿರ್ ಝಿರಿನೊವ್ಸ್ಕಿ ಶೇಕಡಾ 6 ಮತಗಳನ್ನು ಮಾತ್ರ ಪಡೆದಿದ್ದಾರೆ.

ಇಂಗ್ಲೆಂಡ್ ನಿಂದ ರಷ್ಯಾದ 23 ಅಧಿಕಾರಿಗಳ ಗಡಿಪಾರು!ಇಂಗ್ಲೆಂಡ್ ನಿಂದ ರಷ್ಯಾದ 23 ಅಧಿಕಾರಿಗಳ ಗಡಿಪಾರು!

ಇಲ್ಲಿಯವರೆಗೆ ಅರ್ಧಕ್ಕಿಂತ ಹೆಚ್ಚು ಮತಪತ್ರಗಳನ್ನು ಲೆಕ್ಕಹಾಕಲಾಗಿದ್ದು ಪುಟಿನ್ ಜಯ ಸಾಧಿಸುವುದು ಬಹುತೇಕ ನಿಕ್ಕಿಯಾಗಿದೆ.

Russia: President Putin easily wins his forth term

ತಾವು ಜಯ ಸಾಧಿಸುವುದು ಖಚಿತವಾಗುತ್ತಿದ್ದಂತೆ ಮನೆಝನ್ಯಾ ಸ್ಕ್ವಾರ್ ನಲ್ಲಿ ಸಾವಿರಾರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪುಟನ್ ಚುನಾವಣಾ ಫಲಿತಾಂಶಕ್ಕಾಗಿ ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಮೆರಿಕಕ್ಕೆ ರಾಜತಾಂತ್ರಿಕ ಪೆಟ್ಟು ಕೊಟ್ಟ ವ್ಲಾಡಿಮಿರ್ ಪುಟಿನ್ಅಮೆರಿಕಕ್ಕೆ ರಾಜತಾಂತ್ರಿಕ ಪೆಟ್ಟು ಕೊಟ್ಟ ವ್ಲಾಡಿಮಿರ್ ಪುಟಿನ್

ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ 59.5 ಮತದಾನವಾಗಿದೆ. ಆರಂಭದಲ್ಲಿ ತೀರಾ ನಿಧಾನಗತಿಯ ಮತದಾನ ನಡೆದಿತ್ತು. ಆದರೆ ನಂತರ ಜನರು ಮತದಾನ ಕೇಂದ್ರಗಳತ್ತ ಬಂದು ಮತಚಲಾಯಿಸಿದ್ದರಿಂದ ಮತದಾನ ಪ್ರಮಾಣ ಅರ್ಧಶತಕವನ್ನು ದಾಟಿತು. ಮತಪತ್ರಗಳ ಎಣಿಕೆ ನಡೆಯುತ್ತಿದ್ದು ಅಂತಿಮ ಫಲಿತಾಂಶ ಹೊರಬೀಳಬೇಕಿದೆ.

English summary
Vladimir Putin is now leading with over 76% of the vote. Communist Party candidate Grudinin is running second with close to 12% as per Russian Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X